ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೀಕರ ದುರಂತ ರಾಜ್ಯದ ಮಟ್ಟಿಗೂ ಪಾಠವಾಗಬೇಕಾಗಿದೆ. ಆದ್ದರಿಂದಲೇ ಸರ್ಕಾರ ಪಶ್ಚಿಮಘಟ್ಟ ಉಳಿವಿನ ಸಲುವಾಗಿ ಡಾ. ಕೆ. ಕಸ್ತೂರಿರಂಗನ್ ವರದಿಯನ್ನು ಕೆಲವು ರಾಜೀಯೊಂದಿಗೆ ಅನುಷ್ಠಾನ ಮಾಡುವ ಬಗ್ಗೆ ಗಂಭೀರವಾಗಿ ಆಲೋಚನೆ ನಡೆಸಿದೆ. ಈ ಹಿಂದೆಯೇ ಕೊಡಗಿನಲ್ಲಿ ಭೂಕುಸಿತ ಸಂಭವಿಸಿತ್ತು. ಆದರೂ ಸರ್ಕಾರ ಅಥವಾ ಜನಪ್ರತಿನಿಧಿಗಳು ಪಶ್ಚಿಮಘಟ್ಟದ ಪರಿಸರ ಉಳಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನವನ್ನೇನು ಗಂಭೀರವಾಗಿ ಮಾಡಿಲ್ಲ. ಆದ್ದರಿಂದಲೇ ಆತಂಕ ಮಾತ್ರ ದಿನೇದಿನೆ ಹೆಚ್ಚಾಗುತ್ತಿದೆ. ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಆಗುತ್ತಿರುವ ಅಪಾಯಗಳಿಂದ ಪಶ್ಚಿಮಘಟ್ಟ ಪ್ರದೇಶವನ್ನು ಉಳಿಸಿಕೊಳ್ಳದೇ ಹೋದರೆ ಮುಂದಿನ ಪೀಳಿಗೆಗೆ ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದಲೇ ಸರ್ಕಾರ ಈಗ ಗಂಭೀರ ಚಿಂತನೆ ಯಲ್ಲಿದೆ ಎಂದು ಪರಿಸರ ಇಲಾಖೆಯ ಮೂಲಗಳು ಹೇಳುತ್ತವೆ.
ಕಸ್ತೂರಿರಂಗನ್ ಸಮಿತಿ ವರದಿ ಪ್ರಕಾರ ರಾಜ್ಯದ ಸುಮಾರು 20,668 ಚದುರ ಕಿಮೀಗಳಷ್ಟು ಪ್ರದೇಶ ಪರಿಸರ ಸೂಕ್ಷ್ಮವೆಂದು ಗುರುತಿಸಲ್ಪಡುತ್ತಿದೆ. ಅದರಲ್ಲಿ 16,114.08 ಚದುರ ಕಿಮೀ ರಕ್ಷಿತ ಪ್ರದೇಶವಾಗಿದೆ. ಇಷ್ಟನ್ನು ಮಾತ್ರವೇ ಘೋಷಣೆ ಮಾಡಿ ಉಳಿದ ಪ್ರದೇಶವನ್ನು ಕೈಬಿಡಬೇಕು ಎಂಬ ಒತ್ತಡ ಸರ್ಕಾರದ ಮೇಲಿದೆ. ಇದಕ್ಕೆ ಕಾರಣ ಕೇರಳ ಕರಡು ಅಧಿಸೂಚನೆಯನ್ನು ಹೊರಡಿಸಿ 9993.7 ಚದುರ ಕಿಮೀಗೆ ಸೀಮಿತಗೊಳಿಸಿಕೊಂಡಿದೆ. ಅದೇ ಮಾದರಿ ಅನುಸರಿಸಲು ಚರ್ಚೆ ನಡೆದಿದೆ.
ಪ್ರವಾಸೋದ್ಯಮವೇ ಅಡ್ಡಿ:ಹಿಂದಿನ ಕೊಡಗು, ಈಗಿನ ವಯನಾಡು ದುರಂತಗಳಿಗೆ ಅತಿಯಾದ ಒತ್ತಡವೇ ಕಾರಣವಾಗಿದೆ. ಅಭಿವೃದ್ಧಿ ಮತ್ತು ಪ್ರಕೃತಿಯ ನಡುವೆ ಸಮತೋಲನ ಕಾಪಾಡದಿರುವುದು ಸಹ ಪರಿಣಾಮ ಬೀರುತ್ತಿದೆ. ವಯನಾಡಿನಂತೆಯೇ ರಾಜ್ಯದ ಪಶ್ಚಿಮಘಟ್ಟದ ಮೇಲೂ ಪ್ರವಾಸೋದ್ಯಮದ ಹೆಸರಿನಲ್ಲಿ ಒತ್ತಡ ಹೆಚ್ಚಾಗಿದೆ. ಸ್ಥಳೀಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡದಿರುವುದು ಪಶ್ಚಿಮಘಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಶೀಘ್ರದಲ್ಲಿ ತರಲಿರುವ ನೂತನ ಪ್ರವಾಸೋದ್ಯಮ ನೀತಿಯಲ್ಲಿ ಬೇರೆ ಕಡೆ ಪ್ರವಾಸೋದ್ಯಮ ಬೆಳೆಸಿದರೆ ಮಾತ್ರ ಪಶ್ಚಿಮಘಟ್ಟದ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಪರಿಸರ ಸೂಕ್ಷ್ಮ ವಲಯದಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡಬಾರದು ಎಂಬುದು ತಜ್ಞರ ಸಲಹೆಗಳು.
ಸರ್ಕಾರದ ಉದ್ದೇಶವೇನಿದೆ:ಅವಘಡಗಳು ಸಂಭವಿಸಲು ಅನೇಕ ಕಾರಣಗಳಿವೆ. ರಸ್ತೆ ಅಗಲೀಕರಣ ಪ್ರಮುಖವಾಗಿರುವ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಗಳು ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸುತ್ತಿಲ್ಲವೆಂಬ ಕಾರಣಕ್ಕೆ ಸಾಕಷ್ಟು ನೋಟಿಸ್​ಗಳನ್ನು ಸರ್ಕಾರ ನೀಡಿದೆ.
ಜನಪ್ರನಿಧಿಗಳೊಂದಿಗೆ ಮತ್ತೆ ಸಭೆ:ಕಸ್ತೂರಿರಂಗನ್ ವರದಿಯನ್ನು ಪುನರ್ ಪರಿಶೀಲನೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ರಚನೆ ಮಾಡಿದ್ದ ಸಂಜಯ್ಕುಮಾರ್ ಸಮಿತಿ ರಾಜ್ಯಕ್ಕೆ ಕಾಟಚಾರದ ಭೇಟಿ ನೀಡಿ ಹೋಗಿತ್ತು. ಎಲ್ಲಿಯೂ ಸ್ಥಳ ಪರಿಶೀಲನೆಯನ್ನೇನು ಮಾಡಿರಲಿಲ್ಲ. ಇದೀಗ ಸರ್ಕಾರ ಮತ್ತೆ ಜನಪ್ರತಿನಿಧಿಗಳ ಸಭೆ ಕರೆದು ಚರ್ಚೆ ನಡೆಸುವ ಬಗ್ಗೆ ಆಲೋಚನೆ ನಡೆಸಿದೆ.
ಕುಡಿಯುವ ನೀರಿಗೂ ಸಮಸ್ಯೆ:ಪಶ್ಚಿಮಘಟ್ಟ ಪರಿಸರ ಕಾಪಾಡದೇ ಹೋದರೆ ಕುಡಿಯುವ ನೀರಿಗೂ ಮುಂದೆ ಸಮಸ್ಯೆ ತಲೆದೋರುತ್ತದೆ. ಮಹಾದಾಯಿ, ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ, ಚಕ್ರಾ, ವರಾಹಿ, ನೇತ್ರಾವತಿ ಮತ್ತು ಬರಪೊಳೆ ಪಶ್ಚಿಮಾಭಿಮುಖವಾಗಿ ಹರಿದರೆ, ಕಾವೇರಿ, ಕೃಷ್ಣಾ, ಗೋದಾವರಿ ನದಿಗಳು ಪೂರ್ವಾಭಿಮುಖವಾಗಿ ಹರಿಯುತ್ತವೆ. ಇವುಗಳ ಜಲಮೂಲಗಳ ಸಂರಕ್ಷಣೆಯ ಅಗತ್ಯವಿದೆ. ಗಿರಿಶ್ರೇಣಿ ಮಳೆಯ ಮೇಲೂ ಪರಿಣಾಮ ಬೀರುತ್ತವೆ.
*ಗಣಿಗಾರಿಕೆ, ಕ್ವಾರಿ, ಮರಳು ಗಣಿಗಾರಿಕೆ ಸಂಪೂರ್ಣ ನಿಷೇಧ
*ಉಷ್ಣ ವಿದ್ಯುತ್ ಸ್ಥಾವರ, ಶಾಖೋತ್ಪನ್ನ ಸ್ಥಾವರಗಳ ಸ್ಥಾಪನೆ, ವಿಸ್ತರಣೆಗೆ ನಿರ್ಬಂಧ
*ಕೆಂಪು ವರ್ಗದ ಕೈಗಾರಿಕೆಗಳ ಸ್ಥಾಪನೆ, ವಿಸ್ತರಣೆ ನಿಷೇಧ
*20 ಸಾವಿರ ಚದುರ ಮೀಟರ್ ವಿಸ್ತೀರ್ಣದ ಕಟ್ಟಡ, 50 ಎಕರೆಯ ಟೌನ್​ಶಿಫ್ ನಿಷೇಧ
*ಜಲ ವಿದ್ಯುತ್ ಯೋಜನೆಗಳಲ್ಲಿ ಪರಸ್ಪರ ಮೂರು ಕಿಮೀ ಅಂತರ
*ರಾಜ್ಯದ ಹಸಿರು ಹೊದಿಕೆ ಆಧಾರದ ಮೇಲೆ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಆರ್ಥಿಕ ಸಹಾಯ
*ಪಶ್ಚಿಮಘಟ್ಟ ಸುಸ್ಥಿರ ಅಭಿವೃದ್ಧಿಗೆ ನಿಧಿ ಸ್ಥಾಪನೆ
ಯಾವ ಯಾವ ಜಿಲ್ಲೆಗಳು?:ಚಾಮರಾಜನಗರ, ಕೊಡಗು, ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಬೆಳಗಾವಿಗಳ 39 ತಾಲೂಕುಗಳ 1533 ಗ್ರಾಮಗಳು.
ಸ್ಥಳೀಯವಾದ ಪ್ರವಾಸೋದ್ಯಮವನ್ನು ಬೆಳೆಸುವ ಮೂಲಕ ಪಶ್ಚಿಮಘಟ್ಟದ ಮೇಲೆ ಹೊರೆಯನ್ನು ತಪ್ಪಿಸಬೇಕಾಗಿದೆ. ವಯನಾಡು ದುರಂತ ಪಾಠವಾಗಬೇಕಾಗಿದೆ.
| ಪ್ರೊ. ಕೃಷ್ಣರಾಜ್ ಅರ್ಥಶಾಸ್ತ್ರಜ್ಞ
ಕಸ್ತೂರಿರಂಗನ್ ವರದಿ ಏನು ಮಾಡಬೇಕು. ಪಶ್ಚಿಮಘಟ್ಟ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಸಚಿವ ಸಂಪುಟದಲ್ಲಿ ಹಾಗೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಲಾಗುತ್ತದೆ.
| ಈಶ್ವರ ಖಂಡ್ರೆ ಅರಣ್ಯ ಸಚಿವ
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಪ್ರತಾಪ್ ಸಿಂಹ, ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‌ಐಆರ್‌ ದಾಖಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 2 =
Remember me
