ಮಂಡ್ಯ:ಊರಿನ ಮಧ್ಯ ಇರುವ ಮನೆಯೊಂದರಲ್ಲಿ ಒಂಟಿಯಾಗಿದ್ದ ಮಹಿಳೆಯೊಬ್ಬರ ಕೊಲೆ ನಡುರಾತ್ರಿಯಲ್ಲಿ ನಡೆದಿದೆ. ಅಚ್ಚರಿ ಇದ್ದರೆ, ನಟ್ಟಿರುಳಲ್ಲಿ ಕೊಲೆ ನಡೆದರೂ ಮರುದಿನ ಮಧ್ಯಾಹ್ನದ ಸುಮಾರಿಗೆ ಪ್ರಕರಣ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದ ಮನೆಯಲ್ಲಿ ಈ ಕೊಲೆ ನಡೆದಿದ್ದು, ಸುಮಾ (40) ಹತ್ಯೆಗೀಡಾಗಿದ್ದಾರೆ. ಮನೆಯಲ್ಲಿ ಇವರು ಒಂಟಿಯಾಗಿ ವಾಸವಿದ್ದು, ನಿನ್ನೆ ರಾತ್ರಿ ಕೊಲೆಯಾಗಿದೆ. ಪರಿಚಯಸ್ಥರೇ ಕೊಲೆ ನಡೆಸಿರುವ ಗುಮಾನಿ ಮೂಡಿದೆ.
ವ್ಯಕ್ತಿಯೊಬ್ಬರು ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನ ದಳದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಊರಿನ ಮಧ್ಯೆ ಇರುವ ಮನೆಯಲ್ಲಿ ಈ ಕೃತ್ಯ ನಡೆದಿದ್ದರೂ, ಅಕ್ಕಪಕ್ಕದ ಮನೆಯವರು ತಮಗೇನೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಕೊಲೆಗೆ ಕಾರಣವೇನು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಕೆಸ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಪ್ಪನಿಗೆ 31 ವರ್ಷ ಜೈಲು, ಅದರ ಬೆನ್ನಿಗೆ ಮಗನಿಗೂ ಭಯೋತ್ಪಾದಕ ಪಟ್ಟ!

ಇಬ್ಬರು ಮಾಜಿ ಸಿಎಂ, ಕುಂ.ವೀ. ಸೇರಿ 61ಕ್ಕೂ ಅಧಿಕ ಸಾಹಿತಿಗಳಿಗೆ ಕೊಲೆ ಬೆದರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
