ಬೆಳಗಾವಿ:ಪತಿ ಹೆಲ್ಮೆಟ್ ಧರಿಸದ ಕಾರಣ ಸಂಚಾರಿ ಪೊಲೀಸರು ವಿಧಿಸಿದ ದಂಡ ಪಾವತಿಸಲು ಹಣವಿಲ್ಲದ್ದರಿಂದ ಮಹಿಳೆಯೊಬ್ಬರು ಮಾಂಗಲ್ಯವನ್ನೇ ಮಾರಿ ದಂಡ ಕಟ್ಟಲು ಮುಂದಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹುಕ್ಕೇರಿ ತಾಲೂಕಿನ ಹುಳ್ಳೊಳ್ಳಿಹಟ್ಟಿ ನಿವಾಸಿ, ಚಿಕ್ಕ ಕಿರಾಣಿ ಅಂಗಡಿ ನಡೆಸುತ್ತಿರುವ ಭಾರತಿ ವಿಭೂತಿ ದಂಡ ಪಾವತಿಸಲು ಹಣವಿಲ್ಲದ್ದರಿಂದ ಮಂಗಳಸೂತ್ರವನ್ನೇ ಗಂಡನಿಗೆ ಕೊಟ್ಟು ಮಾರಾಟ ಮಾಡಿಯಾದರೂ ಅವರಿಗೆ ಹಣ ನೀಡಿ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ.
‘ಪತಿಯೊಂದಿಗೆ ಕಿರಾಣಿ ಖರೀದಿಗೆಂದು ಬೈಕ್ ಮೇಲೆ ಬೆಳಗಾವಿ ಮಾರುಕಟ್ಟೆಗೆ ಹೋಗಿದ್ದಾಗ ಟ್ರಾಫಿಕ್ ಪೊಲೀಸರು 500 ರೂ. ದಂಡ ವಿಧಿಸಿದ್ದರು. ಆದರೆ ಕಿರಾಣಿ ಖರೀದಿಸಿದ್ದರಿಂದ ನಮ್ಮ ಬಳಿ ಕೇವಲ 100 ರೂ. ಇತ್ತು. ಅದನ್ನೇ ನೀಡಲು ಪತಿ ಮುಂದಾದರೂ ಪೊಲೀಸರು ಕೇಳಲಿಲ್ಲ. ಹೀಗಾಗಿ ಮಾಂಗಲ್ಯವನ್ನೇ ಮಾರಿ, ಹಣ ಕೊಟ್ಟುಬಿಡೋಣ ಎಂದು ಪತಿಗೆ ಮಾಂಗಲ್ಯ ನೀಡಿ ಒತ್ತಾಯಿಸುತ್ತಿದ್ದೆ. ಬಳಿಕ ಪೊಲೀಸರು ನಮ್ಮ ಬಳಿಯಿದ್ದ 100 ರೂ.ಗಳನ್ನೇ ದಂಡವಾಗಿ ಪಡೆದು ಬೈಕ್ ಬಿಟ್ಟು ಕಳುಹಿಸಿದರು’ ಎಂದು ಭಾರತಿ ವಿಭೂತಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
