ಬೆಂಗಳೂರು:ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ತನ್ನ ಓದುಗರಿಗೆ ಮೆಗಾ ಕೊಡುಗೆ ಪ್ರಕಟಿಸಿದ್ದು, ಕಾರು ಗೆಲ್ಲುವ ಅವಕಾಶವನ್ನು ಕಲ್ಪಿಸಿದೆ. ಜತೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ‘ವಿಜಯವಾಣಿ ಓದಿ ಕಾರು ಗೆಲ್ಲಿ’ ಶೀರ್ಷಿಕೆಯಡಿ ಆ.2ರಿಂದ ಆರಂಭಿಸಿರುವ ಈ ವಿಶೇಷ ಸ್ವರ್ಧೆ ನ.14ರವರೆಗೆ ಚಾಲ್ತಿಯಲ್ಲಿರಲಿದೆ.
ಇದನ್ನೂ ಓದಿ:ಯಾವ ಕ್ರಮ ತೆಗೆದುಕೊಳ್ಳುತ್ತಾರೋ ನೋಡೋಣ: ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ
ಓದುಗರು ಕಾರಿನ ಜತೆಗೆ ಬೈಕ್, ಲ್ಯಾಪ್​ಟಾಪ್, ಎಸಿ, ರೆಫ್ರಿಜಿರೇಟರ್ ಸೇರಿ ಹಲವು ಬಹುಮಾನವನ್ನು ಗೆಲ್ಲಬಹುದಾಗಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಿದ್ದರೆ ಪ್ರತಿದಿನ ವಿಜಯವಾಣಿ ಪತ್ರಿಕೆಯನ್ನು ಓದಿ ಅದರಲ್ಲಿರುವ ಕೂಪನ್​ಗಳನ್ನು ಸಂಗ್ರಹಿಸಿ ನಿಗದಿತ ನಮೂನೆಯ ಬಾಕ್ಸ್​ನಲ್ಲಿ ಅಂಟಿಸಿ ಕೊನೆಗೆ ಒಟ್ಟುಗೂಡಿಸಿ ಸಂಸ್ಥೆಯ ಕಚೇರಿಗೆ ತಲುಪಿಸಬೇಕಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ?: ವಿಜಯವಾಣಿ ಪತ್ರಿಕೆಯಲ್ಲಿ ಆ.2ರಿಂದ ನ.14ರ ವರೆಗೂ ‘ವಿಜಯವಾಣಿ ಓದಿ ಕಾರು ಗೆಲ್ಲಿ’ ಮೆಗಾ ಕೊಡುಗೆಗೆ ಸಂಬಂಧಿಸಿದ ಕೂಪನ್​ಗಳನ್ನು ಪ್ರಕಟಿಸಲಾಗುತ್ತದೆ. ಇವುಗಳನ್ನು ಆಯಾ ದಿನದಂದು ಪ್ರಕಟವಾಗುವ ಪತ್ರಿಕೆಯಲ್ಲಿನ ಪುಟಗಳಲ್ಲಿ ಗುರುತಿಸಿ ಆ ಭಾಗವನ್ನು ಕತ್ತರಿಸಿ ನಿಗದಿತ ಸ್ಪರ್ಧಾ ನಮೂನೆಯ ಕೂಪನ್ ಬಾಕ್ಸ್​ನಲ್ಲಿ ಅಂಟಿಸಬೇಕು. ಒಟ್ಟು 80 ಕೂಪನ್​ಗಳು ಪ್ರಕಟವಾಗಲಿದ್ದು, ಈ ಪೈಕಿ 45 ಸ್ಟಾ್ಯಂಡರ್ಡ್(ನಿಗದಿತ) ಕೂಪನ್ ಹಾಗೂ 5 ಮಾಸ್ಟರ್ ಕೂಪನ್​ಗಳನ್ನು ಅದರದೇ ಬಾಕ್ಸ್​ನಲ್ಲಿ ಅಂಟಿಸಬೇಕು. ಒಂದು ಬಾಕ್ಸ್​ನಲ್ಲಿ ಒಂದೇ ಕೂಪನ್ ಅಂಟಿಸಿರಬೇಕು.
ಇದನ್ನೂ ಓದಿ:ಚಿನ್ನ ಗೆದ್ದ ಅರ್ಷದ್​ ಓಲಿಂಪಿಕ್​ ಓಟಕ್ಕೆ ನೀರಜ್ ಸಾಥ್​! ಇದು 5 ತಿಂಗಳ ಹಿಂದಿನ ಕಥೆ
ಕೂಪನ್​ಗಳನ್ನು ಜೆರಾಕ್ಸ್ ಮಾಡಿ ಅಂಟಿಸುವಂತಿಲ್ಲ. ಒಟ್ಟು 104 ದಿನಗಳಲ್ಲಿ ಪ್ರಕಟವಾಗುವ ಕೂಪನ್​ಗಳ ಪೈಕಿ 50 ಕೂಪನ್​ಗಳನ್ನು (45 ಸ್ಟಾ್ಯಂಡರ್ಡ್ ಕೂಪನ್ ಹಾಗೂ 5 ಮಾಸ್ಟರ್ ಕೂಪನ್) ಪ್ರಕಟಿತ ಸ್ಪರ್ಧಾ ನಮೂನೆಯಲ್ಲಿ ಅಂಟಿಸಿ ಸಂಸ್ಥೆಯು ಮುಂದಿನ ದಿನಗಳಲ್ಲಿ ತಿಳಿಸುವ ವಿಳಾಸಕ್ಕೆ ತಲುಪಿಸಬೇಕಾಗುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ನಮೂನೆಯಲ್ಲಿ ತಮ್ಮ ಹೆಸರಿನೊಂದಿಗೆ ಪೂರ್ಣವಾದ ವಿಳಾಸ, ಮೊಬೈಲ್ ಸಂಖ್ಯೆಯನ್ನು ನಮೂದಿಸಿರಬೇಕು.
ಇದನ್ನೂ ಓದಿ:ನಗರದಲ್ಲಿ ರೈಲಿಗೆ ಸಿಲುಕಿ ಯುವತಿ ಸಾವು: ಗೋಲ್ಡ್ ಮೆಡಲ್ ಪದವೀಧರೆಯ ದುರಂತ ಅಂತ್ಯ
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಷರತ್ತುಗಳು
ಸ್ಪರ್ಧೆಯ ಸಂಕ್ಷಿಪ್ತ ವಿವರ:
ಕಾರು ಗೆಲ್ಲುವ ಸ್ಪರ್ಧೆಗೆ ಅನ್ವಯವಾಗುವ ಪ್ರದೇಶ:ಬೆಂಗಳೂರು ಆವೃತ್ತಿ: ಬೆಂಗಳೂರು ನಗರ, ಬೆಂ. ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳು. ಹೆಚ್ಚಿನ ಮಾಹಿತಿಗೆ ಸಂರ್ಪಸಿ: 8884432427.
ಚಿನ್ನ ಗೆದ್ದ ಅರ್ಷದ್​ ಓಲಿಂಪಿಕ್​ ಓಟಕ್ಕೆ ನೀರಜ್ ಸಾಥ್​! ಇದು 5 ತಿಂಗಳ ಹಿಂದಿನ ಕಥೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:1 × four =
Remember me
