ಬೆಂಗಳೂರು:ದ್ವಿಚಕ್ರ ವಾಹನದ ಮೇಲೆ ಹೋಗುತ್ತಿದ್ದಾಗ ಸ್ಕಿಡ್ ಆಗಿ ಬಿದ್ದು ಅಪಘಾತವಾಗಿ 35 ವರ್ಷದ ಮಹಿಳೆ‌ ಸಾವಿಗೀಡಾಗಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅವರು ಎಂಜಿ ರಸ್ತೆ ಕಡೆ ಬೆಳಗ್ಗೆ 8.15ರ ವೇಳೆ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ವಾಹನವೊಂದರ ಆಯಿಲ್ ಲೀಕಾಗಿದೆ. ಆಗ ನಿಧಾನ ಗತಿಯಲ್ಲಿಯೇ ವಾಹನಗಳು ಹೋಗುತ್ತಿದ್ದವು. ಲೀಕ್​ ಆಗುತ್ತಿದ್ದ ಆಯಿಲ್ ಮೇಲೆಯೇ ಹೋಗುತ್ತಿದ್ದ ಮಹಿಳೆ ಸ್ಕಿಡ್ ಆಗಿ ಎಡ ಭಾಗಕ್ಕೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಹಿಂಬದಿ ಚಕ್ರ ಮಹಿಳೆ ತಲೆಯ ಮೇಲೆ ಹತ್ತಿದೆ. ಈ ಸಂದರ್ಭ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಅವರ ಸಾವಿಗೆ ಹೆಲ್ಮೆಟ್ ಕೂಡ ಕಾರಣ ಎನ್ನಲಾಗುತ್ತಿದ್ದು ಅಪಘಾತ ಸಂಭವಿಸಿದ ಸಂದರ್ಭ ಆ ಮಹಿಳೆ ಕಳಪೆ ಗುಣಮಟ್ಟದ ಧರಿಸಿದ್ದರು. ಇದರಿಂದ ತಲೆಗೆ ಬಲವಾದ ಏಟು ಬಿದ್ದಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
