ಚಾಮರಾಜನಗರ:ಮಹಿಳೆಯೊಬ್ಬರು ಮಳೆಯಲ್ಲಿ ನೆನೆಯುತ್ತಲೇ ಪೊಲೀಸ್​ ಠಾಣೆ ಎದುರು ಧರಣಿ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ವೇಳೆ ಖಾಕಿಪಡೆ ಕ್ಯಾರೆ ಎನ್ನದೆ ಅಮಾನವೀಯವಾಗಿ ನಡೆದುಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.
ಪಕ್ಕದ ಜಮೀನಿನ ವ್ಯಕ್ತಿಯಿಂದ ತನಗೆ ತೊಂದರೆ ಆಗುತ್ತಿದ್ದು, ರಕ್ಷಣೆ ನೀಡಬೇಕು ಎಂದು ಪೂರ್ವ ಪೊಲೀಸ್ ಠಾಣೆ ಆವರಣದಲ್ಲಿ ಜೂ.10ರಂದು ಚಾಮರಾಜನಗರದ ಸುಶೀಲಾ ಎಂಬುವರು ಧರಣಿ ಕುಳಿತಿದ್ದರು. ಆಗ ಮಳೆ ಬಂದಿದ್ದು, ಅದನ್ನೂ ಲೆಕ್ಕಿಸದ ಮಹಿಳೆ ಅಲ್ಲೇ ಕುಳಿತು ಧರಣಿ ಮುಂದುವರಿಸಿದ್ದಾರೆ. ಅಷ್ಟಕ್ಕೂ ಈ ಮಹಿಳೆ ಧರಣಿ ಕುಳಿತದ್ದಾದರೂ ಏಕೆ ಗೊತ್ತಾ?
ಇದನ್ನೂ ಓದಿರಿಕ್ಯಾಬ್​ ಚಾಲಕರ ಹೈಟೆಕ್​ ವಂಚನೆಗೆ 500 ಸಿಮ್​ ಬಳಕೆ… ಹೇಗೆಲ್ಲ ಯಾಮಾರಿಸ್ತಾರೆ ನೋಡಿ!
ಚಾಮರಾಜನಗರ ತಾಲೂಕಿನ ಚಂದಕವಾಡಿ ಎಚ್.ಡಿ. ಫಾರೆಸ್ಟ್ ಸರ್ವೇ ನಂಬರ್ 1/168ರಲ್ಲಿ ಸುಶೀಲಾ ಮತ್ತು ಶಿವಣ್ಣ ದಂಪತಿಯ ಜಮೀನಿದೆ. ಪಕ್ಕದ ಜಮೀನಿನ ಮಾಲೀಕ ದೊರೆಸ್ವಾಮಿ ಎಂಬಾತ ಅತಿಕ್ರಮಣ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆಗೆ ದೂರು ನೀಡಿ ದಾಖಲೆಗಳು ತಮ್ಮಂತೆಯೇ ಇರುವುದು ದೃಢಪಟ್ಟಿದೆ. ಈಗ ವ್ಯವಸಾಯ ಮಾಡಲು ಹೋದರೆ ಆತ ತೊಂದರೆ ಕೊಡುತ್ತಿದ್ದಾನೆ. ತಮಗೆ ಪೊಲೀಸ್ ರಕ್ಷಣೆ ಬೇಕು ಎಂದು ಸುಶೀಲಾ ಪೊಲೀಸ್ ಠಾಣೆಗೆ ಮನವಿ ಮಾಡಿದ್ದರು.
ಇದನ್ನೂ ಓದಿರಿಪತ್ನಿ ಜತೆಗಿದ್ದ ಪರಪುರುಷನ ಗಂಟಲು ಬಗೆದು ರಕ್ತ ಕುಡಿದ… ಬೆಚ್ಚಿ ಬೀಳೀಸುತ್ತೆ ಆರೋಪಿ ಬಾಯ್ಬಿಟ್ಟ ಸತ್ಯ!
ಪೊಲೀಸ್ ನಿಯೋಜಿಸುವಂತೆ ಸೇವಾ ಶುಲ್ಕವನ್ನೂ ಪಾವತಿಸಿದ್ದರು. ಆದರೂ ತಮಗೆ ಯಾವುದೇ ರಕ್ಷಣೆ ನೀಡದ ಹಿನ್ನೆಲೆಯಲ್ಲಿ ಸುಶೀಲಾ ಜೂ.10ರಂದು ಇಡೀ ದಿನ ಠಾಣೆ ಮುಂದೆ ಮಳೆಯಲ್ಲೇ ನೆನೆಯುತ್ತ ಧರಣಿ ನಡೆಸಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.
ಈ ವಿಡಿಯೋ  ನೋಡಿ
https://www.facebook.com/VVani4U/videos/258824145404969/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 18 =
Remember me
