ಬೆಂಗಳೂರು:ಆನ್‌ಲೈನ್ ಶಾಪಿಂಗ್‌ನಲ್ಲಿ 300 ರೂ. ಮೌಲ್ಯದ ಸರ ಖರೀದಿಸಲು ಹೋದ ಗಂಗೊಂಡನಹಳ್ಳಿಯ ಯುವತಿಗೆ ಸೈಬರ್ ಕಳ್ಳರು ಬರೋಬ್ಬರಿ 1 ಲಕ್ಷ ರೂ. ವಂಚನೆ ಮಾಡಿದ್ದಾರೆ.
ಜೂ.11ರಂದು ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಈ ಯುವತಿ 300 ರೂ. ಮೌಲ್ಯದ ಸರವನ್ನು ಬುಕ್ ಮಾಡಿ ಮೊಬೈಲ್ ನಂಬರ್ ಮತ್ತು ವಿಳಾಸ ನಮೂದು ಮಾಡಿದ್ದರು. ಇದಾದ ಮೇಲೆ ಅಪರಿಚಿತ ವ್ಯಕ್ತಿ, ಕರೆ ಮಾಡಿ ನಿಮ್ಮ ಬುಕ್ಕಿಂಗ್ ಸರಿಯಾಗಿ ಆಗಿಲ್ಲ. ಅದಕ್ಕಾಗಿ ನಿಮ್ಮ ಹಣವನ್ನು ವಾಪಸ್ ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡುತ್ತೇವೆ. ಬ್ಯಾಂಕ್ ಖಾತೆ ಲಿಂಕ್ ಆಗಿರುವ ಮೊಬೈಲ್ ನಂಬರ್ ತಿಳಿಸಿ ಎಂದು ಕೇಳಿದ್ದಾನೆ.
ಇದನ್ನೂ ಓದಿಈ ವೀರಕಲಿಗಳಿಗೆ ನಿಮ್ಮದೊಂದು ಸಲಾಂ ಇರಲಿ..! 20 ಹುತಾತ್ಮ ಯೋಧರ ಪಟ್ಟಿ ಇಲ್ಲಿದೆ
ಇದನ್ನು ನಂಬಿದ ಯುವತಿ, ನಂಬರ್ ಕೊಟ್ಟಿದ್ದು, ಅದಕ್ಕೆ ಆತ ಲಿಂಕ್ ಕಳುಹಿಸಿದ್ದಾನೆ. ನಂತರ ‘‘ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊದಲು 5 ರೂ. ವರ್ಗಾವಣೆ ಮಾಡಿ. ಬ್ಯಾಂಕ್ ಖಾತೆ ಖಾತರಿ ಮಾಡಿಕೊಂಡು ಅದೇ ಖಾತೆಗೆ 5 ರೂ. ಸೇರಿಸಿ 305 ರೂ. ವರ್ಗಾವಣೆ ಮಾಡುತ್ತೇವೆ’’ ಎಂದು ಹೇಳಿದ್ದಾನೆ. ಅದರಂತೆ ಯುವತಿ, ತನ್ನ ಮೊಬೈಲ್‌ಗೆ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿ 5 ರೂ. ವರ್ಗಾವಣೆ ಮಾಡಿದ್ದಾರೆ. ಕೆಲವೇ ಕ್ಷಣದಲ್ಲಿ ಆತ ಯುವತಿ ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ. ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ನೊಂದ ಯುವತಿ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಆನ್‌ಲೈನ್ ಗೆಳತಿ ಜತೆ ಸುತ್ತಾಡಿ ಹನಿಟ್ರ್ಯಾಪ್‌ನಲ್ಲಿ ಸಿಲುಕಿದ ಡಾಕ್ಟರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
