ಹಾವೇರಿ:ಮಗಳನ್ನು ವಿದೇಶಕ್ಕೆ ಕಳುಹಿಸಿ ಮನೆಗೆ ಹಿಂತಿರುಗುವಾಗ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ತಾಯಿ ಮೃತಪಟ್ಟಿರುವ ದಾರುಣ ಘಟನೆ ರಾಣೇಬೆನ್ನೂರು ಬಳಿ ಇಂದು (ಜುಲೈ 19) ನಡೆದಿದೆ.
ಜಯಂತಿ (50) ಮೃತ ದುರ್ದೈವಿ. ಕಾರು ಚಾಲಕ ವಿಠ್ಠಲ್ (47) ಸಹ ಅಸುನೀಗಿದ್ದಾರೆ. ಮೃತರು ಶಿರಸಿ ತಾಲೂಕಿನ ಹುಲೆಕಲ್ ಗ್ರಾಮದವರು. ಜಯಂತಿ ಅವರು ತಮ್ಮ ಮಗಳನ್ನು ದುಬೈ ಕಳುಹಿಸಲು ಬೆಂಗಳೂರಿನ ಏರ್ಪೋಟ್ಸ್​ ಬಂದಿದ್ದರು. ಮಗಳನ್ನು ವಿಮಾನವೇರಿಸಿ ಶಿರಸಿಗೆ ವಾಪಸ್ಸಾಗುತ್ತಿದ್ದರು. ರಾಣೇಬೆನ್ನೂರು ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.
ಇದನ್ನೂ ಓದಿ:ದಲಿತರ ಭೂಮಿ ಮರುವಶಕ್ಕೆ ಕಾಲಮಿತಿ ಇಲ್ಲ: ಅಕ್ರಮ ಪರಭಾರೆಗೆ ಸರ್ಕಾರದ ಕಡಿವಾಣ, ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ
ಹುಣಸೆ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಎ 27 ಎಂ 3669 ಸಂಖ್ಯೆಯ ಅಲ್ಟೋ ಕಾರಿನಲ್ಲಿ ಬೆಂಗಳೂರಿನಿಂದ ಶಿರಸಿಗೆ ಬರುವಾಗ ದುರ್ಘಟನೆ ಸಂಭವಿಸಿದೆ. ನಿರಂತರವಾಗಿ ಕಾರು ಚಾಲನೆ ಮಾಡಿರುವ ಹಿನ್ನೆಲೆ ನಿದ್ದೆ ಕಣ್ಣಿನಲ್ಲಿ ಕಾರಿನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
ಮಾಹಿತಿ ತಿಳಿದ ಕೂಡಲದೇ ಹಲಗೇರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
I.N.D.I.A. ಹೆಸರಿನ ಬೆನ್ನಲ್ಲೇ ಜೀತೇಗಾ ಭಾರತ​ ಎಂಬ ಟ್ಯಾಗ್​ಲೈನ್​ ಅಂತಿಮಗೊಳಿಸಿದ ವಿಪಕ್ಷಗಳು

ಟೊಮ್ಯಾಟೊ ಬೆಳೆ ಕಾಯುತ್ತಿದ್ದ ರೈತನ ಹತ್ಯೆ! ಒಂದೇ ವಾರದಲ್ಲಿ ಎರಡನೇ ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − three =
Remember me
