ಬಾಗಲಕೋಟೆ:ಕುಡಿಯಲು ನೀರು ಹಿಡಿಯಲೆಂದು ಬಂದ ಮಹಿಳೆಯೊಬ್ಬಳಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಕುಸಿದ ಬಿದ್ದ ಘಟನೆ ಮಂಗಳವಾರ ಬನಹಟ್ಟಿ ನಗರದ ಪೇಟೆಯ ವಿಠ್ಠಲ್ ಮಂದಿರದ ಬಳಿ ಸಂಭವಿಸಿದೆ. ಅದೃಷ್ಟವಶಾತ್ ಪವಾಡದ ರೀತಿಯಲ್ಲಿ ಮಹಿಳೆ ಬದುಕುಳಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಐಪಿಎಲ್​ 10 ತಂಡಕ್ಕೂ ರೋಹಿತ್​ ಶರ್ಮಾನೇ ಕ್ಯಾಪ್ಟನ್​; ಸುರೇಶ್​ ರೈನಾ ಹೇಳಿಕೆಯ ಹಿಂದಿದೆ ಈ ಕಾರಣ!
ಬೋರ್​ವೆಲ್​ಗೆ ನೀರು ತರಲು ಹೋಗಿದ್ದ ಮಹಿಳೆ, ಕರೆಂಟ್​ ಬಾಕ್ಸ್​ನೊಳಗೆ ಸ್ವಿಚ್​ ಆನ್ ಮಾಡಲು ಕೈ ಹಾಕಿದ್ದಾರೆ. ಈ ವೇಳೆ ತಗುಲಿದ ವಿದ್ಯುತ್​ನಿಂದ ಸ್ಥಳದಲ್ಲೇ ಕುಸಿದ ಬಿದ್ದ ಆಕೆಯನ್ನು ಸ್ಥಳೀಯರು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರು. ಬದುಕುಳಿದ ಮಹಿಳೆಯನ್ನು ಶೃತಿ ಹಾಸಲಕರ್(30) ಎಂದು ಹೇಳಲಾಗಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ನಗರದಲ್ಲಿ ನಡೆದ ಘಟನೆ ಸಂಭವಿಸಿದ್ದು, ಮಹಿಳೆಗೆ ವಿದ್ಯುತ್ ಸ್ಪರ್ಷಿಸಿದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಸಾರ್ವಜನಿಕರು ಮಾನವೀಯತೆ ಮೆರೆದಿದ್ದಾರೆ.
50 ರೂ. ನೋಟ್ನಲ್ಲಿ ಅಡಗಿತ್ತು ಅಳಿಯನ ಕಣ್ಣೀರು! ದೇವರ ಹುಂಡಿಗೆ ಹಾಕುವ ಮುನ್ನ ಆತ ಬರೆದಿದ್ದಿಷ್ಟು…

ಐಪಿಎಲ್​ 10 ತಂಡಕ್ಕೂ ರೋಹಿತ್​ ಶರ್ಮಾನೇ ಕ್ಯಾಪ್ಟನ್​; ಸುರೇಶ್​ ರೈನಾ ಹೇಳಿಕೆಯ ಹಿಂದಿದೆ ಈ ಕಾರಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 3 =
Remember me
