ಬೆಂಗಳೂರು:ತಾನು ಖರೀದಿಸಿದ್ದ ಹೊಸ ಮನೆಯನ್ನು ತೋರಿಸಬೇಕು ಎಂದು ಕುಟುಂಬಸ್ಥರನ್ನು ಕರೆದಿದ್ದ ಮಹಿಳೆ, ಮನೆ ನೋಡಲು ಬಂದಿದ್ದವರ ಕಣ್ಮುಂದೆಯೇ ಸಾವಿಗೀಡಾದ ದುರಂತವೊಂದು ನಡೆದಿದೆ.
ಆಂಧ್ರಪ್ರದೇಶದ ಕೃಷ್ಣ ಜಿಲ್ಲೆ ತೇಲಾಪೋರಲು ಗ್ರಾಮದ ಭಾನುರೇಖಾ (22) ಸಾವಿಗೀಡಾದವರು. ಈಕೆ ಬೆಂಗಳೂರಿನ ಇನ್​ಫೊಸಿಸ್​ನಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಎಲೆಕ್ಟ್ರಾನಿಕ್ ​​ಸಿಟಿಯ ಪ್ರಗತಿನಗರದಲ್ಲಿ ಹೊಸ ಮನೆ ಖರೀದಿಸಿದ್ದರು. ಈ ಮನೆಯನ್ನು ತೋರಿಸಲು ಕುಟುಂಬಸ್ಥರನ್ನು ಆಹ್ವಾನಿಸಿದ್ದರು.
ಇದನ್ನೂ ಓದಿ:ಹವಾಮಾನ ಮುನ್ಸೂಚನೆ: ರಾಜ್ಯಕ್ಕೆ ಮುಂಗಾರು ಪ್ರವೇಶ ಯಾವಾಗ?
ಮನೆ ನೋಡಲು ಬಂದಿದ್ದ ಕುಟುಂಬಸ್ಥರನ್ನು ಕ್ಯಾಬ್​ನಲ್ಲಿ ಕಬ್ಬನ್​ಪಾರ್ಕ್ ಮುಂತಾದ ಪ್ರೇಕ್ಷಣೀಯ ಸ್ಥಳ ತೋರಿಸಲು ಕರೆದುಕೊಂಡು ಬಂದಿದ್ದು, ಅವರಿದ್ದ ವಾಹನ ಕೆ.ಆರ್​. ವೃತ್ತದ ನೀರು ತುಂಬಿದ್ದ ಅಂಡರ್​ಪಾಸ್​ನಲ್ಲಿ ಸಿಲುಕಿಕೊಂಡಿತ್ತು. ಪರಿಣಾಮವಾಗಿ ಕಾರಿನೊಳಗೆ ನೀರು ತುಂಬಿಕೊಂಡಿದ್ದು ಬಾಗಿಲು ತೆರೆಯಲಾಗದೆ ತೊಂದರೆಗೆ ಸಿಲುಕಿದ್ದರು.
ಇದನ್ನೂ ಓದಿ:ಎಷ್ಟು ಕೋರಿಕೊಂಡರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ; ವೈದ್ಯರು-ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಲಿಯಾದ ಮಹಿಳೆ
ಕ್ಯಾಬ್​ನಲ್ಲಿ ಸಿಲುಕಿದ್ದವರನ್ನು ಸಾರ್ವಜನಿಕರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಭಾನುರೇಖಾರನ್ನು ಸಮೀಪದ ಸೇಂಟ್​ ಮಾರ್ಥಾಸ್​ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಸ್ವಸ್ಥ ಭಾನುರೇಖಾರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ಮತ್ತು ಸಿಬ್ಬಂದಿ ಹಿಂಜರಿದಿದ್ದು, ಚಿಕಿತ್ಸೆ ತಡವಾದ್ದರಿಂದ ಈಕೆ ಕುಟುಂಬಸ್ಥರ ಕಣ್ಮುಂದೆಯೇ ಸಾವಿಗೀಡಾದರು.
ಅಂದು ‘ತಪ್ಪಾಯ್ತು ಕ್ಷಮಿಸಿ’ ಎಂದು ಕೈಮುಗಿದು ಕೇಳಿ ಇಂದು ಮತ್ತದೇ ತಪ್ಪು ಮಾಡಿದ ಜಮೀರ್​ ಅಹಮದ್​!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 + 15 =
Remember me
