ಮೈಸೂರು:ಇಲ್ಲಿನ ವಿಜಯನಗರ ಪೊಲೀಸ್​ ಠಾಣೆಯಲ್ಲಿ ಲವ್​, ಸೆಕ್ಸ್​, ದೋಖಾ ಪ್ರಕರಣ ದಾಖಲಾಗಿದ್ದು, ವಿಪರ್ಯಾಸವೆಂದರೆ ಮೋಸ ಮಾಡಿದವರೂ ಮತ್ತು ಮೋಸ ಹೋದವರು ಇಬ್ಬರು ಸಹ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ಗಳಾಗಿದ್ದಾರೆ.
ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್​ಐಆರ್ ಪ್ರತಿ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದೆ. ನರಸಿಂಹರಾಜ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆನಂದ್ ವಿರುದ್ಧ ವಿವಿ ಪುರಂ ಠಾಣೆಯ ಮಹಿಳಾ ಸಬ್‌ ಇನ್ಸ್‌ಪೆಕ್ಟರ್ ದೂರು ನೀಡಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಗರ್ಭಾವತಿ ಮಾಡಿದ ಆರೋಪ ಕೇಳಿಬಂದಿದ್ದು, ಎಸ್‌ಐ ವಿರುದ್ಧ ಐಪಿಸಿ 1860 ಅಡಿ ಎಫ್‌ಐಆರ್ ಹಾಕಲಾಗಿದೆ.
ನನ್ನನ್ನು ಮದುವೆ ಆಗುವುದಾಗಿ ನಂಬಿಸಿ, ಹಲವು ಕಡೆಗಳಲ್ಲಿ ಬಲವಂತದ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಗರ್ಭವತಿಯಾದ ನನ್ನನ್ನು ಗರ್ಭಪಾತಕ್ಕೆ ಒತ್ತಾಯಿಸಿದ್ದ. ಒಪ್ಪದಿದ್ದಾಗ ಹಾರ್ಲಿಕ್ಸ್, ಡ್ರೈಫ್ರೂಟ್ ಹಾಗೂ ವಿಟಮಿನ್ ಮಾತ್ರೆಗಳೆಂದು ಔಷಧಿ ಕೊಟ್ಟು ಗರ್ಭಪಾತ ಮಾಡಿಸಿದ್ದಾನೆ. ಮದುವೆಗೆ ಒತ್ತಾಯಿಸಿದಾಗ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಸುಂದರವಾಗಿದ್ದ ಈಕೆಯ ಮುಖ ಹೀಗೇಕಾಯಿತು? ಹುಡುಗಿಯ ಮಾತು ಕೇಳಿದ್ರೆ ಶಾಕ್​ ಆಗ್ತೀರಾ..!
ಇದೀಗ ಎಸ್​ಐ ಆನಂದ್​ ಬೇರೆ ಮದುವೆ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಮೊದಲ ಬಾರಿ ಆನಂದ್​ ಮದುವೆಯನ್ನು ಮಹಿಳಾ ಎಸ್​ಐ ತಡೆದಿದ್ದರಂತೆ. ಮದುವೆ ಸ್ಥಳಕ್ಕೆ ತೆರಳಿ ಮದುವೆ ತಡೆದಿದ್ದೆ. ಆದರೆ, ಎರಡನೇ ಬಾರಿ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಆರೋಪಿ ವಿರುದ್ಧ ಕ್ರಮ ವಹಿಸಿ, ನ್ಯಾಯ ಕೊಡಿಸಿ ಎಂದು ಮಹಿಳಾ ಎಸ್​ಐ ದೂರು ದಾಖಲಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಬಾತ್​ರೂಮ್​ಗೆ ಮೊಬೈಲ್​ ತೆಗೆದುಕೊಂಡು ಹೋದ ಯುವತಿ ಮರುಕ್ಷಣದಲ್ಲೇ ದುರಂತ ಸಾವು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 19 =
Remember me
