ಉಡುಪಿ:ವಿವಾಹಿತ ಮಹಿಳೆಯೊಬ್ಬಳು ತನ್ನ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಪ್ರಿಯಕರನ ಜತೆ ಪರಾರಿಯಾದ ಘಟನೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ‌ನಡೆದಿದೆ.
ಇದನ್ನೂ ಓದಿ:ವಿವಾಹಿತೆಯೊಂದಿಗೆ ಯುವತಿ ಆತ್ಮಹತ್ಯೆ: ಸಮಾಜ ಒಪ್ಪದ ಸಂಬಂಧವೇ ಇಬ್ಬರಿಗೂ ಮುಳುವಾಯಿತಾ?
ಅಜೆಕಾರು ಕೈಕಂಬ ನಿವಾಸಿ ಮುಬೀನಾ (28)‌ ಎಂಬುವರು ಪರಾರಿಯಾದ ಮಹಿಳೆ. ಮಂಗಳೂರಿಗೆ ಮದುವೆಗೆ ಹೋದ ಕಾರಣಕ್ಕೆ ಈ ಮಹಿಳೆ ತಾಯಿ ಮತ್ತು ಸಹೋದರನ ಜತೆ ಹೋಂ ಕ್ವಾರಂಟೈನ್ ಆಗಿದ್ದರು. ಹೋಂ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದಂತೆ ತನ್ನ ಹಳೇ ಪ್ರಿಯಕರನ ಜತೆ ಪರಾರಿಯಾಗಿದ್ದಾಳೆ.
ನಾಪತ್ತೆಯಾದ ಮುಬೀನಾ 8 ವರ್ಷದ ಹಿಂದೆ ಉದ್ಯಾವರದ ಸಾಜಿದ್‌ ಎಂಬುವವನೊಂದಿಗೆ ಮದುವೆಯಾಗಿ ಪುಣೆಯ ಲೋನಾವಲದಲ್ಲಿ ನೆಲೆಸಿದ್ದರು. ಕಳೆದ 4 ತಿಂಗಳ ಹಿಂದೆ ಕೌಟುಂಬಿಕ ಸಮಸ್ಯೆಯಿಂದ 8 ವರ್ಷದ ಮಗಳೊಂದಿಗೆ ಊರಿಗೆ ಬಂದು ಹೆತ್ತವರೊಂದಿಗೆ ವಾಸವಾಗಿದ್ದರು.
ಇದನ್ನೂ ಓದಿ:ಚೀನಾದಲ್ಲಿ ಮತ್ತೆ ಲಾಕ್​ಡೌನ್​: ಕರೊನಾ ಕುರಿತು ಮತ್ತೊಂದು ಶಾಕಿಂಗ್​ ವರದಿ ನೀಡಿದ ಚೀನಾ ವೈದ್ಯರು!
ಬಳಿಕ‌ ಕರೊನಾ ವೈರಸ್ ಹಿನ್ನಲೆಯಲ್ಲಿ ‌ಲಾಕ್‌ಡೌನ್ ಘೋಷಣೆಯಾಗಿದ್ದು ಲಾಕ್ ಡೌನ್ ಸಂದರ್ಭದಲ್ಲಿ ಮಂಗಳೂರಿನಲ್ಲಿ ‌ನಡೆದ ವಿವಾಹ ‌ಕಾರ್ಯಕ್ರಮಕದಲ್ಲಿ ಭಾಗವಹಿಸಿ, ಮರಳಿ ಊರಿಗೆ ಬಂದಿದ್ದರು. ಮುಬಿನಾ ಕಾಣೆಯಾದ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಇದೀಗ ಮೊಬಿನಾ ಪತ್ತೆಯಾಗಿದ್ದಾಳೆ, ಆಕೆಯನ್ನು ಪೋಷಕರ ಜತೆಗೆ ಕಳುಹಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಮಹಿಳೆಯ ಶವದ ಜತೆ ಸಾರ್ವಜನಿಕ ಸ್ಥಳದಲ್ಲಿ ಸಂಭೋಗ: ಆರೋಪಿ ಬಂಧಿಸಿದ ಅಧಿಕಾರಿಗಳಿಗೆ ಕಾದಿತ್ತು ಶಾಕ್​!
ಸಂಬಳ ಕಡಿತ ಮಾಡಲ್ಲ, ಬೋನಸ್ಸೂ ಕೊಡ್ತೀವಿ…! ಈ ಕಂಪನಿ ಉದ್ಯೋಗಿಗಳೇ ಧನ್ಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 3 =
Remember me
