ಬೆಂಗಳೂರು:ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಅಮಾಯಕನ ವಿರುದ್ಧ ಸುಳ್ಳು ಕೇಸ್​ ದಾಖಲಿಸಿದ್ದ ಮಹಿಳಾ ಇನ್​​ಸ್ಪೆಕ್ಟರ್​, ಈ ಪ್ರಕರಣದ ಆಂತರಿಕ ತನಿಖೆ ನಡೆಸುತ್ತಿದ್ದ ಡಿಸಿಪಿ ವಿರುದ್ಧವೇ ಸ್ಟಿಂಗ್ ಆಪರೇಷನ್​ಗೆ ಯತ್ನಿಸಿದ್ದ ಸಬ್​ ಇನ್​ಸ್ಪೆಕ್ಟರ್​ ಸೇರಿ ಮೂವರು ಪೊಲೀಸರನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ಅಮಾನತುಗೊಳಿಸಿದ್ದಾರೆ.
ಆರ್​ಎಂಸಿ ಯಾರ್ಡ್ ಪೊಲೀಸ್ ಇನ್​ಸ್ಪೆಕ್ಟರ್​ ಪಾರ್ವತಮ್ಮ ಹಾಗೂ ಸಬ್​ ಇನ್​ಸ್ಪೆಕ್ಟರ್​ ಅಂಜಿನಪ್ಪ ಹಾಗೂ ಇನ್ನೊಬ್ಬ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇನ್​ಸ್ಪೆಕ್ಟರ್ ಪಾರ್ವತಮ್ಮ ಹಾಗೂ ಎಸ್ಐ ಅಂಜಿನಪ್ಪ ಮತ್ತು ಇನ್ನೊಬ್ಬ ಪೊಲೀಸ್ ಬೀದಿಬದಿ ವ್ಯಾಪಾರಿ ಬಳಿ ಮಾಮೂಲಿ ಕೇಳಿದ್ದು, ಆತ ಕೊಡಲು ನಿರಾಕರಿಸಿದ್ದಕ್ಕೆ ಬಲವಂತವಾಗಿ ಗಾಂಜಾ ಬೆರೆಸಿದ ಸಿಗರೇಟ್​ ಸೇದುವಂತೆ ಮಾಡಿ ಗಾಂಜಾ ಸೇವನೆ ಎಂದು ಕೇಸು ದಾಖಲಿಸಿದ್ದರು. ಬಳಿಕ ಇದರಿಂದ ನೊಂದ ಆತ ಆತ್ಮಹತ್ಯೆಗೆ ಯತ್ನಿಸಿದ್ದ.
ಇದನ್ನೂ ಓದಿ:ಡಿಸಿಪಿಗೇ ಸ್ಟಿಂಗ್ ಆಪರೇಷನ್​ ಮಾಡಲೆತ್ನಿಸಿದ್ದ ಎಸ್​​ಐ​; ಅಮಾಯಕನ ಮೇಲೆ ಗಾಂಜಾ ಕೇಸ್​ ಹಾಕಿದ್ದ ಲೇಡಿ ಇನ್​ಸ್ಪೆಕ್ಟರ್!
ಈ ಕೇಸ್ ಸಂಬಂಧ ಪೊಲೀಸರ ವಿರುದ್ಧ ಆರೋಪ ಕೇಳಿ ಬಂದಿದ್ದು, ಆಂತರಿಕ ತನಿಖೆ ವೇಳೆ ಡಿಸಿಪಿ ವಿರುದ್ಧವೇ ಸ್ಟಿಂಗ್ ಆಪರೇಷನ್​ ಮಾಡಲು ಹೋಗಿ ಎಸ್​ಐ ಅಂಜಿನಪ್ಪ ಸಿಕ್ಕಿಬಿದ್ದಿದ್ದ. ಈ ಮೂವರ ವಿರುದ್ಧ ನಡೆದ ಆಂತರಿಕ ತನಿಖೆಯಲ್ಲಿ ಆರೋಪ ದೃಢಪಟ್ಟು ವರದಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.
ಟ್ವಿಟರ್​ನಲ್ಲಿ ಮುಟ್ಟಿದ್ರೇನೆ ‘ಲವ್’: ಇನ್ಮುಂದೆ ಹಾಗಾಗದಂತೆ ನಡೆಯುತ್ತಿದೆ ಹೊಸ ಪ್ರಯೋಗ!

ಬ್ಲೂ ಫಿಲ್ಮ್​ ಕೇಸ್​ನಲ್ಲಿ ಪತಿ ಅರೆಸ್ಟ್​; ನಟಿ ಶಿಲ್ಪಾ ಶೆಟ್ಟಿ ‘ಚಾಪ್ಟರ್​’ ಕ್ಲೋಸ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − five =
Remember me
