ಬೆಂಗಳೂರು:ಕರ್ನಾಟಕದಲ್ಲಿ ಬೆಲೆ ಏರಿಕೆಯ ಸುದ್ದಿಗಳು ಆಗಾಗ ಕಿವಿಗೆ ಬೀಳುತ್ತಿದ್ದು ಇದೀಗ ಸಚಿವರಿಗೆ ಆ ಬಿಸಿಯನ್ನು ಮಹಿಳೆಯೊಬ್ಬರು ತಟ್ಟಿಸಿದ್ದಾರೆ.
ದತ್ತಾತ್ರಯ ವಾರ್ಡ್​ನಲ್ಲಿ ಸಚಿವ ದಿನೇಶ್​ ಗುಂಡೂರಾವ್, ಕೃತಜ್ಞತೆ ಸಲ್ಲಿಸಲು ಪಾದಯಾತ್ರೆ ಮಾಡುತ್ತಿದ್ದ ವೇಳೆ ದಾರಿಯಲ್ಲಿದ್ದ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್​ ಜತೆ ವಾಗ್ವಾದಕ್ಕಿಳಿದ ಮಹಿಳೆ, “ನಮಗೆ ನಿಮ್ಮ 2000 ರೂಪಾಯಿ ಬೇಡ. ಅಕ್ಕಿ, ಬೇಳೆ ಕಾಳು ಬೆಲೆ ಏರಿಕೆ ಆಗಿದೆ, ಇದನ್ನ ಕಡಿಮೆ ಮಾಡಿ ಸಾಕು” ಎಂದಿದ್ದಾರೆ. ಈ ಸಂದರ್ಭದಲ್ಲಿ ಆ ಮಹಿಳೆ, “ಅಕ್ಕಿ, ಬೇಳೆ, ದವಸ ಧಾನ್ಯ ಬೆಲೆ ಏರಿಕೆಯಾಗಿದೆ. ನಮ್ಮಂಥ ಬಡವರು ಬದುಕೋದು ಹೇಗೆ? ಬೆಲೆ ಏರಿಕೆಯನ್ನು ಕಡಿಮೆ ಮಾಡಿ” ಎಂದು ಸಚಿವರಿಗೆ ಆಗ್ರಹಿಸಿದ್ದಾರೆ.
ಆ ಮಹಿಳೆ ಸಚಿವರಿಗೆ ಬಿಸಿ ಮುಟ್ಟಿಸಿದ್ದು ಹೀಗೆ:

ಇದಕ್ಕೆ ಉತ್ತರಿಸಿದ ಸಚಿವರು, ಬೆಲೆ ಏರಿಕೆ ಮಾಡಿರುವುದು ಕೇಂದ್ರ ಎಂದು ಹೇಳಿದ್ದಾರೆ. ಮಹಿಳೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, “ಕೇಂದ್ರ ಸರ್ಕಾರದವರು ಬೆಲೆ ಏರಿಕೆ ಮಾಡಿರೋದು. ಅದು ಮಾರ್ಕೆಟ್ ರೇಟ್, ಅದನ್ನು ಕಡಿಮೆ ಮಾಡಲು ಸಾಧ್ಯವಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
