ಬೆಂಗಳೂರು :ಬೆಂಗಳೂರು ಪೊಲೀಸರ ವಿರುದ್ಧ ಫೇಸ್​​ಬುಕ್​ನಲ್ಲಿ ಫೇಕ್​ ವಿಡಿಯೋ ಶೇರ್ ಮಾಡಿದ್ದ ವಿಚಾರವಾಗಿ ಬೆಂಗಳೂರಿನ ನಿವಾಸಿ ಪದ್ಮಾ ಹರೀಶ್ ಎಂಬುವರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಎಲ್ಲೋ ಯಾವಾಗಲೋ ವ್ಯಕ್ತಿಯೊಬ್ಬರ ಮೇಲೆ ಅಮಾನುಷವಾಗಿ ಲಾಠಿ ಚಾರ್ಜ್​ ನಡೆಸಿದ್ದ ಘಟನೆಯ ವಿಡಿಯೋ ಹಾಕಿ ಬೆಂಗಳೂರು ಪೊಲೀಸರ ವಿರುದ್ಧ ಬೆಟ್ಟು ಮಾಡಲಾಗಿತ್ತು ಎನ್ನಲಾಗಿದೆ.
2020ರ ಏಪ್ರಿಲ್​ 3 ರಂದು ಮುಂಬೈನಲ್ಲಿ ನಡೆದಿದ್ದ ಘಟನೆಯ ವಿಡಿಯೋವನ್ನು ಕನ್ನಡದಲ್ಲಿ ಹಿನ್ನೆಲೆ ಧ್ವನಿ ನೀಡಿ ಫೇಸ್​​ಬುಕ್​​ನಲ್ಲಿ ಪೋಸ್ಟ್​ ಮಾಡಿದ್ದರು. ಈ ಫೇಕ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗೆ ಬೆಂಗಳೂರು ಪೊಲೀಸರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಕಮಿಷನರ್ ಕಮಲ್ ಪಂತ್ ಸೂಚಿಸಿದ್ದರು. ಈ ಬಗ್ಗೆ ದಕ್ಷಿಣ ವಿಭಾಗ ಸಿಐಎನ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಇದನ್ನೂ ಓದಿ:ಹಿಂದೆ ಮುಂದೆ ಯೋಚ್ನೆ ಮಾಡ್ದೇ ಮೆಸೇಜ್‌ ಫಾರ್ವರ್ಡ್‌ ಮಾಡ್‌ತಿದ್ರೆ ಅಷ್ಟೇ… ಕಮಿಷನರ್‌ ಏನು ಹೇಳಿದ್ದಾರೆ ನೋಡಿ…
ಸದ್ಯ, ಈ ಪ್ರಕರಣದಲ್ಲಿ ಓರ್ವ ರಾಜಕೀಯ ಹಿನ್ನೆಲೆಯುಳ್ಳ ಪದ್ಮಾ ಹರೀಶ್ ಎನ್ನುವ ಮಹಿಳೆಗೆ ಪೊಲೀಸರು ನೋಟಿಸ್ ನೀಡಿದ್ದು, ಆಕೆ ವಿಚಾರಣೆಗೆ ಹಾಜರಾಗಿದ್ದಾರೆ. ಫೇಕ್ ವಿಡಿಯೋ ಪೋಸ್ಟ್ ಮಾಡಿದ್ದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮೇ 1 ರಿಂದ 18 ರಾಜ್ಯಗಳಿಗೆ ಕೋವಾಕ್ಸಿನ್ ಪೂರೈಕೆ ನಡೆಯುತ್ತಿದೆ : ಭಾರತ್ ಬಯೋಟೆಕ್

ಎಚ್ಚರಿಕೆ ! ಸತ್ತವರ ಬಟ್ಟೆಯನ್ನೂ ಕದಿಯುವವರಿದ್ದಾರೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + five =
Remember me
