ಬೆಂಗಳೂರು:ಕಾಂಗ್ರೆಸ್​ನ ಗ್ಯಾರಂಟಿಗಳ ಪೈಕಿ ಒಂದಾಗಿರುವ, ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ವ್ಯವಸ್ಥೆ ಕಲ್ಪಿಸುವ ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್​ನಲ್ಲಿ ಮಹಿಳೆಯರು ಜಗಳ ಮಾಡಿಕೊಂಡ ಹಲವಾರು ಪ್ರಕರಣಗಳು ನಡೆದಿವೆ. ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದ್ದು, ಸೀಟ್​ಗಾಗಿ ಮಹಿಳೆಯರಿಬ್ಬರು ಭಾರಿ ‘ಶಕ್ತಿ’ ಪ್ರಯೋಗಿಸಿದ್ದಾರೆ.
ಇದನ್ನೂ ಓದಿ:ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ತುಮಕೂರು ಸರ್ಕಾರಿ ಬಸ್​ ನಿಲ್ದಾಣದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಈ ಬಸ್​ ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದು, ತುಮಕೂರಿನಲ್ಲಿ ಕೆಲಕಾಲ ನಿಂತಿತ್ತು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ವಾಶ್​ರೂಮ್​ಗೆ ಹೋಗಿ ಬರುವಷ್ಟರಲ್ಲಿ ಇನ್ನೊಬ್ಬಾಕೆ ಅಲ್ಲಿ ಆ ಸೀಟ್​​ನಲ್ಲಿ ಬಂದು ಕುಳಿತಿದ್ದರು ಎಂಬ ಕಾರಣಕ್ಕೆ ಈ ಜಗಳ ನಡೆದಿದೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಇವರಿಬ್ಬರು ಜಡೆ ಹಿಡಿದು ಜಗಳ ಮಾಡಿಕೊಂಡಿದ್ದು, ಬಿಡಿಸಲು ಹೋದ ಕಂಡಕ್ಟರ್​​ಗೂ ಡೋಂಟ್​ ಕೇರ್ ಎಂದಿದ್ದಾರೆ. ಬಳಿಕ ಬೇರೆ ದಾರಿ ಇಲ್ಲದೆ ತುಮಕೂರು ಟೌನ್ ಪೋಲಿಸ್ ಠಾಣೆಯತ್ತ ಬಸ್​ ಚಲಾಯಿಸಿ, ಚಾಲಕ-ನಿರ್ವಾಹಕ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಕುರಿತು ಪೊಲೀಸ್ ಗಮನಕ್ಕೆ ತಂದು ಬಳಿಕ ಬಸ್​ ಪ್ರಯಾಣ ಮುಂದುವರಿದಿದೆ.
ಸೀಟ್​ಗಾಗಿ ‘ಶಕ್ತಿ’ ಪ್ರಯೋಗ: ಬಸ್​​ನೊಳಗೆ ಜಡೆ ಹಿಡಿದು ಜಗಳ ಮಾಡ್ಕೊಂಡ ಮಹಿಳೆಯರು!#ShakthiSchemepic.twitter.com/1ygIcN1dMT
— Vijayavani (@VVani4U)July 24, 2023

ವೇತನ ಪಡೆಯುವವರ ಮೇಲೆ ನಿಗಾ ಇರಿಸಿದ್ದಾರಂತೆ ಆದಾಯ ತೆರಿಗೆ ಅಧಿಕಾರಿಗಳು!; ಕಾರಣ?

30 ಕೋಟಿ ರೂಪಾಯಿಯ ವಾಚ್​ಗಳಿದ್ದರೂ ಈತನ ಟೈಮ್​ ಸರಿ ಇರಲಿಲ್ಲ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 + sixteen =
Remember me
