ಬೆಂಗಳೂರು:ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಚಳಿ ಹೆಚ್ಚಳವಾಗಿರುವ ಬೆನ್ನಲ್ಲೇ ರಾಜ್ಯದಲ್ಲಿಯೂ ಚಳಿಯ ತೀವ್ರತೆ ಹೆಚ್ಚಳವಾಗಿದೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಸರಾಸರಿ 4-5 ಡಿಗ್ರಿ ಸೆಲ್ಸಿಯಸ್ ಕುಸಿತ ಹಿನ್ನೆಲೆಯಲ್ಲಿ ಮುಂದಿನ ದಿನಗಳಿಂದ ಚಳಿ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಜನವರಿ 14ರವರೆಗೆ ಚಳಿಯ ತೀವ್ರತೆ ಇನ್ನಷ್ಟು ಇರಲಿದೆ, ಸಂಕ್ರಾಂತಿ ಬಳಿಕ ಕಡಿಮೆಯಾಗಲಿದೆ. ಉತ್ತರದಿಂದ ದಕ್ಷಿಣಕ್ಕೆ ಗಾಳಿ ಬೀಸುತ್ತಿರುವುದರಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಇಳಿಕೆಯಾಗುತ್ತಿದೆ. ಸೋಮವಾರ (ಡಿ.21)ಸೂರ್ಯನಿಂದ ಭೂಮಿ ಅತಿ ಗರಿಷ್ಠ ದೂರಕ್ಕೆ ಹೋಗುವುದರಿಂದ ಸೂರ್ಯ ಕಿರಣಗಳ ಪ್ರಭಾವ ಕಡಿಮೆಯಾಗುವ ಹಿನ್ನೆಲೆಯಲ್ಲಿ ಚಳಿ ಹೆಚ್ಚು ಕಾಣಿಸಿಕೊಳ್ಳಲಿದೆ. ಸೂರ್ಯ ಕಾಣಿಸಿಕೊಂಡರೂ ಅದರ ಪ್ರಭಾವ ಕಡಿಮೆ ಇರಲಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ಮಾಹಿತಿ ನೀಡಿದರು.
ಇದನ್ನೂ ಓದಿ:ಈ ಕಾಲ್​ ಸೆಂಟರೇ ನಕಲಿ, ವಂಚನೆಯೇ ಇವರಿಗೆ ಉದ್ಯೋಗ!; 42 ವಂಚಕರ ಪೈಕಿ 16 ಮಂದಿ ಮಹಿಳೆಯರು!
ಭಾನುವಾರ ಬೀದರ್‌ನಲ್ಲಿ 9, ವಿಜಯಪುರದಲ್ಲಿ 11.5, ಧಾರವಾಡದಲ್ಲಿ 13.8, ಅಗುಂಬೆಯಲ್ಲಿ 14.5 ಹಾಗೂ ಶಿವಮೊಗ್ಗದಲ್ಲಿ 14.6 ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಅಲ್ಲದೆ, ಕೆಲ ಜಿಲ್ಲೆಗಲ್ಲಿ ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿರುವ ಹಿನ್ನೆಲೆಯಲ್ಲಿ ಚಳಿ ಜಾಸ್ತಿಯಾಗಿದೆ. ಕಡಿಮೆ ತಾಪಮಾನ ಪರಿಣಾಮದಿಂದ ಶೀತಗಾಳಿಯೂ ಬೀಸುತ್ತಿದೆ. ಇದರ ಪ್ರಭಾವದಿಂದ ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಖಂಡ, ಮಧ್ಯಪ್ರದೇಶ, ಬಿಹಾರ ಹಾಗೂ ಪಶ್ಚಿಮಬಂಗಾಳ ಸೇರಿ ಇನ್ನಿತರ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ಕೈಮುಗಿದು ಬೇಡಿಕೊಳ್ಳುತ್ತೇನೆ, ಯಾರೂ ಗೋವನ್ನು ತಿನ್ನಬೇಡಿ; ಸಿ.ಎಂ. ಇಬ್ರಾಹಿಂ ಮನವಿ
ಕರೆಂಟ್​ ಬೇಕಿಲ್ಲ, ಶಿಲಾನ್ಯಾಸ ಕಾರ್ಯಕ್ರಮಕ್ಕೆ ವಿಜೃಂಭಣೆಯಿಲ್ಲ! ಅಯೋಧ್ಯೆ ಮಸೀದಿಯ ವಿಶೇಷತೆಗಳಿವು
‘ಅಯ್ಯೋ ನಿಂಗೆ ಕ್ಯಾನ್ಸರ್​ ಇದೆ! ಟ್ರೀಟ್ಮೆಂಟ್​ ತಗೊಳ್ದಿದ್ರೆ ಸತ್ತೇ ಹೋಗ್ತೀಯ’ ಅಂತ ಹೇಳುತ್ತಲೇ 1.47 ಕೋಟಿ ರೂ. ವಂಚಿಸಿದ ವೈದ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 6 =
Remember me
