ಕೊಡಗು:ಕೊಲೆ ಮಾಡಿ ಬಳಿಕ ಶವವನ್ನು ಎಲ್ಲೋ ಎಸೆದು ಹೋಗುವಂಥ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಅರಣ್ಯ ಪ್ರದೇಶವೊಂದರಲ್ಲಿ ಟ್ರಾಲಿ ಬ್ಯಾಗ್​ನಲ್ಲಿ ಈ ಶವ ಕಂಡುಬಂದಿದೆ.
ಕೊಡಗಿನ ವಿರಾಜಪೇಟೆ ಸಮೀಪದ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಟ್ರಾಲಿ ಬ್ಯಾಗ್​ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಸುಮಾರು 25ರಿಂದ 35 ವರ್ಷದ ಮಹಿಳೆಯ ಮೃತದೇಹ ಎಂದು ಪೊಲೀಸರು ಅಂದಾಜಿಸಿದ್ದಾರೆ. ದುಷ್ಕರ್ಮಿಗಳು ಕೊಲೆ ಮಾಡಿ ತಂದು ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ:ಈ ಮಗುವಿಗೆ ಕೈಯಲ್ಲಿ 14, ಕಾಲಲ್ಲಿ 12 ಬೆರಳುಗಳು; ಇದು ದೇವರ ಅವತಾರ ಎಂದು ಮನೆಯವರ ಭಾವನೆ!
ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರು 15 ದಿನಗಳ ಹಿಂದೆ ಕೊಲೆ ಆದಂತಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಡಿಕೇರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಇದು ಕೊಡಗು-ಕೇರಳ ಗಡಿಭಾಗದ ಅರಣ್ಯ ಪ್ರದೇಶವಾಗಿದ್ದು, ಕೇರಳದ ಮಹಿಳೆ ಇರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಎಸ್​ಪಿ ಕೆ.ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈತ ಅತ್ಯಂತ ಶ್ರೀಮಂತ ಗಣೇಶ: ಅಲಂಕಾರಕ್ಕೇ 69 ಕೆ.ಜಿ. ಚಿನ್ನ, 336 ಕೆ.ಜಿ. ಬೆಳ್ಳಿ; ಇನ್ಶೂರೆನ್ಸ್​ಗೆ 360 ಕೋಟಿ ರೂಪಾಯಿ!

ನನ್ನ ಬಂಧನಕ್ಕೆ ಪೊಲೀಸ್ ಕಮಿಷನರ್ ಕಾರಣ, ಗೂಂಡಾ ಕಾಯ್ದೆಯಡಿ ಕೇಸ್ ಹಾಕ್ಸಿದ್ದು ಜಮೀರ್ ಅಹಮದ್: ಪುನೀತ್ ಕೆರೆಹಳ್ಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
