ಬೆಂಗಳೂರು:ಬರಪೀಡಿತ ತಾಲೂಕುಗಳಿಗೆ ಹಣದ ಬದಲು ಅಕ್ಕಿ ಪೂರೈಸುವ ಸರ್ಕಾರದ ಚಿಂತನೆಯತ್ತ ಬರ ಬಾಧಿತ ಜನರ ಗಮನಸೆಳೆದಿದೆ. ಅಧಿಕೃತವಾಗಿ 195 ತೀವ್ರ,  ಸಾಧಾರಣ ಬರಪೀಡಿತ ತಾಲೂಕುಗಳು ಎಂದು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಹಣದ ಬದಲಿಗೆ ತಲಾ ಹೆಚ್ಚುವರಿ ಐದು ಕೆಜಿ ಅಕ್ಕಿ ಹಂಚಿಕೆ ನಿರೀಕ್ಷೆಯಲ್ಲಿದ್ದಾರೆ. ಅಕ್ಕಿ ಖರೀದಿ ಬಗ್ಗೆ ಒಂದು ವಾರದೊಳಗೆ ತೀರ್ಮಾನವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಎಲ್ಲ ಬಿಪಿಎಲ್ ಪಡಿತರ ಚೀಟಿದಾರರಿಗೆ ಹೆಚ್ಚುವರಿ ಐದು ಕೆಜಿ ಅಕ್ಕಿ ವಿತರಿಸಲು ಮಾಸಿಕ 2.29 ಲಕ್ಷ ಟನ್ ಅಕ್ಕಿ ಬೇಕಾಗುತ್ತದೆ. ಆದರೆ ತೀವ್ರ ಬರಪೀಡಿತ ತಾಲೂಕುಗಳನ್ನು ಮಾತ್ರ ಪರಿಗಣಿಸಿದೆ 1.40 ಲಕ್ಷ ಟನ್ ಅಕ್ಕಿ ಸಾಕಾಗುತ್ತದೆ ಎಂದರು.
ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳೊಂದಿಗೆ ಅಕ್ಕಿ ಖರೀದಿ ಚರ್ಚೆ ನಡೆದಿದೆ. ಎ್ಸಿಐ ದರದ ಪ್ರಕಾರ ಕೆಜಿಗೆ 34 ರೂ.ಗಳಾಗಲಿದೆ. ಆದರೆ ಎ್ಸಿಐ ನಿಗದಿಪಡಿಸಿದ ದರಕ್ಕಿಂತ ಸ್ವಲ್ಪ ಹೆಚ್ಚಳ ಆಗಬಹುದು. ಯಾವುದಕ್ಕೂ ಮುಖ್ಯಮಂತ್ರಿ ಮುಂದೆ ಪ್ರಸ್ತಾವ ಮಂಡಿಸಿ ಒಪ್ಪಿಗೆ ನಂತರವೇ ಖರೀದಿ ಪ್ರಮಾಣ, ದರ ಅಂತಿಮವಾಗಲಿದೆ. ಆದಷ್ಟು ಬೇಗ ಅಕ್ಕಿ ಖರೀದಿ ಬಗ್ಗೆ ನಿರ್ಧರಿಸಲಾಗುವುದು.
ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ವಿತರಣೆ ತೀರ್ಮಾನವಾಗಿಲ್ಲ. ಈ ಕುರಿತು ಪ್ರಸ್ತಾವನೆಯು ಆರ್ಥಿಕ ಇಲಾಖೆ ಮುಂದಿದೆ. ಪಡಿತರ ಚೀಟಿದಾರರ ಅನುಕೂಲಕ್ಕಾಗಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಆಧಾರ್, ಬ್ಯಾಂಕ್ ಖಾತೆಗೆ ಜೋಡಣೆ, ಬ್ಯಾಂಕ್ ಖಾತೆ ತೆರೆದು ಹಣ ಜಮಾ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಮುನಿಯಪ್ಪ ತಿಳಿಸಿದರು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:11 − one =
Remember me
