ಬೆಂಗಳೂರು :ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆ ಮುಂದೆ ಮಹಿಳೆಯೊಬ್ಬರು ವಿಭಿನ್ನ ವಿಚಾರಕ್ಕಾಗಿ ಏಕಾಂಗಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ನಗರದ ಮಾಣಿಕ್ ಶಾ ಪೆರೇಡ್ ಮೈದಾನದ ಕಾರ್ಯಕ್ರಮ ನಿರೂಪಕರ ಬದಲಾವಣೆ ಮಾಡಲು ಆಗ್ರಹಿಸಿ ಡಾ.ಗಿರಿಜಾ ಎಂಬುವರು ಧರಣಿ ನಡೆಸಿದರು.
ಪ್ರತಿ ಸರ್ಕಾರಿ ಕಾರ್ಯಕ್ರಮಕ್ಕೆ ಇಬ್ಬರೇ ನಿರೂಪಕರಿಗೆ ಅವಕಾಶ ನೀಡಲಾಗುತ್ತದೆ. ಅಪರ್ಣಾ ಹಾಗೂ ಶಂಕರ್ ಪ್ರಸಾದ್ ಅವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸಾಕಷ್ಟು ಉತ್ತಮವಾದ ನಿರೂಪಕರಿದ್ದಾರೆ. ಆದರೆ ಯಾವ ಕಲಾವಿದರಿಗೂ ಅವಕಾಶ ಸಿಗುತ್ತಿಲ್ಲ. ಬೇರೆ ಕಲಾವಿದರು, ಸಾಹಿತಿಗಳು ಎಲ್ಲಿ ಹೋಗಬೇಕು? ಇಬ್ಬರಿಂದ ನಮಗೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದು ಡಾ.ಗಿರಿಜಾ ಹೇಳಿದರು.
ಇದನ್ನೂ ಓದಿ:ಸಂಘರ್ಷ ಸಂಗೀತ ಸಂಭ್ರಮ: ಸ್ಟಾರ್ ಸುವರ್ಣದಲ್ಲಿ ಇಂದು ಸಂಜೆ ವಿಶೇಷ ಕಾರ್ಯಕ್ರಮ
ಫುಟ್​ಪಾತ್​ ಮೇಲೆ ಸಭ್ಯವಾಗಿ ಪ್ಲೆಕಾರ್ಡ್ ಹಿಡಿದು ಕುಳಿತಿದ್ದ ಡಾ.ಗಿರಿಜಾ, ಪೊಲೀಸರು ಮನವೊಲಿಸಿ ಎಬ್ಬಿಸಲು ಹೋದಾಗ, ಕಣ್ಣೀರಿಟ್ಟರು. “ಹೊಸ ಸರ್ಕಾರ ಬಂದಿದೆ, ಹೊಸಬರಿಗೆ ಅವಕಾಶ ನೀಡಿ. ಹತ್ತು ವರ್ಷಗಳಿಂದ ಈ ಸಮಸ್ಯೆ ಬಗೆಹರಿದಿಲ್ಲ. ಅನ್ಯಾಯ ಆಗಿದೆ” ಎಂದು ಅಲವತ್ತುಕೊಂಡರು.
ಸಿಎಂ ನಿವಾಸಕ್ಕೆ ಸಚಿವ ಆನಂದ್ ಸಿಂಗ್, ಶಾಸಕ ಸತೀಶ್ ರೆಡ್ಡಿ ದೌಡು! ಬೊಮ್ಮಾಯಿ ಹೇಳಿದ್ದೇನು?

ಮಹಿಳೆಯರೇ, ಗಮನಿಸಿ! ಬೆನ್ನು ಬಲಗೊಳಿಸುತ್ತದೆ, ಬೊಜ್ಜು ಕರಗಿಸುತ್ತದೆ, ಈ ಯೋಗಾಸನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − ten =
Remember me
