ರಾಮನಗರ:ಸೆಲ್ಫಿ ವಿಡಿಯೋ ಮಾಡಿ ಪೊಲೀಸರ ವಿರುದ್ಧ ಕಿರುಕುಳದ ಆರೋಪ ಹೊರಿಸಿ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದ ಮಹಿಳೆ ಸಾವಿಗೀಡಾಗಿದ್ದಾಳೆ. ಈ ಮೂಲಕ ಮಹಿಳೆಯೊಬ್ಬರು ಪೊಲೀಸರ ಕಿರುಕುಳಕ್ಕೆ ಬಲಿಯಾದಂತಾಗಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಕೋಟೆ ನಿವಾಸಿ ಮಾಧುರಿ (31) ಸಾವಿಗೀಡಾದ ಮಹಿಳೆ. ಕಳೆದ ಗುರುವಾರ ರೈಲ್ವೇ ನಿಲ್ದಾಣ ಬಳಿ ಮಾಧುರಿ ಹಾಗೂ ಜ್ಯೋತಿ ಎಂಬಾಕೆ ನಡುವೆ ಗಲಾಟೆ ಆಗಿತ್ತು. ಆಗ ಆಕೆ ಈಕೆಯ ಮೊಬೈಲ್​ಫೋನ್ ಕಿತ್ತುಕೊಂಡು ಹೋಗಿದ್ದಳು. ಹೀಗಾಗಿ ಮಾಧುರಿ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದಳು. ಆದರೆ ಮಾಧುರಿ ವಿರುದ್ಧ ಹಲವು ವಂಚನೆ ಪ್ರಕರಣಗಳು ಇದ್ದವು ಎನ್ನಲಾಗಿದ್ದು, ಪೊಲೀಸರು ದೂರು ಸ್ವೀಕರಿಸಿರಲಿಲ್ಲ.
ಇದನ್ನೂ ಓದಿ:ಚಂದ್ರಯಾನ-3ರ ಯಶಸ್ಸಿನ ಹಿಂದಿತ್ತು ಮಸಾಲೆ ದೋಸೆ ಮತ್ತು ಕಾಫಿಯ ಮಹತ್ವದ ಪಾತ್ರ!
ನ್ಯಾಯ ಕೇಳಲು ಹೋದರೆ ಪೊಲೀಸರು ನನಗೆ ಅವಮಾನ ಮಾಡಿದರು ಎಂದು ಬಳಿಕ ಸೆಲ್ಫಿ ವಿಡಿಯೋ ಮಾಡಿ ಆರೋಪಿಸಿದ್ದ ಮಾಧುರಿ, ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಅಸ್ವಸ್ಥಗೊಂಡ ಮಾಧುರಿಯನ್ನು ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಸಾವಿಗೀಡಾಗಿದ್ದಾಳೆ.
ಇದನ್ನೂ ಓದಿ:ಆದಿತ್ಯ-ಎಲ್​1 ಮಿಷನ್ ಭಾಗವಾಗಿರುವ ಈ ವಿಜ್ಞಾನಿಗಳು ಅತ್ಯಂತ ಸ್ವಚ್ಛವಾಗಿರಬೇಕಿತ್ತು, ಸೆಂಟ್ ಹಾಕುವಂತಿರಲಿಲ್ಲ!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಕರು ನ್ಯಾಯ ಕೋರಿ ರಾಮನಗರ ಎಸ್​ಪಿಗೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಚನ್ನಪಟ್ಟಣ ಟೌನ್ ಇನ್​​ಸ್ಪೆಕ್ಟರ್ ಶೋಭಾ ಹಾಗೂ ಪೊಲೀಸ್ ಸಿಬ್ಬಂದಿ ವಿರುದ್ಧ ಆರೋಪ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬಸ್​ನಲ್ಲಿನ ಚಿಲ್ಲರೆ ಸಮಸ್ಯೆಗೆ ಕಂಡಕ್ಟರ್ ಕೊರಳಲ್ಲೇ ಪರಿಹಾರ!; ಅಂತೂ ಜಾರಿಗೆ ಬಂತು ಹಳೇ ಬೇಡಿಕೆ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 17 =
Remember me
