ಬೆಂಗಳೂರು:ಕಿಡ್ನಿ ಕೊಟ್ಟರೆ ಒಂದು ಕೋಟಿ ರೂಪಾಯಿ ಕೊಡುವುದಾಗಿ ಮಹಿಳೆಗೆ ಆಮಿಷವೊಡ್ಡಿದ ಸೈಬರ್ ಕಳ್ಳರು, ಆಕೆಯಿಂದ 7.97 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ. ವೈಯಾಲಿಕಾವಲ್‌ನ 36 ವರ್ಷದ ಮಹಿಳೆ ವಂಚನೆಗೆ ಒಳಗಾದವರು.
ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಮಾರಾಟದ ಬಗ್ಗೆ ಜಾಹೀರಾತು ನೋಡಿದ ಮಹಿಳೆ, ಅದರಲ್ಲಿನ ಮೊಬೈಲ್​ಫೋನ್​ ನಂಬರ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದಾಕೆ ಡಾ.ಸೀಮಾ ರೈ ಎಂದು ಪರಿಚಯ ಮಾಡಿಕೊಂಡು, ಕಿಡ್ನಿ ಹೊಂದಾಣಿಕೆಯಾದರೆ 1 ಕೋಟಿ ರೂ. ಕೊಡುವುದಾಗಿ ಭರವಸೆ ನೀಡಿದ್ದಾರೆ. ಆನಂತರ ನೋಂದಣಿ ಮಾಡಿಕೊಳ್ಳಲು 6,999 ರೂ. ಪಾವತಿ ಮಾಡಬೇಕೆಂದು ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾರೆ.
ಇದಾದ ಮೇಲೆ ರಕ್ತ ಪರೀಕ್ಷೆ, ಆರ್‌ಬಿಐ ಮಾರ್ಗಸೂಚಿ ಶುಲ್ಕವೆಂದು ನಾನಾ ನೆಪದಲ್ಲಿ ಮಹಿಳೆಯಿಂದ 7.97 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ. ಕಷ್ಟದಲ್ಲಿದ್ದ ಮಹಿಳೆ 1 ಕೋಟಿ ರೂ. ಬರುವ ಆಸೆಯಿಂದ ಕಿಡ್ನಿ ಮಾರಾಟಕ್ಕೂ ನಿರ್ಧರಿಸಿದ್ದರು. ಆದರೆ, ಸೈಬರ್ ವಂಚಕಿ, ಸಬೂಬು ಹೇಳಿ ಹಣ ಸುಲಿಗೆ ಮಾಡಿ ಮೋಸ ಮಾಡಿದ್ದಾರೆ. ನೊಂದ ಮಹಿಳೆ ನೀಡಿದ ದೂರಿನ ಮೇರೆಗೆ ಕೇಂದ್ರ ವಿಭಾಗ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​, ಏಷ್ಯಾ ಬುಕ್​ ಆಫ್​ ರೆಕಾರ್ಡ್ಸ್​ ಎರಡರಲ್ಲೂ ದಾಖಲೆ ಬರೆದಳು ಕರ್ನಾಟಕದ ಈ ಹುಡುಗಿ, ಅಮನ!

ಇವರಿಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಕರೊನಾ ಬಂತು!; ಈ ಪೈಕಿ ಕೇರಳದಲ್ಲೇ ಗರಿಷ್ಠ ಪ್ರಕರಣ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + seven =
Remember me
