ಬೆಂಗಳೂರು:ಇಂದು ಶಕ್ತಿ ಯೋಜನೆಗೆ ಚಾಲನೆ ಸಿಗಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ನಾ ಕೆಎಸ್ ಆರ್ಟಿಸಿ ಬಸ್ ನಿಲ್ದಾಣ, ಮದುವೆ ಮನೆ ರೀತಿ ಸಿದ್ದವಾಗಿದೆ. ಇಂದಿನಿಂದ ರಾಜ್ಯದೊಳಗಿನ ಮಹಿಳಾ ಮತ್ತು ಲೈಂಗಿಕ ಅಲ್ಪಸಂಖ್ಯಾತ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಅವಕಾಶ ಸಿಗಲಿದ್ದು ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿ ಟರ್ಮಿನಲ್ಅಲ್ಲೂ ಹೂ ಹಾರ ಹಾಕಿ ಸಿಂಗಾರ ಮಾಡಲಾಗಿದೆ. ಎಂಟು ಬಸ್ ಗಳಿಗೆ ಇಂದು ಕೆಎಸ್ ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ಸಿಗಲಿದೆ. ಫ್ರೀ ಇದ್ದರೂ, ಅದಕ್ಕೆ ಕೆಲ ಹೊಸ ಷರತ್ತುಗಳನ್ನು ಸರ್ಕಾರ ಹಾಕಿದೆ.
ಇದನ್ನೂ ಓದಿ:ಉಚಿತ ಬಸ್​ ಪ್ರಯಾಣ: ಮುಖ್ಯಮಂತ್ರಿಗಳಿಂದ ಮೊದಲ ಟಿಕೆಟ್​ ಪಡೆಯುವ ಮಹಿಳೆ ಯಾರು? ಇಲ್ಲಿದೆ ಉತ್ತರ..
ಇಂದು ಮಧ್ಯಾಹ್ನ 1 ಗಂಟೆಯಿಂದಲೇ ರಾಜ್ಯವ್ಯಾಪಿ ಉಚಿತ ಪ್ರಯಾಣ ಶುರುವಾಗಲಿದ್ದು ಬಸ್ಸು ಫ್ರೀ ಆದರೂ ಮಹಿಳೆಯರು ಹಾಗೆಯೇ ಕಣ್ಮುಚ್ಚಿ ಹಾಯಾಗಿ ಪ್ರವಾಸ ಮಾಡುವುದು ಸ್ವಲ್ಪ ಕಷ್ಟ. ಅದಕ್ಕೆ ಕಾರಣ ಕೆಲ ನಿಯಮಗಳು. ನೀವೂ ಉಚಿತವಾಗಿ ಪ್ರಯಾಣಿಸಲು ಬಯಸುತ್ತೀರಾ? ಹಾಗಾದರೆ ನೀವು ಈ ನಿಯಮಗಳನ್ನು ಅನುಸರಿಸಲೇ ಬೇಕು. ಈ ನಿಯಮಗಳು ಇಂತಿವೆ:
ಹೌದು! ನೀವು ಮಹಿಳೆ ಎಂದ ಮಾತ್ರಕ್ಕೆ ಖಾಲಿ ಕೈಯಲ್ಲಿ ಬಸ್ಸು ಹತ್ತಿ ಉಚಿತವಾಗಿ ಹೋಗುವುದು ಅಸಾಧ್ಯ. ನಿಮ್ಮಲ್ಲಿ ಬಸ್ ಸಂಚಾರದ ವೇಳೆ ಸರ್ಕಾರಿ ದಾಖಲೆ ಇಲ್ಲದೇ ಹೋದಲ್ಲಿ ನೀವು ಟಿಕೆಟ್ ಖರೀದಿಸುವುದು ಕಡ್ಡಾಯವಾಗಲಿದೆ. ನಿಮ್ಮ ಪ್ರಯಾಣ ಉಚಿತವಾಗಲು ಸರ್ಕಾರಿ ದಾಖಲೆ ತೋರಿಸಲೇ ಬೇಕು.
ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ವಾಸಸ್ಥಳ ಧೃಡಿಕರಣಪತ್ರ ಗಳಲ್ಲಿ ಯಾವುದಾದರೂ ಒಂದನ್ನು ನಿರ್ವಾಹಕರಿಗೆ ತೋರಿಸಿದರೂ ಸಾಕು. ಮಹಿಳೆಯರ ಪ್ರಯಾಣ ಉಚಿತವಾಗಲಿದೆ.
ಇದನ್ನೂ ಓದಿ:ಕಾಲೇಜು ಬಸ್ ಚಾಲಕನಿಂದಲೇ ವಿದ್ಯಾರ್ಥಿನಿಯ ಅಪಹರಣ?; ಮಗಳನ್ನು ಹುಡುಕಿಕೊಡಿ ಎಂದು ತಂದೆಯಿಂದ ದೂರು
ಈ ವ್ಯವಸ್ಥೆ ತಾತ್ಕಾಲಿಕವಾಗಿರಲಿದ್ದು ಮೂರು ತಿಂಗಳ ಒಳಗಾಗಿ ಉಚಿತ ಬಸ್ ಪ್ರಯಾಣದ ಸ್ಮಾರ್ಟ್ ಕಾರ್ಡ್ ಪಡೆಯಲು ಅಪ್ಲೈ ಮಾಡಬೇಕು. ನಂತರ ಸ್ಮಾರ್ಟ್ ಕಾರ್ಡ್ ಇಲ್ಲದಿದ್ದಲ್ಲಿ ಟಿಕೆಟ್ ಖರೀದಿಸಲೇ ಬೇಕು.
ಬಿಎಂಟಿಸಿ ಹೊರತುಪಡಿಸಿ ಉಳಿದ ಬಸ್ ಗಳಲ್ಲಿ 50% ರಷ್ಟು ಸೀಟುಗಳಲ್ಲಿ ಮಾತ್ರ ಕುಳಿತು ಪ್ರಯಾಣ ಮಾಡಬೇಕು. ಅಂದರೆ ಮೀಸಲಾತಿ ಲೆಕ್ಕಚಾರದಲ್ಲಿ ಪ್ರತಿ ಬಸ್ ನಲ್ಲಿ 25 ಜನ ಮಹಿಳೆಯರಿಗೆ ಮಾತ್ರ ಸಂಚಾರ ಮಾಡಬಹುದು.

ಇದನ್ನೂ ಓದಿ:ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ರಾಜ್ಯಾದ್ಯಂತ ಏಕ‌ಕಾಲಕ್ಕೆ ಚಾಲನೆ ನೀಡಲು ಸಿಎಂ ಸೂಚನೆ
ಮಹಿಳೆಯರು, ಉಚಿತ ಪ್ರಯಾಣ ಎಂದು ಬೇಕಾಬಿಟ್ಟಿಯಾಗಿ ಲಗೇಜ್ ಸಾಗಾಟ ಮಾಡುವುದನ್ನು ತಪ್ಪಿಸಲು ನಿಗಧಿತ ಲಗೇಜಿನ ತೂಕಕ್ಕಿಂತ ಹೆಚ್ಚು ತೂಕದ ಲಗೇಜ್ ಕೊಂಡೊಯ್ದರೇ ಹಣ ಪಾವತಿ ಮಾಡಲೇಬೇಕು ಎಂಬ ನಿಯಮ ಮಾಡಲಾಗಿದೆ.
ಅದಲ್ಲದೇ ಐಷಾರಾಮಿ ಬಸ್, ಎಸಿ ಬಸ್, ನಾನ್‌ ಎಸಿ ಬಸ್, ರಾಜಹಂಸ, ಸ್ಲೀಪರ್ ಕೋಚ್, ವಜ್ರ, ವಾಯುವಜ್ರ, ಐರಾವತ, ಅಂಬಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − four =
Remember me
