ಬೆಂಗಳೂರು:ಕೆಂಗೇರಿ ಉಪನಗರದಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಮಹಿಳೆಯನ್ನು ಹತ್ತಿಸಿಕೊಂಡು ದುಷ್ಕರ್ವಿುಗಳು ಚಿನ್ನಾಭರಣ ಮತ್ತು 5 ಸಾವಿರ ರೂ. ದೋಚಿ ಆಕೆಯನ್ನು ರಸ್ತೆ ನಡುವೆ ಬಿಟ್ಟು ಹೋಗಿದ್ದಾರೆ.
ಹಲಸೂರಿನ ಲಿಂಗಯ್ಯನಪಾಳ್ಯದ ಸರೋಜಮ್ಮ(50) ವಂಚನೆಗೆ ಒಳಗಾದವರು. ಕೆಂಗೇರಿ ಉಪನಗರದ ಸುಭಾಷ್​ನಗರದಲ್ಲಿ ಅಕ್ಕನ ಮನೆಗೆ ಹೋಗಿದ್ದ ಸರೋಜಮ್ಮ, ವಾಪಸ್ ಮನೆಗೆ ಹೋಗಲು ಕೆಂಗೇರಿ ಹೊಯ್ಸಳ ಸರ್ಕಲ್​ನಲ್ಲಿ ಬಸ್​ಗಾಗಿ ಕಾಯುತ್ತಿದ್ದರು.
ಅದೇ ವೇಳೆ ಕಾರಿನಲ್ಲಿ ಬಂದ ವ್ಯಕ್ತಿಗಳು ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಕೊಮ್ಮಘಟ್ಟ ಕಡೆಗೆ ಹೋಗಿದ್ದಾರೆ. ಮಹಿಳೆ ಪ್ರಶ್ನೆ ಮಾಡಿದಾಗ ಆ ಕಡೆ ಕಳ್ಳರು ಹೆಚ್ಚಾಗಿದ್ದಾರೆ. ಅದಕ್ಕೆ ಈ ಮಾರ್ಗದಲ್ಲಿ ಹೋಗುತ್ತಿದ್ದೇವೆ. ನಿಮ್ಮ ಮೈ ಮೇಲಿರುವ ಚಿನ್ನಾಭರಣ ಮತ್ತು ಹಣ ನಮ್ಮ ಕೈಗೆ ಕೊಡಿ. ಇಳಿಯುವಾಗ ಕೊಡುವುದಾಗಿ ಹೇಳಿದ್ದಾರೆ. ನಂಬಿದ ಮಹಿಳೆ, ಚಿನ್ನಾಭರಣ ಮತ್ತು 5 ಸಾವಿರ ರೂ. ಕೊಟ್ಟಿದ್ದಾರೆ. ಆ ನಂತರ ಕೆಂಗೇರಿ ಉಪನಗರದ ಸುರಾನ ಕಾಲೇಜು ಬಳಿ ಇಳಿಸಿ ಹೋಗಿದ್ದಾರೆ. ನೊಂದ ಸರೋಜಮ್ಮ, ವಾಪಸ್ ಅಕ್ಕನ ಮನೆಗೆ ಹೋಗಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಕೆಂಗೇರಿ ಪೊಲೀಸರು ತಿಳಿಸಿದ್ದಾರೆ.
85 ಸಾವಿರ ರೂಪಾಯಿ ವಂಚನೆ
ಬೆಂಗಳೂರು: ಸಾಮಾಜಿಕ ಜಾಲತಾಣ ಮೂಲಕ ಯುವಕನ ಸ್ನೇಹ ಬೆಳೆಸಿದ್ದ ಅಪರಿಚಿತರು, ಬಿಟ್​ಕಾಯಿನ್ ರೂಪದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ಆಮಿಷವೊಡ್ಡಿ 85 ಸಾವಿರ ರೂ. ವಂಚಿಸಿದ್ದಾರೆ. ಟಿ.ಆರ್.ನಗರ ನಿವಾಸಿ ಶ್ರೀಗಣೇಶ್ ವಂಚನೆಗೊಳಗಾದ ಯುವಕ. ಟೆಲಿಗ್ರಾಂ ಆಪ್​ನಲ್ಲಿ ಅಪರಿಚಿತರು ಯುವಕನನ್ನು ಸಂರ್ಪಸಿದ್ದರು. ‘ಕ್ರಿಪೋ› ಕರೆನ್ಸಿ ಖರೀದಿಸಿ ಅದನ್ನು ಬಿಟ್​ಕಾಯಿನ್ ರೂಪದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿದ್ದರು. ನಂತರ ಶ್ರೀಗಣೇಶ್ ಹಂತಹಂತವಾಗಿ 85 ಸಾವಿರ ರೂ. ವರ್ಗಾವಣೆ ಮಾಡಿದ್ದ. ಹಣ ಸಂದಾಯದ ಬಳಿಕ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಬಗ್ಗೆ ದಕ್ಷಿಣ ವಿಭಾಗ ಸೈಬರ್ ಕ್ರೖೆಂ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಪಾಲಕರು ಬಲವಂತ ಮಾಡಿ ಮಕ್ಕಳ ಮದುವೆ ಮಾಡಿದರೆ ಕಾನೂನು ಏನು ಹೇಳುತ್ತದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + six =
Remember me
