ಬೆಂಗಳೂರು:ಹುಲಿ ಉಗುರು ಪೆಂಡೆಂಟ್​ ಧರಿಸಿದ ಆರೋಪದ ಮೇಲೆ ಬಿಗ್​ಬಾಸ್​ ಮನೆಯಿಂದಲೇ ಬಂಧನವಾಗಿದ್ದ ವರ್ತೂರು​ ಸಂತೋಷ್​ಗೆ ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯ ಜಾಮೀನು ನೀಡಿದೆ. ಇದೀಗ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಏನೆಂದರೆ, ಸಂತೋಷ್​ ಮತ್ತೆ ಬಿಗ್​ಬಾಸ್​ ಮನೆಗೆ ಹೋಗ್ತಾರಾ ಎಂಬುದು.
ಸಂತೋಷ್​ ಅವರಿಗೆ 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ಒದಗಿಸುವಂತೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಸಂತೋಷ್​ ಬಿಡುಗಡೆಯಾಗಲಿದ್ದಾರೆ. ಅವರನ್ನು ಕರೆದುಕೊಂಡು ಹೋಗಲು ಕಲರ್ಸ್​ ಕನ್ನಡ ಚಾನೆಲ್​ ವತಿಯಿಂದ ಕಾರೊಂದು ಜೈಲಿನ ಬಳಿ ನಿಂತಿದ್ದು, ಸಂತೋಷ್​ ಮತ್ತೆ ಬಿಗ್​ಬಾಸ್​ ಮನೆ ತಲುಪುದು ಖಚಿತವಾಗಿದೆ.
ಅ. 8ರಂದು ಆರಂಭವಾದ ಬಿಗ್​ಬಾಸ್​ 10ನೇ ಸೀಸನ್​ನಲ್ಲಿ ಸಂತೋಷ್​ ಭಾಗವಹಿಸಿದ್ದರು. ಶೋ ಆರಂಭದ ಪ್ರೀಮಿಯರ್​ ಕಾರ್ಯಕ್ರಮದಲ್ಲಿ ಹುಲಿ ಉಗುರು ಧರಿಸೇ ಸಂತೋಷ್​ ದೊಡ್ಮನೆ ಪ್ರವೇಶ ಮಾಡಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಬಳಿಕ ಬಿಗ್​ಬಾಸ್​ ಮನೆಯಿಂದಲೇ ಸಂತೋಷ್​ ಅವರನ್ನು ಅ.22ರ ಭಾನುವಾರದಂದು ಬಂಧಿಸಲಾಗಿತ್ತು.
ಸಂತೋಷ್​ ಬಂಧನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹುಲಿ ಉಗುರು ಪ್ರಕರಣ ಸಾಕಷ್ಟು ಸದ್ದು ಮಾಡಿತು. ದರ್ಶನ್​, ಜಗ್ಗೇಶ್​, ನಿಖಿಲ್​ ಕುಮಾರಸ್ವಾಮಿ, ರಾಕ್​ಲೈನ್​ ವೆಂಕಟೇಶ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಹೆಸರು ಕೂಡ ಈ ಪ್ರಕರಣದಲ್ಲಿ ಪ್ರಸ್ತಾಪವಾಯಿತು. ಈಗಲೂ ಹುಲಿ ಉಗುರು ಪ್ರಕರಣ ಚರ್ಚೆಯಾಗುತ್ತಲೇ ಇದೆ. ಇದರ ನಡುವೆ ಸಂತೋಷ್​ಗೆ ಷರತ್ತುಬದ್ಧ ಜಾಮೀನು ದೊರೆತಿದ್ದು, ಮತ್ತೆ ಬಿಗ್​ಬಾಸ್​ ಮನೆ ಪ್ರವೇಶ ಮಾಡುವುದು ಖಚಿತವಾಗಿದೆ. ಕ್ಯಾಮೆರಾ ಮುಂದೆ ಕಾಣಿಸಿಕೊಂಡ ಬಳಿಕ ಸಂತೋಷ್​ ತಮ್ಮ ಬಂಧನದ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲವೂ ಸಹ ಎಲ್ಲರಲ್ಲೂ ಮನೆ ಮಾಡಿದೆ.
ಅಂದಹಾಗೆ ಹಳ್ಳಿಕಾರ್​ ತಳಿಯ ಹಸುಗಳ ಸಂರಕ್ಷಣೆ ಮಾಡುವ ಮೂಲಕ ವರ್ತೂರು ಸಂತೋಷ್​ ಜನಪ್ರಿಯತೆ ಗಳಿಸಿದ್ದರು. ಇದೇ ಕಾರಣಕ್ಕೆ ಅವರು ಬಿಗ್​ ಬಾಸ್​ಗೆ ಆಯ್ಕೆ ಆಗಿದ್ದರು. ಟ್ರೋಫಿ ಗೆಲ್ಲಬೇಕು ಎಂಬ ಆಸೆಯಿಂದ ಅವರು ಬಿಗ್ ಮನೆ ಪ್ರವೇಶಿಸಿದ್ದರು. ಆದರೆ ಅವರು ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್​ ಮೇಲೆ ಅರಣ್ಯಾಧಿಕಾರಿಗಳ ಕಣ್ಣು ಬಿದ್ದಿದ್ದರಿಂದ ಅಕ್ಟೋಬರ್ 22ರ ರಾತ್ರಿ ಬಿಗ್​ ಬಾಸ್​ ಮನೆಗೆ ಹೋಗಿ ಅವರನ್ನು ಬಂಧಿಸಲಾಯಿತು. ನಂತರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈಗ ಜಾಮೀನು ಸಿಕ್ಕಿದೆ.
ಹುಲಿ ಉಗುರು ಲಾಕೆಟ್​​​ ಪ್ರಕರಣ; ಜೈಲು ಸೇರಿದ್ದ ಬಿಗ್​ ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​​​​ಗೆ ಜಾಮೀನು

ಚಾಕೋಲೇಟ್​ಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಸೀಸ​, ಕ್ಯಾಡ್ಮಿಯಂ ಪತ್ತೆ: ಗಂಭೀರ ಆರೋಗ್ಯ ಸಮಸ್ಯೆಗಳ ಎಚ್ಚರಿಕೆ

‘ಅನಿಮಲ್’ ಎರಡನೇ ಸಾಂಗ್ ರಿಲೀಸ್; ರಶ್ಮಿಕಾ ಪಾದಗಳನ್ನು ಮುಟ್ಟಿದ ರಣಬೀರ್, ಹೇಗಿದೆ ನೋಡಿ ಹೊಸ ಹಾಡು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − thirteen =
Remember me
