ವಿಜಯಪುರ:ವಿಶ್ವದ ಅತ್ಯಾಧುನಿಕ ಯುದ್ಧವಿಮಾನ ರಫೆೇಲ್ ತರಲು ಹೋದ ಪೈಲೈಟ್​ಗಳ ಪೈಕಿ ಓರ್ವರು ವಿಜಯಪುರದಲ್ಲಿ ವ್ಯಾಸಂಗ ಮಾಡಿರುವುದು ಹೆಮ್ಮೆಯ ಸಂಗತಿ. ಇಲ್ಲಿನ ಸೈನಿಕ ಶಾಲೆಯ ವಿದ್ಯಾರ್ಥಿ ಅರುಣಕುಮಾರ್ ಅವರೇ ರಫೆೇಲ್ ತರಲು ಹೋದ ಸೈನಿಕ. ಭಾರತೀಯ ಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿರುವ ಅರುಣಕುಮಾರ ಮೂಲತಃ ಬಿಹಾರದವರು. ಇವರ ವ್ಯಾಸಂಗ ವಿಜಯಪುರದಲ್ಲಾಗಿದೆ. 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವ್ಯಾಸಂಗ ಮಾಡಿರುವ ಅರುಣಕುಮಾರ್ 2002ರಲ್ಲಿ ತೇರ್ಗಡೆಯಾಗಿದ್ದರು.
ಎನ್​ಡಿಎ ತರಬೇತಿ:ದ್ವಿತೀಯ ಪಿಯು ನಂತರ ಅರುಣಕುಮಾರ್ ಎನ್​ಡಿಎನಲ್ಲಿ 3 ವರ್ಷ ವಿಶೇಷ ತರಬೇತಿ ಪಡೆದರು. ಆ ಬಳಿಕ ವಾಯುಸೇನೆಯಲ್ಲಿ ವಿಶೇಷ ಅಧಿಕಾರಿಯಾಗಿ ನೇಮಕಗೊಂಡರು. ಸದ್ಯ ಅರುಣಕುಮಾರ್ ವಿಂಗ್ ಕಮಾಂಡರ್ ಆಗಿದ್ದಾರೆ.
ಛಲಗಾರ ಪ್ರತಿಭಾವಂತ:ಅರುಣಕುಮಾರ್ ಸೈನಿಕ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಚುರುಕು. ಶಾಲಾ ದಿನಗಳಲ್ಲೇ ಏನಾದರೂ ಸಾಧಿಸಬೇಕು ಎನ್ನುವ ಛಲ ಆತನಲ್ಲಿ ಕಾಣುತ್ತಿತ್ತು. ಈಗ ಇಡೀ ದೇಶವೇ ಆತನ ಸಾಧನೆಯನ್ನು ಕಂಡು ಹೆಮ್ಮೆ ಪಟ್ಟಿದೆ… -ಇದು ಫ್ರಾನ್ಸ್​ನಿಂದ ರಫೇಲ್ ಯುದ್ಧವಿಮಾನಗಳನ್ನು ತಂದ ಪೈಲಟ್​ಗಳ ಪೈಕಿ ಒಬ್ಬರಾದ ವಿಂಗ್ ಕಮಾಂಡರ್ ಅರುಣಕುಮಾರ್ ಅವರ ಗುರು ಮಂಗಳೂರಿನ ದಾಮೋದರ್ ಅವರ ಅಭಿಮಾನದ ನುಡಿಗಳು.
ವಿಜಯಪುರದ ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ಅರುಣ್​ಗೆ ದಾಮೋದರ್ 11 ಮತ್ತು 12ನೇ ತರಗತಿಯಲ್ಲಿ ಭೌತಶಾಸ್ತ್ರವನ್ನು ಬೋಧಿಸಿದ್ದರು. ಅಖಿಲ ಭಾರತ ಮಟ್ಟದಲ್ಲಿ ಜರುಗುವ ಪರೀಕ್ಷೆಯಲ್ಲಿ ಮೆರಿಟ್​ನಲ್ಲಿ ಉತ್ತೀರ್ಣನಾಗಿ 1995ರಲ್ಲಿ ಅರುಣ್ ಸೈನಿಕ ಶಾಲೆಯ 6ನೇ ತರಗತಿಗೆ ಸೇರ್ಪಡೆಗೊಂಡಿದ್ದರು. ಇವರ ತಂದೆಯೂ ವಾಯುಸೇನೆಯಲ್ಲಿದ್ದರು.
ಹೌಸ್ ಕ್ಯಾಪ್ಟನ್ ಆಗಿದ್ದರು: ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ವಿವಿಧ ಹೌಸ್(ತಂಡ)ಗಳಾಗಿ ವಿಂಗಡಿಸಿ ರಾಜ್ಯದ ವಿವಿಧ ರಾಜಮನೆತನಗಳ ಹೆಸರನ್ನು ಇಡಲಾಗುತ್ತದೆ. ಅರುಣ್ ‘ವಿಜಯನಗರ’ ಹೌಸ್ ಕ್ಯಾಪ್ಟನ್ ಆಗಿದ್ದರು. ಹಿಂದಿನ ವರ್ಷಗಳಲ್ಲಿ ಅವರ ವ್ಯಕ್ತಿತ್ವ, ಪಠ್ಯ-ಪಠ್ಯೇತರ ಚಟುವಟಿಕೆ ಪರಿಗಣಿಸಿ ಆಯ್ಕೆ ಮಾಡಲಾಗಿತ್ತು. 100ರಷ್ಟು ವಿದ್ಯಾರ್ಥಿಗಳನ್ನು ವಿವಿಧ ಸ್ಪರ್ಧೆಗಳಿಗೆ ಸಿದ್ಧಪಡಿಸುವುದು, ಶಿಸ್ತು ಕಾಪಾಡುವುದು ಕ್ಯಾಪ್ಟನ್ ಜವಾಬ್ದಾರಿ. ಅದನ್ನು ಅರುಣ್ ಯಶಸ್ವಿಯಾಗಿ ನಿರ್ವಹಿಸಿದ್ದರು ಎಂದು ದಾಮೋದರ್ ವಿವರಿಸಿದರು.
ಅರುಣಕುಮಾರ್ ಚತುರ ವಿದ್ಯಾರ್ಥಿ. ಆಟೋಟಗಳಲ್ಲಿ ಮಾತ್ರವಲ್ಲ ಪಾಠದಲ್ಲೂ ಮುಂದಿರುತ್ತಿದ್ದ. ನಾಯಕತ್ವದ ಗುಣ ಆತನಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಇತ್ತು. ರಫೆೇಲ್ ಯುದ್ಧವಿಮಾನ ತರುವಲ್ಲಿ ನನ್ನ ವಿದ್ಯಾರ್ಥಿಯೂ ಇದ್ದಾನೆಂಬುದೇ ಹೆಮ್ಮೆಯ ವಿಷಯ.
| ಜಿ.ಶ್ರೀರಾಮಮೂರ್ತಿ ಕಲಿಸಿದ ಗುರು
ವಿಂಗ್ ಕಮಾಂಡರ್ ಅರುಣಕುಮಾರ್ ಸೇರಿ ಹಲವರು ಸೇನೆಗೆ ಸೇರುವಲ್ಲಿ ಪ್ರಮುಖ ಪಾತ್ರವಹಿಸಿರುವ ವಿಜಯಪುರ ಸೈನಿಕ ಶಾಲೆ ಕೀರ್ತಿ ಅಗಾಧ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಸೇನೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ರಫೆೇಲ್​ನಂಥ ಅತ್ಯಾಧುನಿಕ ಯುದ್ಧವಿಮಾನ ತರುವಲ್ಲಿ ನಮ್ಮ ಶಾಲೆ ವಿದ್ಯಾರ್ಥಿ ಇರುವುದು ಸಂತಸ ತರಿಸಿದೆ.
| ಕ್ಯಾಪ್ಟನ್ ವಿನಯ ತಿವಾರಿ ಪ್ರಾಂಶುಪಾಲರು ಸೈನಿಕ ಶಾಲೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
