|ಪಂಕಜ ಕೆ.ಎಂ.ಬೆಂಗಳೂರು
ರಾಜ್ಯದಲ್ಲಿ ದಿನ ಕಳೆದಂತೆ ಹೆಚ್ಚಾಗುತ್ತಿರುವ ಚಳಿಯ ತೀವ್ರತೆ ಸಂಕ್ರಾಂತಿವರೆಗೂ ಮುಂದುವರಿಯಬಹುದೆಂಬ ಹವಾಮಾನ ಇಲಾಖೆ ವರದಿ ಆರೋಗ್ಯ ಕಾಳಜಿಯ ಸವಾಲನ್ನು ನೆನಪಿಸಿದೆ. ಹೃದಯ ಸಂಬಂಧಿ, ಅಸ್ತಮಾ ರೋಗಿಗಳು, ಸಂಧಿವಾತ ಸಮಸ್ಯೆ ಇರುವವರು, ಬಾಣಂತಿಯರು, ಮಕ್ಕಳು, ವೃದ್ಧರು ಆರೋಗ್ಯ ಕುರಿತು ಹೆಚ್ಚು ಕಾಳಜಿ ವಹಿಸುವಂತೆ ವೈದ್ಯರು ಎಚ್ಚರಿಸಿದ್ದಾರೆ. ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಲ್ಲಿ 10 ಡಿಗ್ರಿಗಿಂತ ಕೆಳಗಿನ ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಳಗ್ಗೆ, ಸಂಜೆ ಅತಿಯಾದ ಚಳಿ, ಮಧ್ಯಾಹ್ನ ಬಿಸಿಲಿದ್ದು, ವಾತಾವರಣ ಅತಿಯಾದ ಆರ್ದ್ರತೆ ಹಾಗೂ ಧೂಳುಮಯವಾಗುತ್ತಿದೆ. ಇದರಿಂದಾಗಿ ಶೀತ ಹಾಗೂ ಜ್ವರದ ಜತೆಗೆ ವೈರಾಣು ಸೋಂಕಿನಿಂದಲೂ ಜನರು ಬಳಲುತ್ತಿದ್ದಾರೆ ಎನ್ನುತ್ತಾರೆ ತಜ್ಞರು. ಚಳಿಗಾಲದಲ್ಲಿ ವೈರಾಣು ಗಾಳಿಯಲ್ಲಿ ವೇಗವಾಗಿ ಹರಡುತ್ತದೆ. ಒಬ್ಬರಿಗೆ ಶೀತ ಕಾಣಿಸಿಕೊಂಡರೆ ಮನೆ ಮಂದಿಯನ್ನೆಲ್ಲ ಕಾಡುತ್ತದೆ. ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುವುದು ಇದಕ್ಕೆ ಕಾರಣ. ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು. ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎನ್ನುತ್ತಾರೆ ಕೆ.ಸಿ. ಜನರಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಲಕ್ಷ್ಮೀಪತಿ.
ಕಾಳಜಿ ಅತ್ಯಗತ್ಯ:ಚಳಿಗಾಲದಲ್ಲಿ ತಲೆ, ಮೈ-ಕೈ ನೋವು ಶೀತ, ಕೆಮ್ಮು, ಗಂಟಲು ಬೇನೆ ಕಾಡುತ್ತದೆ. ಸಂಧಿವಾತ ಸಮಸ್ಯೆ ಇರುವವರನ್ನು ನರಳಿಸುತ್ತದೆ. ಚರ್ಮಸಮಸ್ಯೆ ಬಾಧಿಸುತ್ತವೆ ಎಂಬುದು ಇಎಸ್​ಐನ ಚರ್ಮರೋಗ ತಜ್ಞ ಡಾ. ಗಿರೀಶ್ ಅಭಿಪ್ರಾಯ.
ಚಳಿಗಾಲದಲ್ಲಿ ಹೃದ್ರಯ ಸಂಬಂಧಿ ಸಮಸ್ಯೆಗಳು ಶೇ. 5 ಹೆಚ್ಚಳವಾಗುತ್ತದೆ. ಹಾಗಾಗಿ ಸ್ವಲ್ಪ ಬಿಸಲು ಬಂದ ಮೇಲೆ ವಾಕ್ ಮಾಡುವುದು ಒಳಿತು. ಹೃದಯ ಸಮಸ್ಯೆ ಇರುವವರು ನಿಯಮಿತವಾಗಿ ಔಷಧ ಸೇವಿಸಬೇಕು.
|ಡಾ.ಸಿ.ಎನ್.ಮಂಜುನಾಥ್ಜಯದೇವ ಆಸ್ಪತ್ರೆ ನಿರ್ದೇಶಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + nineteen =
Remember me
