ಬೆಂಗಳೂರು: ಮಾಜಿ ಸಚಿವರ ಲೈಂಗಿಕ ವಿವಾದ ಸಂಬಂಧ ತನಿಖೆಗೆ ಗೃಹ ಇಲಾಖೆ ನೇಮಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದ ವಿಶೇಷ ತನಿಖಾ ತಂಡ (ಎಸ್​ಐಟಿ) ಕೇವಲ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಒಪ್ಪಿಸಲಿದೆ. ಆನಂತರ ಎಫ್​ಐಆರ್ ದಾಖಲಿಸಬೇಕೆ ಬೇಡವೇ ಎಂಬುದರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 2 ದಿನಗಳಲ್ಲಿ ಎಸ್​ಐಟಿ ತಂಡ ರಚನೆ ಆಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಾಜಿ ಸಚಿವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ನೀಡಿದ್ದ ದೂರನ್ನು ಹಿಂಪಡೆಯಲಾಗಿದೆ. ಇದೀಗ ಅಶ್ಲೀಲ ವಿಡಿಯೋ ಬಿಡುಗಡೆ ಹಿಂದಿನ ಷಡ್ಯಂತ್ರ ರೂಪಿಸಿದವರು ಯಾರೆಂದು ವಿವರವಾಗಿ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಲಿದೆ. ಆದರೆ, ಬಂಧಿಸುವ ಅಧಿಕಾರ ಇರುವುದಿಲ್ಲ. ಇದು ಘಟನೆ ಕುರಿತು ಮಾಜಿ ಸಚಿವರು ಸೇರಿ ಪ್ರಕರಣಕ್ಕೆ ಸಂಬಂಧಿಸಿದವರ ಹೇಳಿಕೆ ಮತ್ತು ಸಾಕ್ಷ್ಯ ಸಂಗ್ರಹಕ್ಕೆ ಮಾತ್ರ ಸೀಮಿತವಾಗಿರುತ್ತದೆ. ವಿಚಾರಣೆ ಪೂರ್ಣಗೊಳಿಸಿದ ಬಳಿಕ ತನಿಖೆ ನಡೆಸುವಂತೆ ಸರ್ಕಾರಕ್ಕೆ ಎಸ್​ಐಟಿ ಶಿಫಾರಸು ಮಾಡಲಿದೆ. ಆನಂತರ ಎಫ್​ಐಆರ್ ದಾಖಲಿಸಿ ತನಿಖೆ ನಡೆಯಲಿದೆ.
ಗೃಹ ಸಚಿವರ ಆದೇಶದಲ್ಲಿ ವಿಚಾರಣೆ ಬದಲಿಗೆ ತನಿಖೆ ಎಂದು ಉಲ್ಲೇಖವಾಗಿದ್ದರೆ ಪೊಲೀಸರು, ವಿವಾದ ಸಂಬಂಧ ಎಫ್​ಐಆರ್ ದಾಖಲಿಸಬೇಕಿತ್ತು. ಮಾಜಿ ಸಚಿವ ಅಥವಾ ವಿಡಿಯೋದಲ್ಲಿ ಪ್ರಸ್ತಾಪವಾಗಿರುವ ಯುವತಿ ದೂರು ನೀಡದೆ ಹೋಗಿದ್ದರೂ ಇತ್ತೀಚಿನ ಘಟನಾವಳಿ ಆಧರಿಸಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಸ್ವಯಂ ಪ್ರೇರಿತ ಎಫ್​ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಬೇಕಿತ್ತು. ಬಳಿಕ ಕೋರ್ಟ್​ಗೆ ಆರೋಪ ಪಟ್ಟಿ ಅಥವಾ ಪ್ರಕರಣದಲ್ಲಿ ಹುರುಳಿಲ್ಲದೆ ಹೋದರೆ ಬಿ ರಿಪೋರ್ಟ್ ಸಲ್ಲಿಸಬಹುದು. ಎಫ್​ಐಆರ್ ದಾಖಲಾದರೆ ತನಿಖೆಗೆ ಗಂಭೀರತೆ ಇರುತ್ತದೆ. ತಪ್ಪಿತಸ್ಥರನ್ನು ಬಂಧಿಸುವ ಅಧಿಕಾರ ಎಸ್​ಐಟಿಗೆ ಹೊಂದಿರುತ್ತದೆ. ಈ ಹಿಂದೆ ಮಾಜಿ ಸಚಿವ ಎಚ್.ವೈ.ಮೇಟಿ ವಿರುದ್ಧ ಆರೋಪ ಕೇಳಿ ಬಂದಾಗಲೂ ಲೈಂಗಿಕ ಹಗರಣವನ್ನು ಸಿಐಡಿ ವಿಚಾರಣೆಗೆ ಅಂದಿನ ಸರ್ಕಾರ ಆದೇಶಿಸಿತ್ತು. ಆಗ ಯಾರ ವಿರುದ್ಧವೂ ಪ್ರಕರಣ ದಾಖಲಾಗಲಿಲ್ಲ. ಕೊನೆಗೆ ಮೂಲ ವಿಡಿಯೋ ಪತ್ತೆಯಾಗಿಲ್ಲ. ಇದು ನಕಲಿಯೋ ಅಥವಾ ಅಸಲಿಯೋ ಎಂಬುದು ನಿಗೂಢವಾಗಿದೆ ಎಂದು ವರದಿ ಒಪ್ಪಿಸಿದರು. ಇದೀಗ ಮಾಜಿ ಸಚಿವರ ಲೈಂಗಿಕ ಹಗರಣವೂ ಅದೇ ಹಾದಿಯಲ್ಲಿ ಸಾಗಲಿದೆ ಎನ್ನಲಾಗುತ್ತಿದೆ.
ಎಫ್​ಐಆರ್ ಮಾಡಿದರೆ ಏನಾಗುತ್ತೆ:ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡರೆ ತನಿಖೆಯನ್ನು ಕೋರ್ಟ್ ಗಮನಿಸುತ್ತದೆ. ವಿಡಿಯೋ ನಕಲಿಯೋ ಅಸಲಿಯೋ ಎಂಬುದನ್ನು ಸಂತ್ರಸ್ತೆ ಮತ್ತು ಮಾಜಿ ಸಚಿವರು ನಿರಾಕರಿಸಬೇಕು. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವರದಿ ಬರಬೇಕು. ಇಲ್ಲಿ ಸಂತ್ರಸ್ತೆ ಹೇಳಿಕೆ ಮುಖ್ಯವಾಗಿರುತ್ತೆ. ಆಕೆ ಕೊಡುವ ಹೇಳಿಕೆ ಮೇಲೆಯೇ ತನಿಖೆ ನಿಂತಿರುತ್ತೆ.
ಎಸ್​ಐಟಿ ತನಿಖೆ ಹಾದಿ:ಎಸ್​ಐಟಿ ತಂಡ ಆರಂಭದಲ್ಲಿ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿಕೆ ಪಡೆದು ಆತನಿಗೆ ಸಿಡಿ ಮತ್ತು ಮಾಹಿತಿ ಕೊಟ್ಟವರನ್ನು ಮಾಹಿತಿ ಪಡೆಯಲಿದೆ. ಸಂತ್ರಸ್ತೆ ಮತ್ತು ಆಕೆ ಸಂಬಂಧಿಕರನ್ನು ಪತ್ತೆ ಮಾಡಿ ಹೇಳಿಕೆ ಪಡೆದು ಪೂರಕ ಸಾಕ್ಷ್ಯ ಸಂಗ್ರಹಿಸುತ್ತದೆ. ಸೆಕ್ಸ್ ಸಿಡಿಯ ಮೂಲ ಪತ್ತೆಹಚ್ಚಲಿದೆ. ಈ ವೇಳೆ ಯಾರೆಲ್ಲ ಷಡ್ಯಂತ್ರ ನಡೆಸಿದ್ದರೂ ಅವರಿಗೆ ಯಾರೆಲ್ಲ ಬೆಂಬಲ ಮತ್ತು ಹಣ ಪೂರೈಕೆ ಮಾಡಿದ್ದರೂ ಎಂಬುದನ್ನು ವಿಚಾರಣೆ ನಡೆಸಿ ವರದಿ ನೀಡಲಿದೆ.
ಅಗತ್ಯಬಿದ್ದರೆ ಎಫ್​ಐಆರ್:ಅಶ್ಲೀಲ ಸಿಡಿ ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿರುವ ವಿಶೇಷ ತನಿಖಾ ತಂಡವು ಅಗತ್ಯಬಿದ್ದರೆ ಪ್ರಥಮ ಮಾಹಿತಿ ವರದಿ (ಎಫ್​ಐಆರ್) ದಾಖಲಿಸಿಕೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳುವ ಮೂಲಕ ಈ ಕುರಿತು ಗೊಂದಲಗಳಿಗೆ ತೆರೆ ಎಳೆದರು. ನಗರದಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಹಂತದ ತನಿಖೆಯಲ್ಲಿ ಲಭ್ಯ ಪುರಾವೆ, ಇನ್ನಿತರ ಮಾಹಿತಿ ಆಧರಿಸಿ ಸಿದ್ಧಪಡಿಸಿದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದು, ಅವಶ್ಯಕ ಎನಿಸಿದರೆ ಎಫ್​ಐಆರ್ ದಾಖಲಿಸಿಕೊಂಡು ಮತ್ತೊಂದು ಹಂತದ ತನಿಖೆ ನಡೆಸಲಿದೆ ಎಂದರು.
ದೂರಿನ ವಿಚಾರ ಗೊತ್ತಿಲ್ಲ:ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೂರು ಸಲ್ಲಿಸುವ ವಿಚಾರ ಗೊತ್ತಿಲ್ಲ. ಸಿಡಿಯಿಂದಾಗಿ ತಮ್ಮ ತೇಜೋವಧೆ, ಮಾನಹಾನಿಯಾಗಿದೆ. ಷಡ್ಯಂತ್ರವಿರುವುದು ಸ್ಪಷ್ಟವಾಗಿದೆ ಎಂದು ಅವರು ಪತ್ರ ಬರೆದು ಮಾಡಿಕೊಂಡ ಮನವಿ ಮೇರೆಗೆ ಎಸ್​ಐಟಿ ನೇಮಿಸಲಾಗಿದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ಶ್ರೀಶೈಲ ಜಗದ್ಗುರುಗಳಿಂದ ಲಿಂಗದೀಕ್ಷೆ ಪಡೆದ ಮೊಹಮ್ಮದ್ ಮಸ್ತಾನ್; ಶಿವಸಂಸ್ಕೃತಿಗೆ ಮಾರುಹೋದ ಮುಸ್ಲಿಂ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − 2 =
Remember me
