ಬೆಂಗಳೂರು: ಕುಟುಂಬದವರ ನಿರೀಕ್ಷೆ, ವೈದ್ಯರ ಭರವಸೆ ಯಾವುದೂ ಫಲಿಸದೆ ಸತತ ಆರೂವರೆ ವರ್ಷಗಳಿಂದ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 35 ವರ್ಷದ ಮಹಿಳೆ ಬುಧವಾರ ಮೃತಪಟ್ಟಿದ್ದಾರೆ.
‘ಪೂನಂ ರಾಣಾ ಎಂಬುವವರು 2015ರ ಅಕ್ಟೋಬರ್ 3ರಂದು ಹೊಟ್ಟೆ ನೋವಿನ ಸಮಸ್ಯೆಯಿಂದಾಗಿ ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ನಂತರದಲ್ಲಿ ಆರೋಗ್ಯದಲ್ಲಿ ಹಲವು ಬದಲಾವಣೆಗಳು ಆದವು. ಇದುವರೆಗೆ ಎಲ್ಲ ವಿಧದ ಆರೈಕೆಯನ್ನು ಮಾಡಲಾಗಿದೆ. ಎಲ್ಲ ಪ್ರಯತಗಳ ನಡುವೆ ಮೇ 24ರಂದು ಮಧ್ಯಾಹ್ನ 12ಕ್ಕೆ ಮೃತರಾದರು ಎಂದು ಮಣಿಪಾಲ್ ಆಸ್ಪತ್ರೆ ಮೂಲಗಳು ತಿಳಿಸಿವೆ.
ಪೂನಂ ಅವರ ಪತಿ ರಾಜೇಶ್ ನಾಯರ್ ಕೇರಳ ಮೂಲದವರಾಗಿದ್ದು, ಪೂನಂ ದೆಹಲಿ ಮೂಲದವರಾಗಿದ್ದರು. ಇಬ್ಬರು ಉದ್ಯೋಗ ಕಾರಣಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಆರು ವರ್ಷ ಏಳು ತಿಂಗಳ ಕಾಲ ನಡೆದ ಚಿಕಿತ್ಸೆಗೆ ಒಟ್ಟು 9.5 ಕೋಟಿ ರೂ. ಆಸ್ಪತ್ರೆ ಶುಲ್ಕವಾಗಿದ್ದು, 2 ಕೋಟಿ ರೂ. ಪಾವತಿಸಲಾಗಿದೆ ಎಂದು ಹೇಳಿದೆ.
ಶೂಟ್​ ಮಾಡ್ಕೊಂಡು ಉದ್ಯಮಿ ಆತ್ಮಹತ್ಯೆ; ಡೆತ್​ನೋಟ್​ನಲ್ಲಿತ್ತು ಆ ಇಬ್ಬರ ಹೆಸರು..

ಟಿಪ್ಪು ಪ್ಯಾಲೇಸ್ ಕೂಡ ದೇವಸ್ಥಾನದ ಜಾಗವೇ!; ಬೇಸಿಗೆ ಅರಮನೆ ಅತಿಕ್ರಮಣದ ನಿರ್ಮಾಣ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + seven =
Remember me
