ಮಂಡ್ಯ:ತಮ್ಮ ಕೆಲಸ ಮಾಡಿಕೊಡುವಂತೆ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಒತ್ತಾಯಿಸಿ ಮಾಡಿಸಿಕೊಳ್ಳುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬರು ಮಹಿಳೆ ತಮ್ಮ ಸಮಸ್ಯೆ ಬಗೆಹರಿಸಿ ಎಂದು ಸಂಸದೆಯೊಬ್ಬರ ಕಾಲಿಗೆ ಬಿದ್ದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಂದಗಿರಿಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂಸದೆ ಸುಮಲತಾ ಅಂಬರೀಷ್ ನೆರೆಪ್ರದೇಶ ವೀಕ್ಷಣೆಗೆ ಬಂದಾಗ ಈ ಸನ್ನಿವೇಶ ಸೃಷ್ಟಿಯಾಗಿದೆ. ಸುಮಲತಾ ವೀಕ್ಷಣೆಗೆ ಬರುತ್ತಿದ್ದಂತೆ ಅವರ ಕಾಲಿಗೆ ಬಿದ್ದ ಮಹಿಳೆ, ಮಳೆ ಬಂದ್ರೆ ನಮ್ಮ ಬೆಳೆ ಹಾಳಾಗುತ್ತವೆ. ನಮ್ಮೂರ ರಸ್ತೆಗಳೆಲ್ಲಾ ಕೊಚ್ಚಿ ಹೋಗುತ್ತವೆ. ಸರಿಯಾದ ರಸ್ತೆ ಮಾಡಿಸಿ ಮೇಡಂ ಎಂದು ಕೇಳಿಕೊಂಡಿದ್ದಾರೆ.
ಇದೇ ಸಮಯದಲ್ಲಿ ಸ್ಥಳದಲ್ಲಿದ್ದ ಇತರ ಸ್ಥಳೀಯರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನೀವುಗಳು ಯಾರೂ ಏನೂ ಮಾಡುವುದಿಲ್ಲ. ಬರ್ತೀರಿ, ಸುಮ್ನೆ ಹೋಗ್ತೀರಿ, ನಮ್ಮ ಸಮಸ್ಯೆ ಕೇಳೋರು ಯಾರು? ಎಂದು ಕೆಲವರು ಪ್ರಶ್ನೆ ಮಾಡುವ ಮೂಲಕ ಅಸಮಾಧಾನ ತೋಡಿಕೊಂಡಿದ್ದಾರೆ.

ಕಾರು-ಬೈಕ್ ಭೀಕರ ಅಪಘಾತ; ಅಪ್ಪಳಿಸಿದ ಹೊಡೆತಕ್ಕೆ ಕಾರಿನ ಟಾಪ್​ಗೆ ನೆಗೆದುಬಿದ್ದ ಶವ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − eleven =
Remember me
