ಮಂಡ್ಯ:ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಭರದಿಂದ ಸಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ವೋಟಿಂಗ್ ಬಿರುಸಿನಿಂದ ನಡೆಯುತ್ತಿದೆ. ಬೆಳಗ್ಗಿನಿಂದಲೇ ಮತದಾರರು ತಮ್ಮ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸುವ ಮೂಲಕ ಹಕ್ಕು ಚಲಾಯಿಸಿದರೆ, ಇನ್ನೂ ಕೆಲವರು ಕೆಲಸದ ನೆಪವೊಡ್ಡಿ ಮತ ಹಾಕುವುದರಿಂದ ತಪ್ಪಿಸಿಕೊಂಡಿದ್ದಾರೆ. ಸದ್ಯ ಇಂಥವರಿಗೆ ಮಂಡ್ಯದ ಯುವತಿಯೊಬ್ಬರು ಒಬ್ಬೊಬ್ಬರ ಮತವು ಎಷ್ಟು ಮುಖ್ಯ ಎಂಬುದನ್ನು ಅದ್ಬುತವಾಗಿ ತಿಳಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:ಕೆಲಸ ಅಂತು ಸಿಗಲಿಲ್ಲ, ಹಣನಾದ್ರೂ ವಾಪಸ್​ ಕೊಡಿ ಎಂದಿದ್ದೇ ತಪ್ಪಾಯ್ತಾ? ಯುವತಿಗೆ ಥಳಿಸಿದ ಕಂಪನಿಯ HR​
ಮಂಡ್ಯದ ಸೋನಿಕಾ ಎಂಬ ಯುವತಿ, ಕರುನಾಡಲ್ಲಿ ವ್ಯಾಸಂಗ ಮಾಡಿ, ಉದ್ಯೋಗದ ಸಲುವಾಗಿ ಲಂಡನ್​ಗೆ ತೆರಳಿದ್ದು, ಸದ್ಯ ಅಲ್ಲೇ ಕೆಲಸ ಮಾಡುತ್ತಿದ್ದಾರೆ. ಆದರೆ, ಇಂದು ತಮ್ಮ ಕ್ಷೇತ್ರದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದೆ ಎಂಬುದುನ್ನು ತಿಳಿದು, ಲಂಡನ್​ನಿಂದ ಮಂಡ್ಯಗೆ ಬಂದು ಮತ ಚಲಾಯಿಸಿದ್ದಾರೆ.
ಮತದಾನದ ಹಿನ್ನಲೆ ಲಂಡನ್​ನಿಂದ ಮಂಡ್ಯಕ್ಕೆ ಬಂದ ಸೋನಿಕಾ, ಮಂಡ್ಯದ ಕಾಳೇನಹಳ್ಳಿ ಗ್ರಾಮದ ನಿವಾಸಿ. ಸದ್ಯ ಲಂಡನ್​ನಲ್ಲಿ ನೆಲೆಸಿರುವ ಇವರು, ಸಾಫ್ಟ್​ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಬರೋಬ್ಬರಿ ಒಂದೂವರೆ ಲಕ್ಷ ಖರ್ಚು ಮಾಡಿಕೊಂಡು ತವರಿಗೆ ಬಂದಿರುವ ಸೋನಿಕಾ, ಮತ ಚಲಾಯಿಸುವ ಮೂಲಕ ಇದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಸಾರಿದ್ದಾರೆ.
4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ಮೂಗುತಿ ನುಂಗಿದ ಯುವತಿ! ವೈದ್ಯರಿಂದ ಬಯಲಾಯ್ತು ಭಯಾನಕ ಸಂಗತಿ, ಇದು ನಂಗೆ ಗೊತ್ತೇ ಇಲ್ಲ ಅಂತಾಳೆ ಈಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − five =
Remember me
