ಬೆಂಗಳೂರು:ಸೋಷಿಯಲ್ ಮೀಡಿಯಾ ಮೂಲಕ ಹುಡುಗಿಯರ ಇನ್​ಬಾಕ್ಸ್​ನೊಳಗೆ ‘ಇಣುಕುವ’ ಕೆಲವು ಕಿಡಿಗೇಡಿಗಳು ಅವರನ್ನು ಪೀಡಿಸುವ, ಕಾಡುವ ಪ್ರಕರಣಗಳು ಹೊಸದೇನಲ್ಲ. ಅಂಥದ್ದೇ ಒಂದು ಪ್ರಕರಣ ವರದಿಯಾಗಿದ್ದು, ಕಿಡಿಗೇಡಿಯೊಬ್ಬ ಹುಡುಗಿಯ ಬೆತ್ತಲೆ ಫೋಟೋ ಕಳಿಸುವಂತೆ ಬ್ಲ್ಯಾಕ್​ಮೇಲ್ ಮಾಡಿದ ವಿಷಯ ಬಹಿರಂಗಗೊಂಡಿದೆ.
17 ವರ್ಷದ ತನ್ನ ಮಗಳಿಗೆ ಕಿಡಿಗೇಡಿಯೊಬ್ಬ ಇನ್​ಸ್ಟಾಗ್ರಾಮ್​ ಮೂಲಕ ಕಾಟ ಕೊಡುತ್ತಿದ್ದು, ಬೆತ್ತಲೆ ಫೋಟೋ ಕಳಿಸುವಂತೆ ಬ್ಲ್ಯಾಕ್​ಮೇಲ್​ ಮಾಡಿದ್ದಾನೆ ಎಂಬುದಾಗಿ ಹುಡುಗಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಇನ್​ಸ್ಟಾಗ್ರಾಮ್​ ಮೂಲಕ ತನ್ನ ಅಸಭ್ಯ ಚಿತ್ರ ಕಳಿಸಿದ್ದಲ್ಲದೆ, ನೀನೂ ಬೆತ್ತಲೆ ಫೋಟೋ ಕಳಿಸು ಎಂದು ಮಗಳಿಗೆ ಮೆಸೇಜ್ ಮಾಡಿದ್ದಾನೆ. ಅದಕ್ಕೆ ಮಗಳು ಪ್ರತಿಕ್ರಿಯಿಸದಿದ್ದಕ್ಕೆ ಆತ ಮತ್ತೊಂದು ಮೆಸೇಜ್ ಕಳಿಸಿದ್ದು, ಬೆತ್ತಲೆ ಫೋಟೋ ಕಳಿಸದಿದ್ದರೆ ನಿನ್ನ ಕೈ ಕೊಯ್ದುಬಿಡುವೆ ಎಂದೂ ಬೆದರಿಕೆ ಒಡ್ಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇದನ್ನೂ ಓದಿ:ಹೀಗೆ ಮಾಡಿದರೆ ನಿಮಗೆ ಫ್ರೀ ಐಸ್​ ಕ್ರೀಂ! ಮಾಲ್​ನಲ್ಲಿದೆ ಒಂದು ಹೊಸ ಆಫರ್​
ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ನೆಲೆಸಿರುವ ಮಹಿಳೆ, ಕಾರ್ತಿಕ್​ ಎಂಬಾತನ ವಿರುದ್ಧ ಈ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ತಿಕ್ ಒಂದು ತಿಂಗಳ ಹಿಂದೆ ಇನ್​ಸ್ಟಾಗ್ರಾಮ್​ ಮೂಲಕ ತನ್ನ ಮಗಳ ಜತೆ ಸಂಪರ್ಕಕ್ಕೆ ಬಂದಿದ್ದು, ಫೋಟೋಗಳನ್ನು ಕೇಳಿದ್ದಾನೆ. ಆಕೆ ಅದಕ್ಕೆ ಪ್ರತಿಕ್ರಿಯಿಸದಿದ್ದಕ್ಕೆ ನಿನ್ನ ಕೈ ಕೊಯ್ದುಬಿಡುವುದಾಗಿ ಬೆದರಿಸಿದ್ದಾನೆ. ಆಗ ಹೆದರಿದ ಮಗಳು ಕೆಲವು ಫೋಟೋಗಳನ್ನು ಕಳುಹಿಸಿದ್ದಾಳೆ. ಈ ಬಗ್ಗೆ ಬಳಿಕ ತನಗೆ ವಿಷಯ ಗೊತ್ತಾಯಿತು ಎಂದು ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ.
17 ವರ್ಷದ ಮಗನನ್ನು ತಾಯಿಯೇ ಕೊಂದಳು!; ದಿನಾಲೂ ಮಗ ಪೀಡಿಸುತ್ತಿದ್ದುದಾದರೂ ಯಾಕೆ?

‘ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ, ಅದಕ್ಕೇ ಪೊಲೀಸರನ್ನು ಮಾಡಿದ್ದಾನೆ ‘!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + 18 =
Remember me
