ಗುಂಡ್ಲುಪೇಟೆ:ನೆರೆಯ ತಮಿಳುನಾಡಿನಲ್ಲಿ ನಕ್ಸಲ್ ನಿಗ್ರಹಪಡೆ ಪೊಲೀಸರು ಕರ್ನಾಟಕ ಮೂಲದ ನಕ್ಸಲ್ ನಾಯಕಿ ಶ್ರೀಮತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಯಮತ್ತೂರು ಸಮೀಪದ ಆನೈಕಟ್ಟೆ ಬಳಿ ಬೆಟ್ಟವೊಂದರಲ್ಲಿ ಅಡಗಿದ್ದ ಖಚಿತ ಮಾಹಿತಿ ಮೇರೆಗೆ ನಕ್ಸಲ್ ನಿಗ್ರಹಪಡೆ ಪೊಲೀಸರು ದಾಳಿ ನಡೆಸಿ ಶ್ರೀಮತಿಯನ್ನು ಬಂಧಿಸಿದರು. ಈಕೆ ವಿರುದ್ಧ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಕಳೆದ ಅಕ್ಟೋಬರ್​ನಲ್ಲಿ ಕೇರಳದ ನಕ್ಸಲ್ ನಿಗ್ರಹ ದಳದ ಕಮಾಂಡೋಗಳು ಪಾಲಕ್ಕಾಡ ಸಮೀಪ ಥಂಡರ್ ಬೋಲ್ಟ್ ಕೂಂಬಿಂಗ್ ನಡೆಸುವಾಗ ತಮಿಳುನಾಡಿನ ಮಣಿವಸಗಂ, ಕಾರ್ತಿಕ್, ಅರವಿಂದ, ರೇಣು ಎಂಬುವರನ್ನು ಹತ್ಯೆ ಮಾಡಿದ್ದರು. ಈ ವೇಳೆ ಅಲ್ಲೇ ಇದ್ದ ಶ್ರೀಮತಿ ಪರಾರಿಯಾಗಿದ್ದಳು.ಈಕೆ ವಿರುದ್ಧ ಶೃಂಗೇರಿ, ಹೆಬ್ರಿ, ಆಗುಂಬೆ, ಕಾರ್ಕಳ ಪೊಲೀಸ್ ಠಾಣೆಗಳಲ್ಲಿ 14 ಪ್ರಕರಣ ದಾಖಲಾಗಿವೆ.
ಜನವರಿ 15ರಂದು ಕೇರಳದ ವೈನಾಡಿನ ಮೇಪಾಡಿ ಠಾಣಾ ವ್ಯಾಪ್ತಿಯಲ್ಲಿರುವ ಅಟ್ಟುಮಾಳ ಜೀನ್ಸ್ ರೆಸಾರ್ಟ್ ಆದಿವಾಸಿ ಯುವಕರನ್ನು ಶೋಷಣೆ ಮಾಡುತ್ತಿದೆ ಎಂಬ ಕಾರಣದಿಂದ ನಾಲ್ವರು ನಕ್ಸಲರು ದಾಳಿ ನಡೆಸಿ ಕಿಟಕಿಯ ಗಾಜು ಪುಡಿಗಟ್ಟಿದ್ದರು. ಈ ಎಲ್ಲ ಪ್ರಕರಣಗಳಲ್ಲಿ ಶ್ರೀಮತಿ ಇದ್ದಳು ಎಂದು ಮೂಲಗಳು ಖಚಿತಪಡಿಸಿವೆ.
ಲವ್​ ಜಿಹಾದ್​?!: ನೋಟ್ಸ್​ ನೆಪದಲ್ಲಿ ಸಹಪಾಠಿಯನ್ನೇ ಕಿಡ್ನಾಪ್​ ಮಾಡಿ ಲೈಂಗಿಕ ಕಿರುಕುಳ ನೀಡಿದ ಮುಸ್ಲಿಂ ಯುವಕ

ರಾಜ್ಯದಲ್ಲಿ ಶಂಕಿತ ಕರೊನಾ ವೈರಸ್​ಗೆ ಮೊದಲ ಬಲಿ: ಕಲಬುರಗಿಯಲ್ಲಿ 75 ವರ್ಷದ ವೃದ್ಧ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
