ಬೀದರ್:ನಾನು ಮಾಡಿದ್ದು ಸರಿಯೋ? ತಪ್ಪೋ? ಗೊತ್ತಿಲ್ಲ. ನನ್ನನ್ನು ಎಲ್ಲರೂ ಕ್ಷಮಿಸಿಬಿಡಿ ಎಂದು ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿಟ್ಟು ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಸವಕಲ್ಯಾಣ ನಗರದ ಹಿರೇಮಠ ಕಾಲನಿಯಲ್ಲಿ ಮಂಗಳವಾರ ನಡೆದಿದೆ.
ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಕರಹರಿ ಗ್ರಾಮದ ತ್ರಿಶೂಲಾ ಮಾರುತಿ ಕಟ್ಟಿಮನಿ(35) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ತನ್ನ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ನಗರದ ಹಿರೇಮಠ್ ಕಾಲನಿಯಲ್ಲಿ ವಾಸವಾಗಿದ್ದರು.ಇದನ್ನೂ ಓದಿ:ಫೇಸ್​ಬುಕ್​ನಲ್ಲಿ ಅಪರಿಚಿತ ಮಹಿಳೆ ಜತೆ ಸ್ನೇಹ ಬೆಳೆಸಿದವನ ಧರ್ಮಸಂಕಟ ಹೇಳ ತೀರದು…!
ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್​ನಲ್ಲಿ ವಿಡಿಯೊ ರೆಕಾರ್ಡ್ ಆನ್ ಮಾಡಿ, ನಾನು ಮಾಡಿದ್ದು ಸರಿಯೋ? ತಪ್ಪೋ? ಗೊತ್ತಿಲ್ಲ. ನನ್ನನ್ನು ಎಲ್ಲರೂ ಕ್ಷಮಿಸಿಬಿಡಿ. ನನ್ನ ಸಾವಿಗೆ ನಾನೇ ಕಾರಣವೆಂದು ಹೇಳಿ ಸಾವನ್ನಪ್ಪಿದ್ದಾರೆ.
ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿದ ವಿಡಿಯೋ ಪೊಲೀಸರ ಕೈಗೆ ಸಿಗುತ್ತೊ? ಇಲ್ಲವೊ? ಎಂಬ ಅನುಮಾನದಿಂದ ಬಿಳಿ ಹಾಳೆಯೊಂದರ ಮೇಲೆ ಮೊಬೈಲ್​ನಲ್ಲಿ ರೆಕಾರ್ಡಿಂಗ್ ಇದೆ, ಅದನ್ನು ಪರಿಶೀಲಿಸಿ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.ಇದನ್ನೂ ಓದಿ:ಪುತ್ರನನ್ನು ಕಾರಿನಲ್ಲಿ ಕೂರಿಸಿ ಪತ್ನಿಯ ಹತ್ಯೆ: ಟೆಕ್ಕಿ ಕೃತ್ಯದ ಸ್ಪೋಟಕ ಮಾಹಿತಿ ತನಿಖೆಯಲ್ಲಿ ಬಹಿರಂಗ
ಘಟನೆ ಸಂಬಂಧ ಬೀದರ್​ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಆನ್​ಲೈನ್​ನಲ್ಲಿ ಬಿಕಿನಿ ಫೋಟೋ ಪೋಸ್ಟ್​ ಮಾಡಿದ ಬೆನ್ನಲ್ಲೇ ಹೆಣವಾದ ಸಲಿಂಗಿ ಜೋಡಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nine =
Remember me
