ಬೆಂಗಳೂರು:ರಾತ್ರಿ ಪಾಳಿ ಕೆಲಸಕ್ಕೆಂದು ಮನೆ ಬಿಡುತ್ತಿದ್ದ ಗಂಡನ ಮೇಲೆ ಅನುಮಾನಗೊಂಡು ಒಂದು ದಿನ ಹಿಂಬಾಲಿಸಿದ ಪತ್ನಿಗೆ ಅಕ್ಷರಶಃ ಆಘಾತ ಕಾದಿತ್ತು. ಕಚೇರಿಗೆ ಹೋಗದೆ ಅಪರಿಚಿತ ಮನೆ ಮುಂದೆ ಬೈಕ್​ ನಿಲ್ಲಿಸಿದ ಆತನನ್ನು ಬೆನ್ನತ್ತಿದ ಪತ್ನಿಗೆ ಗಂಡನ ಇನ್ನೊಂದು ಮುಖ ದರ್ಶನವಾಗಿ, ಅದನ್ನು ಸಹಿಸದೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿರಿ:‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’

ಅಭಿಲಾಷ ಮೃತ ದುರ್ದೈವಿ. ಪ್ರೀತಿಸಿ ಮದುವೆಯಾದ ಮೂರೇ ತಿಂಗಳಲ್ಲಿ ತನ್ನ ನಿರ್ಮಲ ಪ್ರೀತಿಗೆ ದ್ರೋಹವಾಗಿದ್ದನ್ನು ಸಹಿಸದೇ ಅಭಿಲಾಷ ಆತ್ಮಹತ್ಯೆ ಹಾದಿಯನ್ನು ಹಿಡಿದಿದ್ದಾಳೆ.
ಘಟನೆಯ ವಿವರಣೆಗೆ ಬರುವುದಾದರೆ, ಶಶಿಕುಮಾರ್-ಅಭಿಲಾಷ ಪ್ರೇಮ ವಿವಾಹವಾಗಿ ನಗರದ ಶ್ರೀರಾಂಪುರದಲ್ಲಿ ವಾಸವಿದ್ದರು. ಪತಿಯ ಮೇಲೆ ಅಭಿಲಾಷಗೆ ತುಂಬಾ ನಂಬಿಕೆ ಇತ್ತು. ಆದರೆ, ಕೆಲವು ದಿನಗಳ ಬಳಿಕ ರಾತ್ರಿ ಪಾಳಿಯ ಕೆಲಸವೆಂದು ಹೇಳಿ, 8 ಗಂಟೆಯಾದ್ರೆ ಸಾಕು ಬಾಸ್ ಬೈಯುತ್ತಾರೆ ಟೈ ಆಯ್ತು ಎಂದು ಹೇಳಿ ಅರ್ಜೆಂಟ್ ಆಗಿ ಮನೆ ಬಿಡುತ್ತಿದ್ದ.
ಇದನ್ನೂ ಓದಿರಿ:ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

ಗಂಡನ ಈ ನಡೆ ಅಭಿಲಾಷಗೆ ಅನುಮಾನ ಮೂಡುವಂತೆ ಮಾಡಿತು. ಸರಿ ಸಂಶಯವನ್ನು ಬಗೆಹರಿಸಿಕೊಂಡುಬಿಡೋಣ ಎಂಬ ನಿರ್ಧಾರಕ್ಕೆ ಬಂದ ಅಭಿಲಾಷ, ಒಂದು ದಿನ ಪತಿಯನ್ನು ಹಿಂಬಾಲಿಸಿದಳು. ಈ ವೇಳೆ ಪತಿ ಅಪರಿಚಿತರ ಮನೆ ಮುಂದೆ ಬೈಕ್ ನಿಲ್ಲಿಸುವುದನ್ನು ನೋಡಿ ಅಭಿಲಾಷ ಶಾಕ್ ಆಗಿದ್ದಾಳೆ. ಮನೆ ಯಾರದಿರಬಹುದೆಂದು ನೋಡಲು ಹೋದಾಗ ಮತ್ತೊಬ್ಬ ಮಹಿಳೆಯೊಂದಿಗೆ ಪತಿ ಇರುವುದನ್ನು ನೋಡಿ ಅಭಿಲಾಷಗೆ ಹೃದಯ ಬಿರಿದಂತಾಗಿದೆ.
ಇದಕ್ಕೂ ಮುನ್ನ ಬಾಗಿಲು ಬಡಿದಿದ್ದನ್ನು ಕೇಳಿ ಶಶಿಕುಮಾರ್​ ಮಂಚದ ಕೆಳಗೆ ಅವಿತುಕೊಂಡಿದ್ದ. ಬಳಿಕ ಎಲ್ಲವೂ ಬಹಿರಂಗವಾದ ಬೆನ್ನಲ್ಲೇ ಆತನನ್ನು ಪ್ರಶ್ನಿಸಿದ್ದಕ್ಕೆ ಸ್ಥಳದಲ್ಲಿಯೇ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದರಿಂದ ತುಂಬಾ ಮನನೊಂದು ಅಭಿಲಾಷ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿ:ಕ್ಲಾಸ್​ಮೇಟ್​ ನಂಬಿ ಚಾಟಿಂಗ್​ ಮಾಡುತ್ತಿದ್ದ ಯುವತಿಗೆ ವರ್ಷದ ಬಳಿಕ ಕಾದಿತ್ತು ಬಿಗ್​ ಶಾಕ್​!

ಆತ್ಮಹತ್ಯೆಗೂ ಮುನ್ನ ತನ್ನ ತಂಗಿಗೆ ಅಭಿಲಾಷ ಕರೆ ಮಾಡಿ ಕಣ್ಣೀರಿಟ್ಟಿದ್ದಾಳೆ. ಕಳೆದ ಭಾನುವಾರ ರಾತ್ರಿ ಅಭಿಲಾಷ ಮೃತಪಟ್ಟಿದ್ದು, ಮೃತಳ ಪಾಲಕರು ಶಶಿಕುಮಾರ್ ಹಾಗೂ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಈ ಸಂಬಂಧ ಶ್ರೀರಾಂಪುರ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಪ್ರೀತಿಸಿ ಮದುವೆಯಾದ ಎರಡೇ ವರ್ಷದಲ್ಲಿ ಸಂಚು ಮಾಡಿ ಪತ್ನಿಯನ್ನೇ ಕೊಂದನಾ ಪತಿ?

ಗಂಡನನ್ನು ಕೊಂದು, ಮೂರು ಮಕ್ಕಳ ಜತೆ ಬಾವಿಗೆ ಹಾರಿದ ಪತ್ನಿ! ಇಷ್ಟಕ್ಕೆಲ್ಲ ಕಾರಣವೇನು ಗೊತ್ತಾ?

1.5 ಕೋಟಿ ರೂ.ಗೆ ವಿವಾಹಿತ ಬಾಯ್​ಫ್ರೆಂಡ್​ ಖರೀದಿಸಿದ ಮಹಿಳೆ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
