ಬೆಂಗಳೂರು:ಕಾರು ಸ್ಟಾರ್ಟ್​ ಮಾಡುವ ಮುನ್ನ ಒಮ್ಮೆ ಗೇರ್​ ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಇಲ್ಲವಾದರೆ ಏನೆಲ್ಲಾ ಸಂಭವಿಸಬಹುದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆ ಈ ಒಂದು ಘಟನೆ ಉದಾಹರಣೆಯಾಗಿದೆ.
ರಿವರ್ಸ್​ ಗೇರ್​ನಲ್ಲಿರುವುದನ್ನು ಗಮನಿಸದೇ ಕಾರು ಸ್ಟಾರ್ಟ್​ ಮಾಡಿದ ಬಳಿಕ ಸಂಭವಿಸಿದ ಅನಾಹುತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ಬುಧವಾರ ಮಧ್ಯಾಹ್ನ 2:50ರ ಸುಮಾರಿಗೆ ನ್ಯೂ ಬಿಇಎಲ್ ರಸ್ತೆಯ ಆರ್ ಕೆ ಗಾರ್ಡನ್ 4ನೇ ಕ್ರಾಸಿನಲ್ಲಿ ನಡೆದಿದೆ. ಮೃತರನ್ನು ನಂದಿನಿ ರಾವ್ (45) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ತೆಲಂಗಾಣದಿಂದ ಕರ್ನಾಟಕಕ್ಕೆ ಕೃಷ್ಣಾಘಾತ?: ಸುಪ್ರೀಂಕೋರ್ಟ್​ನಿಂದ ಪ್ರಕರಣ ಹಿಂಪಡೆಯಲು ಕೆಸಿಆರ್ ಸರ್ಕಾರ ನಿರ್ಧಾರ
ರಿವರ್ಸ್ ಗೇರ್​ನಲ್ಲಿರುವುದನ್ನು ಗಮನಿಸದ ನಂದಿನಿ, ಅಜಾಗರೂಕತೆಯಿಂದ ತಮ್ಮ ಕಾರಿನ ಬಾಗಿಲ ಹೊರಗಡೆ ನಿಂತುಕೊಂಡೆ ಕಾರು ಸ್ಟಾರ್ಟ್ ಮಾಡಿದ್ದಾರೆ. ಮೊದಲೇ ರಿವರ್ಸ್​ ಗೇರ್​ನಲ್ಲಿದ್ದರಿಂದ ವಾಹನ ಹಿಂದಕ್ಕೆ ಚಲಿಸಿದೆ. ಈ ವೇಳೆ ಕಾರಿನ ಬಾಗಿಲು ಮತ್ತು ಪಕ್ಕದ ಮರದ ನಡುವೆ ಸಿಕ್ಕಿ ನಂದಿನಿ ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ನಂದಿನಿ ಅವರನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಪರೀಕ್ಷಿಸುವಷ್ಟರಲ್ಲಿ ನಂದಿನಿ ಉಸಿರು ನಿಂತು ಹೋಗಿತ್ತು. ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಸಿಬಿಐ ಮಾಜಿ ನಿರ್ದೇಶಕ, ನಾಗಾಲ್ಯಾಂಡ್​ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್ ಆತ್ಮಹತ್ಯೆ ಬೆನ್ನಲ್ಲೇ ಡೆತ್​ನೋಟ್​ ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 6 =
Remember me
