ಬೆಂಗಳೂರು:ವರದಕ್ಷಿಣೆ ಕಿರುಕುಳ ತಾಳಲಾಗದೆ ಮಹಿಳೆಯೊಬ್ಬಳು ರಾಸಾಯನಿಕ ಕುಡಿದಿದ್ದು, ಗಂಭೀರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ದೇವನಹಳ್ಳಿಯ ವಿಜಿಪುರ ಗ್ರಾಮದ ಮಾಧುರಿ (26) ಸಾವಿಗೀಡಾದ ಮಹಿಳೆ. ಈಕೆ ಬೆಂಗಳೂರಿನ ತೂಬರಹಳ್ಳಿಯ ನಿವಾಸಿ ಗುರುಪ್ರಸಾದ್ ಜತೆ 2016ರಲ್ಲಿ ಮದುವೆಯಾಗಿದ್ದಳು. ಈ ದಂಪತಿಗೆ ಆರು ವರ್ಷದ ಒಬ್ಬ ಪುತ್ರ ಕೂಡ ಇದ್ದಾನೆ.
ಸಾಫ್ಟ್​ವೇರ್ ಉದ್ಯೋಗಿ ಆಗಿರುವ ಪತಿಗೆ ಅಕ್ರಮ ಸಂಬಂಧವಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ನಾನು ಗರ್ಭಿಣಿ ಆದಾಗಿನಿಂದ ನನಗೆ ಹೊಡೆದು ಮನೆ ಬಿಟ್ಟು ಹೋಗು ಎಂದು ಪೀಡಿಸುತ್ತಿದ್ದ. ಈ ಕುರಿತು ಅತ್ತೆ-ಮಾವನಿಗೆ ತಿಳಿಸಿದರೆ ಅವರೂ ಬೈದು, ತವರು ಮನೆಯಿಂದ ವರದಕ್ಷಿಣೆ ತಾ, ಎಲ್ಲ ಸರಿಹೋಗುತ್ತದೆ ಎಂದಿದ್ದರು.
ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದಾಗೆಲ್ಲ ಪತಿ ನನಗೆ ಬಯ್ಯುತ್ತಿದ್ದ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜ. 25ರಂದು ಜಗಳವಾಗಿದ್ದು, ಪತಿ ಅವಾಚ್ಯವಾಗಿ ಬೈದು ಮನೆ ಬಿಟ್ಟು ಹೋಗುವಂತೆ ಹೇಳಿದ್ದ. ಅತ್ತೆ-ಮಾವ ಕೂಡ ನೀನು ನನ್ನ ಮಗನಿಗೆ ತಕ್ಕ ಹೆಂಡತಿಯಲ್ಲ ಎಂದು ನಿಂದಿಸಿ ಮನೆ ಬಿಟ್ಟು ಹೋಗು ಎಂದು ಬೈದಿದ್ದರು. ಆಗ ನಾನು ಮಗ ಶಾಲೆಯಲ್ಲಿನ ಪ್ರಯೋಗಕ್ಕೆ ತಂದಿಟ್ಟಿದ್ದ ಕೆಮಿಕಲ್ ಸೇವಿಸಿದ್ದೆ ಎಂದು ಮಾಧುರಿ ಪೊಲೀಸ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಳು.
ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಮಾಧುರಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾಳೆ. ಗುರುಪ್ರಸಾದ್ ಕುಟುಂಬದ ವಿರುದ್ಧ ಮಾಧುರಿ ಕುಟುಂಬಸ್ಥರಿಂದ ಕೊಲೆ ಯತ್ನ ಆರೋಪ ಮಾಡಿದ್ದು, ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಜ. 30ರಿಂದ ಮೂರು ವಾರ ಕಾಲ ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಕ್ಲೋಸ್; ಎಲ್ಲಿ, ಯಾಕೆ?

ಚಿಕಿತ್ಸೆಗೆಂದು ದಾಖಲಾದವಳ ಎರಡೂ ಕಿಡ್ನಿ ಕದ್ರು; ‘ನೀನಿನ್ನು ಇದ್ರೂ ಅಷ್ಟೇ, ಸತ್ರೂ ಅಷ್ಟೇ’ ಅಂತ ಪತ್ನಿ 3 ಮಕ್ಕಳ ಬಿಟ್ಟುಹೋದ ಪತಿ!

ಲಾಡ್ಜ್​ನಲ್ಲಿ ನೇತಾಡುತ್ತಿತ್ತು ಬಿಎಂಟಿಸಿ ಚಾಲಕನ ಶವ; ಡೋರ್ ಲಾಕ್ ಮಾಡಿ ಹೋದ ಯುವತಿ ಯಾರು?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:ten − seven =
Remember me
