ಬೆಂಗಳೂರು:ಟಿಕೆಟ್ ತೆಗೆದುಕೊಳ್ಳಿ ಎಂದು ಹೇಳಿದ್ದಕ್ಕೆ ಯುವತಿಯೊಬ್ಬರು ಬಸ್​ ಕಂಡಕ್ಟರ್ ಬಳಿ ಜಗಳವಾಡಿದ ಪ್ರಕರಣ ನಡೆದಿದೆ. ಬನಶಂಕರಿ ಡಿಪೋಗೆ ಸೇರಿದ ಬಿಎಂಟಿಸಿ ಬಸ್​ನಲ್ಲಿ ಈ ಘಟನೆ ನಡೆದಿದೆ.
ನಾನು ಕೇಂದ್ರ ಸರ್ಕಾರದ ಉದ್ಯೋಗಿ ಎಂದು ಹೇಳಿಕೊಂಡ ಈ ಯುವತಿ ಟಿಕೆಟ್​ ತೆಗೆದುಕೊಳ್ಳಲು ನಿರಾಕರಿಸಿದ್ದಲ್ಲದೆ ಕಂಡಕ್ಟರ್​ ಬಳಿ ಜಗಳವಾಡಿದ್ದಾಳೆ. ನನ್ನ ಬಳಿ ಕೇಂದ್ರ ಸರ್ಕಾರದ ಐಡಿ ಕಾರ್ಡ್ ಇದೆ, ಏನ್ ಮಾಡ್ತಿಯೋ ಮಾಡ್ಕೊ ಎಂದು ದಬಾಯಿಸಿದ್ದಾಳೆ.
ಗುರುತಿನ ಚೀಟಿ ತೋರಿಸಿ ಎಂದರೂ ತೋರಿಸದ ಈಕೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳನ್ನು ಬಳಸಿ ಜಗಳವಾಡಿದ್ದಾಳೆ. ಮೊಬೈಲ್​ಫೋನ್​ ಮೂಲಕ ಆಧಾರ್ ಪ್ರೂಫ್ ತೋರಿಸಿದ್ದರೂ ಅದರಲ್ಲೂ ರಾಜ್ಯ ಯಾವುದು ಎಂಬುದು ಇರಲಿಲ್ಲ.
ಇದನ್ನೂ ಓದಿ:ಮುಸ್ಲಿಂ ಯೂತ್​ ಲೀಗ್​ನಿಂದ ಹಿಂದೂ ವಿರೋಧಿ ಘೋಷಣೆ, ವಿವಾದ ಸೃಷ್ಟಿಸಿದ ಬೆದರಿಕೆ!
ಟಿಕೆಟ್ ತೆಗೆದುಕೊಳ್ಳಿ ಎಂದರೆ ಮೊಬೈಲ್​ಫೋನ್​ನಲ್ಲಿ ವಿಡಿಯೋ ಮಾಡುತ್ತಿದ್ದ ಈ ಯುವತಿಗೆ, ಸೆಂಟ್ರಲ್ ಗವರ್ನಮೆಂಟ್ ಉದ್ಯೋಗಿ ಎನ್ನುವುದಕ್ಕೆ ಯಾವ ಪ್ರೂಫ್ ಇದೆ ಎಂದು ಸಹಪ್ರಯಾಣಿಕರು ಕೇಳಿದರೆ ಅವರೊಂದಿಗೂ ಗಲಾಟೆ ಮಾಡಿದ್ದಾಳೆ.
ಪಾಕ್​ಗೆ ತೆರಳಿದ ಭಾರತದ ಅಂಜು ಇನ್ಮುಂದೆ ಫಾತಿಮಾ: ಮತಾಂತರಗೊಂಡು ನಸ್ರುಲ್ಲಾನನ್ನು ಮದ್ವೆಯಾದ ವಿವಾಹಿತೆ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 + 5 =
Remember me
