ಮಂಡ್ಯ:ಮುಂಬೈನ ಪುಣೆಯಲ್ಲಿ ಮೃತಪಟ್ಟ ಮಂಡ್ಯದ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಅವರ ಕುಟುಂಬದವರು ತೀವ್ರ ಪರದಾಡುವಂತಾಯಿತು.
ಇದನ್ನೂ ಓದಿ:ಕರೊನಾದೊಂದಿಗೆ ಬದುಕಲು ಕಲಿಯಿರಿ, ಇನ್ನೆರಡು ವರ್ಷ ಲಸಿಕೆ ಅನುಮಾನ…!
ಸೌಮ್ಯಾ ಎಂಬುವರು ಮೂಲತಃ ಮಂಡ್ಯದವರು. ಇವರು ಪುಣೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಅಂತ್ಯಕ್ರಿಯೆಗೆಂದು ಊರಿಗೆ ಮೃತದೇಹ ತೆಗೆದುಕೊಂಡು ಬಂದರೆ ಮಂಡ್ಯ ಪ್ರವೇಶ ಮಾಡಲು ಇಲ್ಲಿನ ಜಿಲ್ಲಾಡಳಿತ ಬಿಡಲಿಲ್ಲ. ಆಕೆಯ ಶವಕ್ಕೆ ಕರೊನಾ ತಪಾಸಣೆ ಮಾಡಿಸದ ಕಾರಣ, ಜಿಲ್ಲೆಗೆ ಪ್ರವೇಶ ಮಾಡಲು ಕೊನೆಗೂ ಅವಕಾಶ ಕೊಡಲೇ ಇಲ್ಲ.
ಇದರಿಂದಾಗಿ ಸೌಮ್ಯಾ ಮೃತದೇಹಕ್ಕೆ ನಿಪ್ಪಾಣಿ ಗಡಿಯಲ್ಲಿ ಅಂತಿಮ ಸಂಸ್ಕಾರ ಮಾಡಲಾಯಿತು. ಬೆಳಗಾವಿ ಜಿಲ್ಲಾಡಳಿತ ಮತ್ತು ಪೊಲೀಸರು ನೇತೃತ್ವ ವಹಿಸಿ ನಿಪ್ಪಾಣಿ ಗಡಿಯ ಕುಗನೊಳ್ಳಿ ಬಳಿಯ ದೂಧಗಂಗಾ ನದಿ ಪಕ್ಕದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಿದರು.
ಇದನ್ನೂ ಓದಿ:ಉಡುಪಿಯ ರೈತರೊಬ್ಬರ ದನದ ಕೊಟ್ಟಿಗೆಯಲ್ಲಿ 2 ಹೆಬ್ಬಾವು ಸೇರಿದಂತೆ 31 ಮೊಟ್ಟೆಗಳು ಪತ್ತೆ!
ಸೌಮ್ಯಾ ಅವರ ಶವವನ್ನು ಅಂತ್ಯ ಸಂಸ್ಕಾರ ಮಾಡಲಾಗದೆ ಅವರ ಪತಿ ಶರತ್​, ಮಗಳು ಶ್ವೇತಾ (5) ಒಂದು ದಿನ ಪರದಾಡಿದ್ದರು. ಆದರೂ ಮಂಡ್ಯ ಜಿಲ್ಲಾಡಳಿತದಿಂದ ಸ್ಪಂದನೆ ಸಿಗಲಿಲ್ಲ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)
ದೆಹಲಿ ಹುಡುಗರ ಅಶ್ಲೀಲ ಚಾಟ್​ ಪ್ರಕರಣಕ್ಕೆ ಟ್ವಿಸ್ಟ್​; ಶಾಕಿಂಗ್​ ಸತ್ಯ ಬಿಚ್ಚಿಟ್ಟ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
