ಬೆಂಗಳೂರು:ಸಾಫ್ಟ್​ವೇರ್ ಇಂಜಿನಿಯರ್​ಗೆ ಗೊತ್ತಿಲ್ಲದೆ ಆತನ ಹೆಸರಿನಲ್ಲಿ 19.92 ಲಕ್ಷ ರೂ. ಸಾಲ ಪಡೆದು ಸೈಬರ್ ಕಳ್ಳರು ವಂಚನೆಗೆ ಯತ್ನಿಸಿದ್ದು, ಅನ್ನಪೂಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಿಡದಕೊನೇನಹಳ್ಳಿಯ ಸಾಫ್ಟ್​ವೇರ್ ಇಂಜಿನಿಯರ್​ಗೆ ವಂಚನೆಗೆ ಯತ್ನಿಸಿದ್ದಾರೆ. ಕೆಲಸ ನಿಮಿತ್ತ ಬೆಲ್ಜಿಯಂಗೆ ಟೆಕ್ಕಿ ಹೋಗಿರುವ ಕಾರಣಕ್ಕೆ ಅವರ ತಂದೆ ಅನ್ನಪೂಣೇಶ್ವರಿನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಟ್ರೈನಿ ವೈದ್ಯೆ ಅತ್ಯಾಚಾರ-ಹತ್ಯೆ ಕೇಸ್​: ಆ. 17ರಂದು ದೇಶವ್ಯಾಪಿ ವೈದ್ಯರ ಮುಷ್ಕರಕ್ಕೆ ಐಎಂಎ ಕರೆ! ಹಲವು ಸೇವೆಗಳು ಸ್ಥಗಿತ
ಕೆಲಸ ನಿಮಿತ್ತ ಬೆಲ್ಜಿಯಂಗೆ ಹೋಗಿರುವ ಟೆಕ್ಕಿಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿ, ಮುಂಬೈ ಪೊಲೀಸ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನಿಮ್ಮ ಹೆಸರಿನಲ್ಲಿ ಫೆಡೆಕ್ಸ್ ಕೋರಿಯರ್​ನಲ್ಲಿ ವಿದೇಶಕ್ಕೆ ಕಾನೂನು ಬಾಹಿರ ವಸ್ತುಗಳು ಪಾರ್ಸೆಲ್ ಹೋಗುತ್ತಿವೆ. ಆದರಿಂದ ತನಿಖೆ ಸಲುವಾಗಿ ಸ್ಕೈಪ್ ಆಪ್​ನಲ್ಲಿ ವಿಡಿಯೋ ಕಾಲ್ ಮಾಡುವಂತೆ ಸೂಚಿಸಿದ್ದಾರೆ. ಹೆದರಿದ ಟೆಕ್ಕಿ, ಸ್ಕೈಪ್ ಆಪ್ ಡೌನ್​ಲೋಡ್ ಮಾಡಿಕೊಂಡು ಕರೆ ಮಾಡಿದಾಗ ತನಿಖೆ ನೆಪದಲ್ಲಿ ಸೈಬರ್ ಕಳ್ಳರು ವಿಚಾರಣೆ ಶುರು ಮಾಡಿದ್ದಾರೆ.
ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ವಿವರ ಪಡೆದು ಬ್ಯಾಂಕ್ ಖಾತೆ ಪರಿಶೀಲನೆ ನಡೆಸಬೇಕಿದೆ. ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುತ್ತೆವೆ ಎಂದು ಹೇಳುತ್ತಿದಂತೆ 19.92 ಲಕ್ಷ ರೂ. ಟೆಕ್ಕಿ ಖಾತೆಗೆ ಜಮೆಯಾಗಿದೆ. ಇದರಿಂದ ಅನುಮಾನಗೊಂಡ ಟೆಕ್ಕಿ, ಕಾಲ್ ಸ್ಥಗಿತ ಮಾಡಿ ತನ್ನ ಬ್ಯಾಂಕ್​ನ ಶಾಖೆಗೆ ಕರೆ ಮಾಡಿ ವಿಚಾರ ಮಾಡಿದಾಗ ‘ನಿಮ್ಮ ಹೆಸರಿನಲ್ಲಿ ಸಾಲ ಮಂಜೂರು ಆಗಿದೆ. ಅದರ ಇಎಂಐ ಪಾವತಿ ಮಾಡಬೇಕಾಗಿದೆ’ ಎಂದು ಮಾಹಿತಿ ಕೊಟ್ಟಿದ್ದಾರೆ. ಗಾಬರಿಗೊಂಡ ಟೆಕ್ಕಿ, ಯಾವುದೇ ಲೋನ್​ಗೆ ಅರ್ಜಿ ಸಲ್ಲಿಸದೆ ಇದ್ದರೂ ಸಾಲ ಮಂಜೂರು ಆಗಿರುವುದು ಕಂಡು ಅವರ ತಂದೆ ಕಡೆಯಿಂದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಉಪನ್ಯಾಸಕರಿಗೆ ಬ್ಲಾ್ಯಕ್​ವೆುೕಲ್ 4.50 ಲಕ್ಷ ರೂಪಾಯಿ ಸುಲಿಗೆ
ಸರ್ಕಾರಿ ಕಾಲೇಜೊಂದರ ಉಪನ್ಯಾಸಕರಿಗೆ ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿದ ಸೈಬರ್ ಕಳ್ಳರು ಬ್ಲಾ್ಯಕ್​ವೆುೕಲ್ ಮಾಡಿ 4.50 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ಬೃಂದಾವನನಗರದ ಉಪನ್ಯಾಸಕ ವಂಚನೆಗೆ ಒಳಗಾದವರು. ಇವರು ಕೇಂದ್ರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್ 7ರಂದು ಉಪನ್ಯಾಸಕರ ಮೊಬೈಲ್​ಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿ, ‘ನಿಮ್ಮ ಎಚ್​ಡಿಎಫ್​ಸಿ ಬ್ಯಾಂಕ್ ಖಾತೆಯ ಕ್ರೆಡಿಟ್ ಕಾರ್ಡ್’ ಅನ್ನು ಮುಂಬೈನಲ್ಲಿ ಮನಿ ಲ್ಯಾಂಡರಿಂಗ್​ನಲ್ಲಿ ದುರ್ಬಳಕ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಸೈಬರ್ ಕ್ರೖೆಂ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದ್ದಾರೆ. ಭಯಗೊಂಡ ಉಪನ್ಯಾಸಕನಿಗೆ ಮತ್ತೆ ಮತ್ತೊಬ್ಬ ಕರೆ ಮಾಡಿ ಸೈಬರ್ ಕ್ರೖೆಂ ಪೊಲೀಸ್ ಎಂದು ಪರಿಚಯ ಮಾಡಿಕೊಂಡು ‘ನಿಮ್ಮ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಬೇಕು. ಬ್ಯಾಂಕ್ ವಿವರ ಕೊಡುವಂತೆ’ ಸೂಚಿಸಿದ್ದಾನೆ. ಹೆದರಿ ಬ್ಯಾಂಕ್ ಖಾತೆ ವಿವರ ನೀಡಿದ್ದು, ಸೈಬರ್ ಕಳ್ಳರು ವ್ಯಾಲೆಟ್ ಮೂಲಕ ಹಂತ ಹಂತವಾಗಿ 4.50 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ನೊಂದ ಉಪನ್ಯಾಸ, ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ದೇಶದಲ್ಲಿ ಅರಾಜಕತೆ ಸೃಷ್ಟಿಗೆ ನಡೆಯುತ್ತಿದೆ ಯತ್ನ: ಕೆಂಪುಕೋಟೆ ಭಾಷಣದಲ್ಲಿ ಪ್ರಧಾನಿ ಎಚ್ಚರಿಕೆ
ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯನಾದ ಅಪರಿಚಿತ ವ್ಯಕ್ತಿಯ ಮಾತು ನಂಬಿ ಯುವಕನೊಬ್ಬ ಸ್ಟಾಕ್ ಮಾರ್ಕೆಟ್​ನಲ್ಲಿ 1.21 ಕೋಟಿ ರೂ. ಹೂಡಿಕೆ ಮಾಡಿ ಸೈಬರ್ ವಂಚನೆಗೆ ಒಳಗಾಗಿದ್ದಾನೆ. ಲಾಂಗ್​ಫೋರ್ಟ್ ಟೌನ್​ನ ಖಾಸಗಿ ಕಂಪನಿ ಉದ್ಯೋಗಿ ವಂಚನೆಗೆ ಒಳಗಾದವ. ಈತ ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
2023ರ ಡಿಸೆಂಬರ್​ನಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ ಯುವಕನಿಗೆ ಅಪರಿಚಿತ ವ್ಯಕ್ತಿ ಪರಿಚಯನಾಗಿ ಟ್ರೇಡಿಂಗ್ ವ್ಯವಹಾರದ ಬಗ್ಗೆ ಸಲಹೆ ನೀಡಿದ್ದಾನೆ. ಟ್ರೇಡಿಂಗ್​ನಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ಸಿಗಲಿದೆ. ಯಾವುದೇ ನಷ್ಟ ಇರುವುದಿಲ್ಲ. ಇದಕ್ಕೆ ಬೇಕಾದ ತರಬೇತಿ ಮತ್ತು ಸಲಹೆಗಳನ್ನು ಕೊಡುವುದಾಗಿ ನಂಬಿಸಿದ್ದಾನೆ.
ಇದನ್ನೂ ಓದಿ:ಕೋಲ್ಕತ್ತಾ ಟ್ರೖೆನಿ ವೈದ್ಯೆ ಹತ್ಯೆ ಪ್ರಕರಣ: ಆಸ್ಪತ್ರೆಯಲ್ಲಿ ದುಷ್ಕರ್ವಿುಗಳ ದಾಂಧಲೆ
ಹೂಡಿಕೆಗೆ ಒಪ್ಪಿದಾಗ ದೂರುದಾರ ಯುವಕನನ್ನು ತರಬೇತಿ ನೆಪದಲ್ಲಿ ವಾಟ್ಸ್​ಆಪ್ ಗ್ರೂಪ್​ಗೆ ಸೇರಿಸಿಕೊಂಡು ಕೆಲದಿನಗಳ ಕಾಲ ಟ್ರೇಡಿಂಗ್ ಕುರಿತು ಸಲಹೆ ಸೂಚನೆಗಳನ್ನು ಕೊಟ್ಟಿದ್ದ. ಇದಾದ ಮೇಲೆ ಹೂಡಿಕೆ ಮಾಡಲು ಶುರು ಮಾಡಿದ ಯುವಕನಿಗೆ ಒಂದೇ ತಿಂಗಳಲ್ಲಿ 1.07 ಲಕ್ಷ ರೂ. ಲಾಭ ಬಂದಿದೆ ಎಂದು ವಂಚಕರು ತೋರಿಸಿ ವಿಶ್ವಾಸ ಗಳಿಸಿದ್ದರು. ಲಾಭ ಕೈಸೇರಿದ ಕೂಡಲೇ ದುರಾಸೆಗೆ ಒಳಗಾದ ಯುವಕ, ವಂಚಕರು ಹೇಳಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹೂಡಿಕೆ ಮಾಡಿದ್ದ.
ಇತ್ತೀಚೆಗೆ ಲಾಭಾಂಶ ವಿತ್​ಡ್ರಾ ಮಾಡಲು ಪ್ರಯತ್ನ ಮಾಡಿದಾಗ ಸಾಧ್ಯವಾಗಲಿಲ್ಲ. ಈ ಬಗ್ಗೆ ಅಪರಿಚಿತ ವ್ಯಕ್ತಿಗೆ ಕರೆ ಮಾಡಿ ವಿಚಾರಿಸಿದಾಗ ಸಬೂಬು ಹೇಳಿ ಮುಂದೂಡಿದ್ದ. ಕೊನೆಗೆ ಹೂಡಿಕೆ ಆಪ್ ಸರ್ವರ್ ಡೌನ್ ಆಗಿದ್ದು, ನೊಂದ ಯುವಕ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾನೆ. ಆರೋಪಿಗಳ ವಿವರ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಸೈಬರ್ ಕ್ರೖೆಂ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ 34 ದಿನದಿಂದ ಊಟ ಮಾಡಿಲ್ಲ! 1.2 ಕೋಟಿ ರೂ. ಸಾಲವಿದೆ, ಕೈಯಲ್ಲಿ ಕೆಲಸವಿಲ್ಲ: ಕಣ್ಣೀರಿಟ್ಟ ನಟ

1 ಗ್ಲಾಸ್​ ಜ್ಯೂಸ್​… ಒಲಿಂಪಿಕ್ ಫೈನಲ್​ ಹಿಂದಿನ ರಾತ್ರಿ ನಡೆದಿದ್ದೇನು? ಅಚ್ಚರಿ ಮೂಡಿಸುತ್ತೆ ಈ ವರದಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − 7 =
Remember me
