ಬೆಳಗಾವಿ:ವಡೇರಹಟ್ಟಿ ಗ್ರಾಮದಲ್ಲಿ ಪತ್ನಿ ಎದರೇ ನಡೆದಿದ್ದ ಗಂಡನ ಭೀಕರ ಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೊಲೆಯಾದ ಶಂಕರ ಜಗಮುತ್ತಿ ಪತ್ನಿ ಪ್ರಿಯಾಂಕಾ ಜಗಮುತ್ತಿಯನ್ನು ಮೂಡಲಗಿ ಪೊಲೀಸರು ಬಂಧಿಸಿದ್ದಾರೆ.
ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ನಿನ್ನೆ (ಜು.17) ಹತ್ಯೆ ನಡೆದಿದೆ. ಭೀಮನ‌ ಅಮಾವಾಸ್ಯೆ ಹಿನ್ನೆಲೆ ಗಂಡನ ಪಾದ ಪೂಜೆ ಮಾಡಿ, ಕೊಲೆಗೆ ಮುಹೂರ್ತ ಇಟ್ಟಿದ್ದಳು. ಊರ ಹೊರ ವಲಯದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಗಂಡನನ್ನು ಪ್ರಿಯಾಂಕಾ‌ ಕರೆದುಕೊಂಡುಬಂದಿದ್ದಳು.ಇದಕ್ಕೂ ಮುನ್ನ ಮನೆ ಬಿಡುವ ವೇಳೆ ಪ್ರಿಯಕರ ಶ್ರೀಧರ್​ಗೆ ಕರೆ ಮಾಡಿ ದೇವಸ್ಥಾನಕ್ಕೆ ಬಂದಿದ್ದಳು.
ಇದನ್ನೂ ಓದಿ: ವಿಪಕ್ಷಗಳ ಒಗ್ಗಟ್ಟಿನ ಕಹಳೆ: ಬೆಂಗಳೂರಿನಲ್ಲಿ ಮಹಾಘಟಬಂಧನ್ ಸಭೆ; ಇಂದು ನಿರ್ಣಯ
ದೇವರ ದರ್ಶನ ಮುಗಿಸಿಕೊಂಡು ವಾಪಸ್ಸು ಬರುತ್ತಿದ್ದಂತೆ ಚಾಕುವಿನಿಂದ ಇರಿದು ಶಂಕರ ಜಗಮುತ್ತಿಯನ್ನು ಶ್ರೀಧರ್​ ಕೊಲೆ ಮಾಡಿದ್ದಾನೆ. ಬೈಕ್ ತೆಗೆದುಕೊಂಡು ಬನ್ನಿ ಎಂದು ಹೇಳಿ ಪ್ರಿಯಾಂಕಾ ದೂರದಲ್ಲಿ ನಿಂತಿದ್ದಳು. ಇದೇ ವೇಳೆ ಬಂದ ಶ್ರೀಧರ್​, ಶಂಕರ್​ ಕತ್ತಿಗೆ ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದ.
ಕೊಲೆ ಬಳಿಕ ಏನೂ ಗೊತ್ತಿಲ್ಲದಂತೆ ಪ್ರಿಯಾಂಕಾ ಕಣ್ಣೀರಿನ ನಾಟಕವಾಡಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿ ಶ್ರೀಧರ್ ಮತ್ತು ಪ್ರಿಯಾಂಕಾ ನಡುವೆ ಸಂಬಂಧ ಇರುವುದು ಬೆಳಕಿಗೆ ಬಂದಿತು. ಕಾಲ್ ರೆಕಾರ್ಡ್, ಕಾಲ್ ಡಿಟೈಲ್ಸ್ ಹೀಗೆ ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಪ್ರಿಯಾಂಕಾಳನ್ನು ಬಂಧಿಸಲಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೊಲೆ ಆರೋಪಿ ಶ್ರೀಧರ್​ನನ್ನು ಮೂಡಲಗಿ ಪೊಲೀಸರು ಬಂಧಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಅನಾರೋಗ್ಯಕ್ಕೀಡಾದ ಚಾಲಕನನ್ನು ಆಸ್ಪತ್ರೆಗೆ ಸೇರಿಸಿ ಸ್ವತಃ ಬಿಎಂಟಿಸಿ ಬಸ್​ ಚಲಾಯಿಸಿದ ಎಸಿಪಿ ರಾಮಚಂದ್ರ!

ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಜೆಟ್​ನಲ್ಲಿ ಅನುದಾನ ಕಡಿಮೆ: ಪರಿಷತ್​ನಲ್ಲಿ ವಿಜಯವಾಣಿ ವರದಿಗಳು ಪ್ರಸ್ತಾಪ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × five =
Remember me
