ಜೋಯಿಡಾ:ಕೆಲಸಕ್ಕೆ ಹೋಗಿದ್ದ ಹೆಂಡತಿ ಮನೆಗೆ ತಡವಾಗಿ ಬಂದಿದ್ದಕ್ಕೆ, ಆಕೆಯ ಶೀಲದ ಮೇಲೆ ಅನುಮಾನಗೊಂಡ ಗಂಡ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ ಅಮಾನವೀಯ ಪ್ರಕರಣವೊಂದು ನಡೆದಿದೆ.
ಪಲ್ಲವಿ ಪ್ರಕಾಶ್​ ಕಟ್ಟಿಮುನಿ (29) ಮೃತಪಟ್ಟ ಮಹಿಳೆ. ಆಕೆಯ ಪತಿ ಪ್ರಕಾಶ್ ಕೊಲೆ ಆರೋಪಿ. ಉತ್ತರಕನ್ನಡ ಜಿಲ್ಲೆಯ ಜೋಯಿಡಾದ ಗಣೇಶಗುಡಿಯ ಮಣಿಕ್ಯಾಂಪ್​ನಲ್ಲಿ ಈ ಕೊಲೆ ನಡೆದಿದೆ.
ಪಲ್ಲವಿ ಮನೆಗೆಲಸಕ್ಕೆ ಹೋಗುತ್ತಿದ್ದು, ಪತಿ ಪ್ರಕಾಶ್​ಗೆ ಆಕೆಯ ಚಾರಿತ್ರ್ಯದ ಕುರಿತು ಅನುಮಾನವಿತ್ತು ಎನ್ನಲಾಗಿದೆ. ಅಲ್ಲದೆ ಮನೆಗೆಲಸಕ್ಕೆ ತೆರಳಿದ್ದ ಆಕೆ ತಡವಾಗಿ ಮರಳಿದ್ದು, ಪತಿಯ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತ್ತು. ಹೀಗಾಗಿ ತಡವಾಗಿ ಮನೆಗೆ ಬಂದ ಹೆಂಡತಿ ಮೇಲೆ ಸಿಟ್ಟಾದ ಪತಿ ಪ್ರಕಾಶ್ ಕೊಡಲಿಯಿಂದ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ಅತ್ತೆ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಳಿಮಯ್ಯ!

3 ವರ್ಷದ ಮಗಳನ್ನು ಜೀವಂತ ದಹನ ಮಾಡಿ ತಾನೂ ಬೆಂಕಿ ಹಚ್ಚಿಕೊಂಡ ಅಮ್ಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + seventeen =
Remember me
