ಬ್ಯಾಡಗಿ:ಅಮಾವಾಸ್ಯೆ ಕಳೆದು ಇಂದು ಶ್ರಾವಣ ಶುರುವಾಗಿದೆ. ಶ್ರಾವಣ ಮಾಸದ ಮೊದಲ ದಿನದ ಪೂಜೆಗೆಂದು ಮಹಿಳೆಯೊಬ್ಬರು ಸ್ನಾನಕ್ಕೆ ತೆರಳಿದ್ದಾಗಲೇ ಮನೆ ಕುಸಿದಿದ್ದು, ಆಕೆ ಸಾವಿಗೀಡಾಗಿದ್ದಾರೆ. ಅದೃಷ್ಟವಶಾತ್ ಮನೆಯಲ್ಲಿನ ಉಳಿದವರು ಆ ಸಮಯದಲ್ಲಿ ಹೊರಗೆ ಹೋಗಿದ್ದರಿಂದ ಹೆಚ್ಚಿನ ಸಾವು-ನೋವು ತಪ್ಪಿಹೋಗಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ಬ್ಯಾಡಗಿ ತಾಲೂಕು ತಡಸ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಪದ್ಮವ್ವ ಶಿವನಗೌಡ ಪಾಟೀಲ (65) ಎಂಬವರು ಸಾವಿಗೀಡಾಗಿದ್ದಾರೆ. ಈ ಸಂದರ್ಭದಲ್ಲಿ ಈಕೆಯ ಮಕ್ಕಳು, ಸೊಸೆಯಂದಿರುವ ಹೊಲಕ್ಕೆ ಹೋಗಿದ್ದರು, ಮೊಮ್ಮಕ್ಕಳು ಶಾಲೆಗೆ ತೆರಳಿದ್ದರು.
ಕುಸಿದ ಮನೆಯಡಿ ಮಹಿಳೆ ಸಿಕ್ಕಿ ಮೊಳೆಗಳು ಚುಚ್ಚಿಕೊಂಡಿದ್ದವು. ಅವರನ್ನು ಕೂಡಲೇ ಬ್ಯಾಡಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭೇಟಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಗಳ ಮನೆಯಿಂದ ವಾಪಸ್ ಹೊರಟಿದ್ದ ತಾಯಿ-ಮಗ ಇಬ್ಬರೂ ಮಾರ್ಗಮಧ್ಯೆ ಸಾವು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
