ಬೆಂಗಳೂರು:ಅಪಾರ್ಟ್​ಮೆಂಟ್​ನ ಕುಡಿಯುವ ನೀರಿನ ಟ್ಯಾಂಕ್​ಗೆ ಬಿದ್ದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಲಹಂಕನ್ಯೂ ಟೌನ್​ನ ನಾಲ್ಕನೆ ಹಂತದಲ್ಲಿ ನಡೆದಿದೆ.
ಗೌರಿ ನಾಗರಾಜ್ ಮೃತ ಮಹಿಳೆ. ಹಣಕಾಸು ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶುಕ್ರವಾರ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಭಾನುವಾರ ಮಹಿಳೆಯ ಶವ ಕುಡಿಯುವ ನೀರಿನ ಟ್ಯಾಂಕ್​ನಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ:ಇನ್ಮುಂದೆ ಲಾಕ್​ಡೌನ್​ ಬಗ್ಗೆ ಚರ್ಚಿಸುವುದೇ ಇಲ್ಲ: ಸಿಎಂ ಬಿ.ಎಸ್​.ಯಡಿಯೂರಪ್ಪ
ಆತಂಕಕಾರಿಯೆಂದರೆ ಕಳೆದ ಮೂರು ದಿನದಿಂದ ಅಪಾರ್ಟ್​ಮೆಂಟ್​ ನಿವಾಸಿಗಳು ಸ್ನಾನಕ್ಕೆ, ಕುಡಿಯುವುದಕ್ಕೆ ಹಾಗೂ ಮನೆ‌ ಕೆಲಸಕ್ಕೆ ಎಲ್ಲದಕ್ಕು ಅದೇ ನೀರು ಬಳಸಿದ್ದರು. ಇದೀಗ ಟ್ಯಾಂಕ್​​ನಲ್ಲಿ ಶವ ಪತ್ತೆಯಾದ ಬೆನ್ನಲ್ಲೆ ಭಯಭೀತಗೊಂಡಿದ್ದಾರೆ. ಅಪಾರ್ಟ್​ಮೆಂಟ್​ನಲ್ಲಿ ಸುಮಾರು ಅರವತ್ತಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ.
ಸದ್ಯ ಮೃತ ದೇಹ ಹೊರತೆಗೆದು ಮರಣೊತ್ತರ ಪರೀಕ್ಷೆಗೆ ಕಳಿಸಲಾಗಿದೆ. ಮಹಿಳೆಗೆ ಕರೊನಾ‌ ಇದ್ಯಾ ಇಲ್ವಾ ಎಂಬುದರ ಬಗ್ಗೆ ತಪಾಸಣೆ ಮಾಡಲಾಗುತ್ತಿದೆ. ಘಟನೆಯ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೆತ್​ನೋಟ್​ ಪತ್ತೆಮೃತ ಗೌರಿ ಸುಮಾರು ಹತ್ತು ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿದ್ದು, ಜಯಸೂರ್ಯ ಬಿಲ್ಡರ್ಸ್ ಮೇಲೆ ಆರೋಪ‌ ಮಾಡಿದ್ದಾರೆ. ಹಣ ಕೊಡಬೇಕು ಎಂದು ಜಯಸೂರ್ಯ ಬಿಲ್ಡರ್ಸ್​ನ ಮೂರು ಸದಸ್ಯರಾದ ಗೋಪಿ, ಭಾರ್ಗವ್ ಹಾಗೂ ದೇವರಾಜೇಂದ್ರಪ್ಪ ಎಂಬುವರ ವಿರುದ್ಧ ದೂರಿದ್ದಾರೆ. ಮೃತ ಗೌರಿನಾಗರಾಜ್ ಸೈಟ್ ಕೊಡಿಸುವ ವ್ಯವಹಾರ ಮಾಡುತ್ತಿದ್ದರು. ಸದ್ಯ ಮಹಿಳೆಯ ಡೆತ್ ನೋಟ್ ಆಧಾರದ ಮೇಲೆ ಜಯಸೂರ್ಯ ಬಿಲ್ಡರ್ಸ್​ನ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಒಂಟಿತನಕ್ಕೆ ಬೈ ಬೈ ಹೇಳಿದ್ರು ಹಾಟ್​ ಬೆಡಗಿ ಪೂನಂ ಪಾಂಡೆ; ಬಹುಕಾಲದ ಗೆಳೆಯನ ಜತೆ ಎಂಗೇಜ್ಡ್..
ಈ ಸ್ಥಳಕ್ಕೆ ಹೋಗಲು ಹೆದರುತ್ತಿರುವ ಗ್ರಾಮಸ್ಥರು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eleven =
Remember me
