ಬಳ್ಳಾರಿ:ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಆಕೆಯ ಸಾವಿನ ಕುರಿತಂತೆ ಈಗ ವಿವಾದ ಉಂಟಾಗಿದೆ. ಆಕೆ ಸತ್ತಿದ್ದು ಹೊಟ್ಟೆನೋವಿನಿಂದಾಗಿಯೋ ಅಥವಾ ಗಂಡನಿಂದಾಗಿಯೋ ಎಂಬ ಕುರಿತು ವಾಗ್ವಾದ ನಡೆಯಲಾರಂಭಿಸಿದ್ದು, ಪ್ರಕರಣ ಕಗ್ಗಂಟಾಗಿ ಪರಿಣಮಿಸಿದೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂಜಲಿ ಎಂಬ ಗೃಹಿಣಿಯ ಶವ ನಿನ್ನೆ ನೇಣು ಹಾಕಿದ ಸ್ಥಿತಿಯಲ್ಲಿ ಮನೆಯಲ್ಲೇ ಕಂಡುಬಂದಿತ್ತು. ಆಕೆ ಹೊಟ್ಟೆನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಈಗ ಆಕೆಯದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಗ್ರಾಮಸ್ಥರಿಂದ ಗಲಾಟೆ ಎಬ್ಬಿಸಿದ್ದಾರೆ. ಹೊಟ್ಟೆನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಿನ್ನೆ ದೂರು ನೀಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮಹಿಳೆಯ ಅಂತಿಮ ಸಂಸ್ಕಾರ ಮಾಡಲಾಗಿದೆ. ಆದರೆ ಗ್ರಾಮಸ್ಥರು ಈಗ ಅದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆಕ್ಷೇಪ ಎತ್ತಿದ್ದಾರೆ.
ಇದನ್ನೂ ಓದಿ:ವೃದ್ಧ ಚಿಲ್ಲರೆ ಕೊಟ್ಟಿದ್ದಕ್ಕೆ ಸಾಲಲ್ಲ ಎಂದು 6 ಸಾವಿರ ರೂ. ಕಸಿದುಕೊಂಡು ಹೋದ ಮಂಗಳಮುಖಿಯರ ಬಂಧನ
ಗಂಡನ ಕಡೆಯವರು ಇದೊಂದು ಆತ್ಮಹತ್ಯೆ ಎನ್ನುತ್ತಿದ್ದಾರೆ. ಆದರೆ ಗ್ರಾಮಸ್ಥರು ಇದನ್ನು ಕೊಲೆ ಎನ್ನುತ್ತಿದ್ದಾರೆ ಎಂದು ಅಂಜಲಿಯ ತವರು ಮನೆಯವರು ಹೇಳುತ್ತಿದ್ದಾರೆ. ಪತಿ ಗಂಗಾಧರನೇ ಕೊಲೆ ಮಾಡಿದ್ದು, ನೇಣು ಹಾಕಿಕೊಂಡಿದ್ದಾಳೆ ಎಂದು ನಾಟಕವಾಡಿದ್ದಾರೆ ಎಂಬುದಾಗಿ ಗ್ರಾಮಸ್ಥರು ಆರೋಪಿಸಿ, ಆತನ ಮನೆಗೆ ಮುತ್ತಿಗೆ ಹಾಕಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಂಗಾಧರನನ್ನು ಬಂಧಿಸುವಂತೆ ಗ್ರಾಮಸ್ಥರಿಂದ ಒತ್ತಾಯ ಕೇಳಿ ಬಂದಿದೆ.
ರಾತ್ರಿ ಪಾಳಿಯಲ್ಲಿ ನಿದ್ರಿಸುತ್ತಿದ್ದ ಪೊಲೀಸರಿಬ್ಬರ ಅಮಾನತು!

ನಿಮ್ಮ ಏರಿಯಾಗೆ ಹೊಸ ಸಬ್​ ಇನ್​ಸ್ಪೆಕ್ಟರ್​?; 61 ಪಿಎಸ್​ಐಗಳ ವರ್ಗಾವಣೆ, ಇಲ್ಲಿದೆ ಪೂರ್ತಿ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − thirteen =
Remember me
