ನವದೆಹಲಿ:ಪೇಟಿಎಂ ಫಾಸ್​ಟ್ಯಾಗ್ ಬಳಸುತ್ತಿರುವವರು ಮಾರ್ಚ್ 15ರೊಳಗೆ ಬೇರೆ ಬ್ಯಾಂಕ್​ನಿಂದ ಫಾಸ್​ಟ್ಯಾಗ್ ಪಡೆಯುವಂತೆ ಎನ್​ಎಚ್​ಎಐ ಮತ್ತೊಮ್ಮೆ ಮಾಹಿತಿ ತಿಳಿಸಿದೆ.
ಇದನ್ನೂ ಓದಿ:ವಿಶ್ವದ ಉತ್ತಮ ಸ್ಟ್ರೀಟ್ ಫುಡ್​ಗಳ ಲಿಸ್ಟ್​ನಲ್ಲಿ ವಡಾಪಾವ್​ಗೆ ಸ್ಥಾನ! ಇಲ್ಲಿದೆ ನೋಡಿ ಇನ್ನಷ್ಟು ಮಾಹಿತಿ ​
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐ ನಿರ್ಬಂಧ ಹಾಕಿರುವ ಹಿನ್ನೆಲೆಯಲ್ಲಿ ಅದರ ಫಾಸ್​ಟ್ಯಾಗ್​ಗೂ ಹೊಡೆತ ಬಿದ್ದಿದೆ. ಪೇಟಿಎಂನ ಫಾಸ್​ಟ್ಯಾಗ್ ಪೇಮೆಂಟ್ಸ್ ಬ್ಯಾಂಕ್​ಗೆ ಜೋಡಿತವಾಗಿರುವುದರಿಂದ ಅದಕ್ಕೂ ನಿರ್ಬಂಧ ಅನ್ವಯ ಆಗುತ್ತದೆ. ಇದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ದಂಡ ಅಥವಾ ಯಾವುದೇ ದುಪ್ಪಟ್ಟು ಶುಲ್ಕವನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಟೋಲ್ ಪ್ಲಾಜಾಗಳಲ್ಲಿ ಅನಾನುಕೂಲತೆ ಇಲ್ಲದೆ ತಡೆರಹಿತ ಪ್ರಯಾಣದ ಅನುಭವವನ್ನು ಪಡೆಯಬಹುದು ಎಂದು ಹೇಳಿದೆ.
➡️@NHAI_Officialissues advisory for#Paytm#FASTagusers to switch to other bank FASTag before 15th March 2024
➡️ In line with the guidelines issued by the@RBIregarding restrictions on#PaytmPaymentsBank, the Paytm FASTags users will not be able to recharge or top-up the…
— PIB India (@PIB_India)March 13, 2024

ಹೊಸ ಫಾಸ್​ಟ್ಯಾಗ್ ತೆಗೆದುಕೊಳ್ಳದಿದ್ದರೆ ಏನಾಗುತ್ತದೆ?:ನಿಮ್ಮ ಬಳಿ ಪೇಟಿಎಂ ಫಾಸ್​ಟ್ಯಾಗ್ ಇದ್ದು, ಮಾರ್ಚ್ 15ರೊಳಗೆ ಬೇರೆ ಬ್ಯಾಂಕ್​ನ ಫಾಸ್​ಟ್ಯಾಗ್ ಪಡೆಯಬೇಕಾಗುತ್ತದೆ. ಮಾರ್ಚ್ 15ರ ನಂತರ ಅದು ನಿಷ್ಕ್ರಿಯಗೊಳ್ಳುವುದಿಲ್ಲ. ಆ ಖಾತೆಯಲ್ಲಿ ಹಣ ಇದ್ದರೆ ಅದು ಮುಗಿಯುವವರೆಗೂ ಬಳಸಬಹುದು. ಮಾರ್ಚ್ 15ರ ಬಳಿಕ ಹಣ ರೀಚಾರ್ಜ್​ ಮಾಡಲಾಗುವುದಿಲ್ಲ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐ ನಿರ್ಬಂಧ ಹೇರಿದ ಬಳಿಕ ಪೇಟಿಎಂ ಸಂಸ್ಥೆ ಕೂಡ ತನ್ನ ಫಾಸ್​ಟ್ಯಾಗ್ ಗ್ರಾಹಕರಿಗೆ ಬೇರೆ ಟ್ಯಾಗ್ ಪಡೆಯುವಂತೆ ಸಲಹೆ ನೀಡುತ್ತಲೇ ಬಂದಿದೆ.
ಫಾಸ್​ಟ್ಯಾಗ್ ಏನು ಕೆಲಸ ನಿರ್ವಹಿಸುತ್ತೆ:ಹೆದ್ದಾರಿಗಳಲ್ಲಿ ಸುಂಕ ಸಂಗ್ರಹಕ್ಕೆಂದು ತ್ರಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗೆ ನೀಡಲಾಗುವ ಪ್ರೀಪೇಯ್ಡ್ ಯಂತ್ರ. ರೇಡಿಯೋ ಫ್ರೀಕ್ವೆನ್ಸಿ ಐಡಿ ತಂತ್ರಜ್ಞಾನ ಬಳಸಲಾಗುತ್ತದೆ. ಫಾಸ್​ಟ್ಯಾಗ್ ಖಾತೆಗೆ ಎಷ್ಟಾದರೂ ಹಣವನ್ನು ಮುಂಚಿತವಾಗಿ ರೀಚಾರ್ಜ್ ಮಾಡಬಹುದು. ಹೆದ್ದಾರಿಯಲ್ಲಿ ಟೋಲ್ ಬೂತ್ ಸಮೀಪ ಸ್ವಯಂಚಾಲಿತವಾಗಿ ಫಾಸ್​ಟ್ಯಾಗ್ ಮೂಲಕ ಟೋಲ್ ಹಣ ಕಡಿತವಾಗುತ್ತದೆ.
ಎಲ್ಲಿ ಪಡೆಯಬಹುದು?:ಹೆದ್ದಾರಿ ಪ್ರಾಧಿಕಾರವು ಪ್ರಮುಖ 37 ಬ್ಯಾಂಕುಗಳಿಗೆ ಫಾಸ್​ಟ್ಯಾಗ್ ನೀಡಲು ಅನುಮತಿಸಿದೆ. ಎಚ್​ಡಿಎಫ್​ಸಿ, ಐಸಿಐಸಿಐ, ಎಸ್​ಬಿಐ ಹೀಗೆ ಎಲ್ಲಾ ಪ್ರಮುಖ ಬ್ಯಾಂಕುಗಳ ಮೂಲಕ ಫಾಸ್​ಟ್ಯಾಗ್ ಪಡೆಯಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
