ಬೆಂಗಳೂರು:ಜೆ.ಸಿ.ರಸ್ತೆ ಅರ್ಚನಾ ಕಂರ್ಫಟ್ ಲಾಡ್ಜ್​ನಲ್ಲಿ ಅಂಗನವಾಡಿ ಶಿಕ್ಷಕಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಸಿರುಗಟ್ಟಿಸಿ ಕೊಲೆ ಮಾಡಿ ನೇಣು ಬಿಗಿದಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಿದ್ಧಾಪುರದ ಗುಟ್ಟೆಪಾಳ್ಯದ ಕಮಲಾ(32) ಮೃತ ಶಿಕ್ಷಕಿ. ಟೈಲರ್ ದೀಲಿಪ್​ಕುಮಾರ್ ಎಂಬಾತ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಬಂಧನಕ್ಕೆ ಬಲೆಬೀಸಿರುವುದಾಗಿ ಪಶ್ಚಿಮ ವಿಭಾಗ ಡಿಸಿಪಿ ಡಾ. ಸಂಜೀವ್ ಎಂ. ಪಾಟೀಲ್ ತಿಳಿಸಿದ್ದಾರೆ. ಸಿದ್ಧಾಪುರ ಸಮೀಪದ ಸಿಮೆಂಟ್ ಕಾಲನಿಯ ಅಂಗನವಾಡಿಯಲ್ಲಿ ಕಮಲಾ ಕಾರ್ಯನಿರ್ವಹಿಸುತ್ತಿದ್ದರು. ಈಕೆಗೆ ಮನೆ ಸಮೀಪದ ದಿಲೀಪ್ ಕುಮಾರ್ ಪರಿಚಯವಾಗಿದ್ದ. ನ.24 ರಂದು ಅಂಗನವಾಡಿಗೆ ತೆರಳಿದ್ದ ಕಮಲಾ ಸಂಜೆ 6 ಗಂಟೆಯಾದರೂ ಮನೆಗೆ ವಾಪಾಸಾಗಿರಲಿಲ್ಲ. ಭಯಗೊಂಡ ಕಮಲಾ ಪತಿ ಓಬಳೇಶ್, ಪತ್ನಿಯ ಸ್ನೇಹಿತರು ಮತ್ತು ಅಂಗಡಿ ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದ್ದರು. ಎಲ್ಲಿಯೂ ಸುಳಿವು ಸಿಗದಾಗ ನ.26ರಂದು ಸಿದ್ಧಾಪುರ ಠಾಣೆಗೆ ತೆರಳಿ ಓಬಳೇಶ್, ಪತ್ನಿ ಕಮಲಾ ಕಾಣೆಯಾಗಿರುವ ಕುರಿತು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಮಲಾ ಕೆಲಸ ಮಾಡುತ್ತಿದ್ದ ಅಂಗನವಾಡಿ ಬಳಿಗೆ ಹೋಗಿ ವಿಚಾರಣೆ ನಡೆಸಿದ್ದರು. ಆಕೆಗೆ ದಿಲೀಪ್ ಸ್ನೇಹ ಇರುವುದು ಬೆಳಕಿಗೆ ಬಂದಿತ್ತು. ಆದೇ ಸಂದರ್ಭದಲ್ಲಿ ಕಲಾಸಿಪಾಳ್ಯದ ಅರ್ಚನಾ ಲಾಡ್ಜ್​ನಲ್ಲಿ ಕೊಠಡಿ ಬಾಡಿಗೆ ಪಡೆದ ವ್ಯಕ್ತಿಗಳು ಕಾಣುತ್ತಿಲ್ಲ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಶುಕ್ರವಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಕಮಲಾ ಕುಟುಂಬ ಸದಸ್ಯರನ್ನು ಕರೆಸಿ ಬಾಗಿಲು ತೆರೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಲಾಡ್ಜ್​ನ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ನ.24ರ ಬೆಳಗ್ಗೆ 11.30ಕ್ಕೆ ಕಮಲಾ ಮತ್ತು ದಿಲೀಪ್ ಲಾಡ್ಜ್​ಗೆ ಬಂದು ಕೊಠಡಿ ಬಾಡಿಗೆ ಪಡೆದಿದ್ದರು.
ಕಮಲಾ ಹೆಸರಿನಲ್ಲಿಯೇ ಬಾಡಿಗೆ ಪಡೆದಿದ್ದ ದಿಲೀಪ್, ಮಧ್ಯಾಹ್ನ 2.30ರಲ್ಲಿ ಹೊರಗೆ ಹೋಗಿದ್ದಾನೆ. ಆನಂತರ ಹಿಂದಿರುಗಿಲ್ಲ. ಅಲ್ಲದೆ, ಮೊಬೈಲ್ ಫೋನ್ ಸಹ ಆಫ್ ಆಗಿದ್ದು ನಾಪತ್ತೆಯಾಗಿದ್ದಾನೆ.ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 4 =
Remember me
