ಬಾಗಲಕೋಟೆ:ಕ್ಷೀರಭಾಗ್ಯದ ಹಾಲಿನ ಪೌಡರ್​ ಸಾಗಾಟ ಮಾಡುವ ವೇಳೆ ಅಡುಗೆ ಸಹಾಯಕಿಯೊಬ್ಬಳು ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ಘಟನೆ ಬಾಗಲಕೋಟೆಯ ಸರ್ಕಾರಿ ಆದರ್ಶ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ನಡೆದಿದೆ.
ಸವಿತಾ ಸಂಕ್ಯಾನವರ್ ಸಿಕ್ಕಿಬಿದ್ದ ಅಡುಗೆ ಸಹಾಯಕಿ. ಬಾಗಲಕೋಟೆಯ ನವನಗರದ 43ನೇ ಸೆಕ್ಟರ್​ನಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಶಾಲೆಗೆ ಬಂದಿದ್ದ ಹಾಲಿನ ಪೌಡರ್ ಸಾಗಾಟ ಮಾಡುವಾಗ ಮಾಧ್ಯಮದವರ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಗುತ್ತಿದ್ದಂತೆ ತಪ್ಪೊಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ:ಪತ್ನಿಯ ಕ್ರೌರ್ಯತೆ ಆಧಾರದ ಮೇಲೆ ಕೋರ್ಟ್​ನಿಂದ ಕ್ರಿಕೆಟಿಗ ಶಿಖರ್​ ಧವನ್​ಗೆ ಡಿವೋರ್ಸ್​ ಮಂಜೂರು
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಜಿಲ್ಲಾ ಪಂಚಾಯತ್ ಸಿಇಒ ಶಶಿಧರ್ ಕುರೇರ ಅವರು ಆದರ್ಶ ವಿದ್ಯಾಲಯ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಯ ಅವ್ಯವಸ್ಥೆ ಬಗ್ಗೆ ತಿಳಿದು ಮುಖ್ಯಶಿಕ್ಷಕ ರಿಯಾಜ್ ಮಕಾಂದಾರ್​ ವಿರುದ್ಧ ಗರಂ ಆದರು.
ಇದೇ ವೇಳೆ ಸವಿತಾ ಸಂಕ್ಯಾನವರ್​ಳನ್ನು ಸಹಾಯಕಿ ಹುದ್ದೆಯಿಂದ ತೆಗೆಯಲು ಸಿಇಒ ಸೂಚನೆ ನೀಡಿದರು. ಶಾಲೆಯಲ್ಲಿ ಶುಚಿತ್ವ ಇಲ್ಲದಿರುವುದನ್ನು ಗಮನಿಸಿ, ಡಿ ದರ್ಜೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಡಿಡಿಪಿಐಗೆ ಶಶಿಧರ್ ಕುರೇರ ಅವರು ತಿಳಿಸಿದರು.
ಬೆಟ್ಟಿಂಗ್ ಕಟ್ಟಿ 10 ನಿಮಿಷದಲ್ಲಿ ಲೀಟರ್ ಗಟ್ಟಲೆ ಮದ್ಯ ಸೇವಿಸಿ ಪ್ರಾಣ ಬಿಟ್ಟ ಉದ್ಯೋಗಿ

ನಾವು ನಿರೀಕ್ಷೆ ಮಾಡಿರಲಿಲ್ಲ: ಭಾರತದ ಸತ್ಕಾರವನ್ನು ಹೊಗಳಿದ ಪಾಕ್​ ನಾಯಕ ಬಾಬರ್​ ಅಜಾಮ್​

“ದೇಶ ಬಿಟ್ಟು ತೊಲಗಿ” ಆಫ್ಘಾನ್ ನಿರಾಶ್ರಿತರಿಗೆ ಪಾಕ್ ಹುಕುಂ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − four =
Remember me
