ಬೆಂಗಳೂರು:ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ಮಗಳ ಮನೆಗೆಂದು ಮೈಸೂರಿನಿಂದ ಬಂದ ಮಹಿಳೆ, ಬಸ್​ ನಿಲ್ದಾಣದಲ್ಲೇ ದುರ್ಮರಣಕ್ಕೀಡಾದ ಘಟನೆ ಶನಿವಾರ ನಗರದಲ್ಲಿ ಸಂಭವಿಸಿದೆ.
ಮಹಿಳೆಯು ಶನಿವಾರ ಬೆಳಗ್ಗೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಕೆಂಗೇರಿಯ ಬಸ್ ನಿಲ್ದಾಣದಲ್ಲಿ ಬಸ್​ ಇಳಿಯುವಾಗ ಜಾರಿಬಿದ್ದ ಅವರ ಮೇಲೆ ಬಸ್​ನ ಚಕ್ರ ಹರಿದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದರು.
ಹಬ್ಬದ ದಿನವೇ ಬಸ್​ಗೆ ಮಹಿಳೆ ಬಲಿಯಾದ ದೃಶ್ಯದ ಭೀಕರತೆ ಕಂಡ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಮಗಳ ಮನೆಯಲ್ಲಿ ಹಬ್ಬ ಮಾಡಲೆಂದು ಖುಷಿಯಾಗಿ ಬರುತ್ತಿದ್ದ ತಾಯಿ, ಮಗಳನ್ನು ನೋಡುವ ಮೊದಲೇ ದುರಂತ ಅಂತ್ಯಕಂಡಿದ್ದಾರೆ ಎಂದು ಸಹ ಪ್ರಯಾಣಿಕರು ಮಾತನಾಡಿಕೊಳ್ಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಮಗಳನ್ನೇ ಮರ್ಯಾದಾ ಹತ್ಯೆ ಮಾಡಿದ ಅಪ್ಪ-ಮಕ್ಕಳು! ಈ ನಡುವೆ ಗ್ಯಾಂಗ್​ ರೇಪ್​ ವದಂತಿ ಹಬ್ಬಿಸಿದ್ದೇಕೆ?

ನನಗೆ ಮದ್ವೆ ಮಾಡಿ ಎಂದು ಪೀಡಿಸುತ್ತಿದ್ದ 22ರ ಯುವಕನ ದುರಂತ ಅಂತ್ಯ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:12 + 6 =
Remember me
