ಬೆಂಗಳೂರು:ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕಿಡಿಗೇಡಿಯೊಬ್ಬ ಮಹಿಳಾ ಪೊಲೀಸ್ ಪೇದೆ ಫೋನ್ ನಂಬರ್ ಅನ್ನು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಪುರುಷರ ಶೌಚಗೃಹದಲ್ಲಿ ಬರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಡೂರು ಮೂಲದ ಸತೀಶ್ ಎಂಬಾತನ ವಿರುದ್ಧ ಯಲಹಂಕ ಉಪನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಸಂತ್ರಸ್ತ ಮಹಿಳೆ ನಗರದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನಾಮಿಕ ವ್ಯಕ್ತಿಗಳು ಕರೆ ಮಾಡಿ ಲೈಂಗಿಕ ವಿಚಾರವಾಗಿ ಮಾತನಾಡತೊಡಗಿದ್ದರು. ವಿಚಾರಿಸಿದಾಗ ಕಡೂರಿನ ಬಸ್ ನಿಲ್ದಾಣದಲ್ಲಿನ ಪುರುಷ ಶೌಚಗೃಹದಲ್ಲಿ ಫೋನ್ ನಂಬರ್ ಬರೆದಿರುವ ವಿಚಾರ ಗೊತ್ತಾಗಿತ್ತು.
ಮಹಿಳೆ 2006ರಲ್ಲಿ ಡಿ.ಇಡ್ ವ್ಯಾಸಂಗ ಮಾಡುವ ವೇಳೆ ಸತೀಶ್ ಸಹಪಾಠಿಯಾಗಿದ್ದ. 2017ರಲ್ಲಿ ಕಾಲೇಜಿನ ಸ್ನೇಹಿತರ ವ್ಯಾಟ್ಸ್ ಆಪ್ ಗ್ರೂಪ್ ರಚಿಸಲಾಗಿತ್ತು. ಸತೀಶ್ ಅನವಶ್ಯಕವಾಗಿ ಕರೆ ಮಾಡುವುದು ಹಾಗೂ ಸಂದೇಶ ಕಳುಹಿಸುವುದು ಮಾಡುತ್ತಿದ್ದ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿಯಾಗಿತ್ತು. ಇದೇ ವಿಚಾರ ವಾಗಿ ದ್ವೇಷ ಇಟ್ಟುಕೊಂಡಿರುವ ಶೌಚಗೃಹದಲ್ಲಿ ಫೋನ್ ನಂಬರ್ ಬರೆದಿದ್ದಾನೆ. ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ.
https://www.vijayavani.net/lady-si-romance-with-married-constable-in-nellore/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 12 =
Remember me
